ವೀಡಿಯೊ ..| ʼರಾಮಲೀಲಾʼ ಪ್ರದರ್ಶನದ ವೇಳೆ ಅಭಿನಯಿಸುತ್ತಿದ್ದಾಗಲೇ ಹೃದಯಾಘಾತದಿಂದ ರಾಮನ ಪಾತ್ರಧಾರಿ ಸಾವು

ನವದೆಹಲಿ : ರಾಮಲೀಲಾದಲ್ಲಿ ಪ್ರದರ್ಶನ ನೀಡುತ್ತಿದ್ದ ವ್ಯಕ್ತಿಯೊಬ್ಬರು ಹೃದಯಾಘಾತದಿಂದ ಸಾವಿಗೀಡಾಗಿದ್ದಾರೆ. ದೆಹಲಿಯ ಶಹದಾರದಲ್ಲಿರುವ ಜೈ ಶ್ರೀ ರಾಮಲೀಲಾ ವಿಶ್ವಕರ್ಮ ನಗರದಲ್ಲಿ ಕಾರ್ಯಕ್ರಮದ ವೇಳೆ ಈ ಘಟನೆ ನಡೆದಿದೆ. ಪೂರ್ವ ದೆಹಲಿಯ ನಿವಾಸಿ ಸುಶೀಲ ಕೌಶಿಕ (45) ಅವರು ರಾಮನ ಪಾತ್ರವನ್ನು ನಿರ್ವಹಿಸುತ್ತಿದ್ದಾಗ ಹೃದಯಾಘಾತಕ್ಕೆ ಒಳಗಾಗಿದ್ದಾರೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ.

ಚಿನ್ನ ಮತ್ತು ಬೆಳ್ಳಿ ಆಭರಣಗಳಂತೆ ಹೊಳೆಯುವ ಸುಂದರವಾದ ನಾಟಕದ ಉಡುಪಿನಲ್ಲಿದ್ದ ಸುಶೀಲ ಅವರು ದುರದೃಷ್ಟಕರ ಘಟನೆ ಸಂಭವಿಸಿದಾಗ ರಾಮನ ಅಭಿನಯವನ್ನು ಪ್ರದರ್ಶಿಸುತ್ತಿದ್ದರು. ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಲ್ಲಿ ವೀಡಿಯೋ ಕೂಡ ವೈರಲ್ ಆಗಿದೆ. ಮೃತ ವ್ಯಕ್ತಿಯನ್ನು ಸುಶೀಲ ಕೌಶಿಕ ವೃತ್ತಿಯಲ್ಲಿ ಪ್ರಾಪರ್ಟಿ ಡೀಲರ್ ಆಗಿದ್ದರು ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ವೀಡಿಯೊದಲ್ಲಿ ಕಂಡುಬಂದಂತೆ, ಅವರು ತಮ್ಮ ಬಲ ಮೊಣಕಾಲಿನ ಮೇಲೆ ಕುಳಿತು ಅಭಿನಯ ಮಾಡುತ್ತಿದ್ದರು. ಅವರು ಸಂಭಾಷಣೆ ಹೇಳುತ್ತಿದ್ದರು. ನಂತರ ಅವರು ಎದ್ದು ಎರಡು ಹೆಜ್ಜೆ ಹಾಕಿದರು. ನಂತರ ಇದ್ದಕ್ಕಿದ್ದಂತೆ ತೊಂದರೆ ಅನುಭವಿಸಿದರು. ನಂತರ ಅವರು ಎದೆಯ ಮೇಲೆ ಕೈಯಿಟ್ಟುಕೊಂಡು ಸ್ಟೇಜಿನ ಹಿಂಬದಿಗೆ ಧಾವಿಸಿದರು. ಪ್ರಜ್ಞೆ ತಪ್ಪಿದ ಅವರನ್ನು ಆನಂದ ವಿಹಾರದಲ್ಲಿರುವ ಕೈಲಾಶ ದೀಪಕ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅವರು ಹೃದಯಾಘಾತದಿಂದ ನಿಧನರಾದರು.

ಪ್ರಮುಖ ಸುದ್ದಿ :-   ಬಿಜೆಪಿಯ ಹಿರಿಯ ನಾಯಕ ಎಲ್.ಕೆ.ಅಡ್ವಾಣಿ ಆಸ್ಪತ್ರೆಗೆ ದಾಖಲು

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement