ಖಾನಾಪುರ : ಮುಂಡವಾಡದಲ್ಲಿ ವ್ಯಕ್ತಿ ಮೇಲೆ ಕರಡಿ ದಾಳಿ

ಬೆಳಗಾವಿ : ಜಿಲ್ಲೆಯ ಖಾನಾಪುರ ತಾಲೂಕಿನ ಮುಂಡವಾಡ ಗೌಳಿವಾಡದ ರೈತರೊಬ್ಬರ ಮೇಲೆ ಭಾನುವಾರ ಜಮೀನಿಗೆ ತೆರಳುತ್ತಿದ್ದ ವೇಳೆ ಎರಡು ಕರಡಿಗಳು ದಾಳಿ ನಡೆಸಿ ಗಾಯಗೊಳಿಸಿರುವ ಘಟನೆ ವರದಿಯಾಗಿದೆ.
ವಿನೋದ ಜಾಧವ (46) ಎಂಬವರು ಭಾನುವಾರ ಬೆಳಗ್ಗಿನ ಹೊತ್ತು ಎಂದಿನಂತೆ ತಮ್ಮ ಜಮೀನಿಗೆ ಹೋಗುತ್ತಿದ್ದರು. ಆ ಸಂದರ್ಭದಲ್ಲಿ ಕರಡಿಗಳು ದಾಳಿ ಮಾಡಿವೆ ಎಂದು ಹೇಳಲಾಗಿದೆ. ಅವರು ಗಾಯಗೊಂಡ ಮಾಹಿತಿ ಸಿಕ್ಕಿದ ತಕ್ಷಣ ಕೂಡಲೇ ಗ್ರಾಮಸ್ಥರು ಶಾಸಕ ವಿಠಲ ಹಲಗೇಕರ, ಅವರ ಆಪ್ತ ರವಿ ಪಾಟೀಲ ಅವರಿಗೆ ವಿಷಯ ಮುಟ್ಟಿಸಿದ್ದಾರೆ. ರವಿ ಪಾಟೀಲ ಅವರು ಅಂಬುಲೆನ್ಸ್ ಗೆ ಕರೆ ಮಾಡಿ ಸ್ಥಳಕ್ಕೆ ಕಳಿಸಿದ್ದಾರೆ. ಬಳಿಕ ಗ್ರಾಮಸ್ಥರು ಗಾಯಗೊಂಡ ವಿನೋದ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಗಾಯಗೊಂಡಿರುವ ರೈತರಿಗೆ ಸೂಕ್ತ ಚಿಕಿತ್ಸೆ ಮತ್ತು ಪರಿಹಾರ ದೊರಕಿಸಿಕೊಡಲು ಪ್ರಯತ್ನ ಪ್ರಯತ್ನಿಸುವುದಾಗಿ ಶಾಸಕ ವಿಠಲ ಹಲಗೇಕರ ತಿಳಿಸಿದ್ದಾರೆ.

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement