ಅರ್ಜಿ ಸಲ್ಲಿಸಿದ 48 ವರ್ಷಗಳ ನಂತರ ಉದ್ಯೋಗ ಪತ್ರ ಸ್ವೀಕರಿಸಿದ 70 ವರ್ಷದ ಮಹಿಳೆ…!

ಕೆಲಸಕ್ಕೆ ಅರ್ಜಿ ಸಲ್ಲಿಸಿದ ನಂತರ ಉತ್ತರಕ್ಕಾಗಿ ಕಾಯುವುದು ನಿಜವಾಗಿಯೂ ಹಿಂಸೆಯ ಕೆಲಸವಾಗಿದೆ. ಆದರೆ ಯುನೈಟೆಡ್‌ ಕಿಂಗ್ಡಂನಲ್ಲಿ 70 ವರ್ಷ ವಯಸ್ಸಿನ ಮಹಿಳೆಗೆ ಅವರ ಉದ್ಯೋಗ ಅರ್ಜಿಗೆ ಉತ್ತರ ಮಾತ್ರ ಅವರು ಅರ್ಜಿ ಸಲ್ಲಿಸಿದ ಸುಮಾರು 50 ವರ್ಷಗಳ ನಂತರ ಬಂದಿದೆ…!
ಲಿಂಕನ್‌ಶೈರ್‌ನ ನಿವಾಸಿ ಟಿಝಿ ಹಡ್ಸನ್ ಎಂಬ ಮಹಿಳೆ ಮೋಟಾರ್‌ಸೈಕಲ್ ಸ್ಟಂಟ್ ರೈಡರ್ ಆಗಬೇಕೆಂದು ಕನಸು ಕಂಡಿದ್ದರು ಮತ್ತು 1976 ರಲ್ಲಿ ಕೆಲಸಕ್ಕಾಗಿ ಅರ್ಜಿ ಸಲ್ಲಿಸಿ ಪತ್ರ ಬರೆದಿದ್ದರು. ದಶಕಗಳ ನಂತರ, ಮಹಿಳೆ ಬರೆದ ಪತ್ರವು ಡ್ರಾಯರ್‌ನ ಹಿಂದೆ ಅಂಟಿಕೊಂಡಿರುವುದನ್ನು ಪೋಸ್ಟ್ ಆಫೀಸ್ ಗಮನಿಸಿದ ನಂತರ ಪತ್ರವು ಅವರಿಗೆ ಹಿಂದಿರುಗಿದೆ.
ಇದು “ಸ್ಟೈನ್ಸ್ ಪೋಸ್ಟ್ ಆಫೀಸ್‌ನಿಂದ ತಡವಾಗಿ ವಿತರಣೆ. ಇದು ಡ್ರಾ ಹಿಂದೆ ಕಂಡುಬಂದಿದೆ. ಕೇವಲ 50 ವರ್ಷ ತಡವಾಗಿದೆ ಎಂದು ಕೈಬರಹದ ಟಿಪ್ಪಣಿಯೊಂದಿಗೆ ಈ ಪತ್ರ ಬಂದಿದೆ.

48 ವರ್ಷಗಳ ನಂತರ ತಮ್ಮ ಪತ್ರವನ್ನು ನೋಡಿ ಆಘಾತಕ್ಕೊಳಗಾದ ಮಹಿಳೆ, ಅದು ಹಿಂದಿರುಗಿದ್ದು “ಅದ್ಭುತ” ಎಂದು ಹೇಳಿದ್ದಾರೆ. “ನಾನು ಕೆಲಸದ ಬಗ್ಗೆ ಉತ್ತರ ಬಂದಿಲ್ಲ ಎಂದು ನಾನು ಯಾವಾಗಲೂ ಆಶ್ಚರ್ಯ ಪಡುತ್ತಿದ್ದೆ. ಈಗ ನನಗೆ ಏಕೆ ಎಂದು ತಿಳಿದಿದೆ” ಎಂದು ಅವರು ಬಿಬಿಸಿಗೆ ತಿಳಿಸಿದ್ದಾರೆ.
ಟಿಝಿ ಹಡ್ಸನ್ ಅವರು ಸ್ನೇಕ್ ಹ್ಯಾಂಡ್ಲರ್, ಹಾರ್ಸ್‌ ವಿಸ್ಪರರ್‌, ಏರೋಬ್ಯಾಟಿಕ್ ಪೈಲಟ್ ಮತ್ತು ಫ್ಲೈಲಿಂಗ್‌ ಇನ್ಸ್ಟ್ರಕ್ಟರ್‌ ಆಗಿ ಪ್ರಪಂಚದಾದ್ಯಂತ ಪ್ರಯಾಣಿಸುವ ವೃತ್ತಿಜೀವನ ನಿರ್ವಹಿಸಿದ್ದಾರೆ.

‘ಪ್ರತಿದಿನ ನಾನು ಉತ್ತರಕ್ಕಾಗಿ ನೋಡುತ್ತಿದ್ದೆ ಎಂದು ಅವರು ಹೇಳಿದ್ದಾರೆ. ಇದು ಸುಮಾರು ಅರ್ಧ ಶತಮಾನದ ಹಿಂದೆ ಬರೆದ ಪತ್ರವಾಗಿದ್ದರೂ ಸಹ, ಉದ್ಯೋಗಕ್ಕಾಗಿ ಬರೆದ ಅರ್ಜಿ ಪತ್ರವನ್ನು ಬರೆದ ದಿನ ಸ್ಪಷ್ಟವಾಗಿ ನೆನಪಿದೆ ಎಂದು ಟಿಝಿ ಹಡ್ಸನ್ ಹೇಳುತ್ತಾರೆ.
“ಲಂಡನ್‌ನಲ್ಲಿರುವ ನನ್ನ ಫ್ಲಾಟ್‌ನಲ್ಲಿ ಪತ್ರವನ್ನು ಟೈಪ್ ಮಾಡುತ್ತಿರುವುದು ನನಗೆ ಸ್ಪಷ್ಟವಾಗಿ ನೆನಪಿದೆ. ಪ್ರತಿದಿನ ನಾನು ನನ್ನ ಪೋಸ್ಟ್‌ಗಾಗಿ ಹುಡುಕುತ್ತಿದ್ದೆ ಆದರೆ ಅಲ್ಲಿ ಏನೂ ಇರುತ್ತಿರಲಿಲ್ಲ ಮತ್ತು ನಾನು ತುಂಬಾ ನಿರಾಶೆಗೊಂಡಿದ್ದೆ. ಏಕೆಂದರೆ ನಾನು ನಿಜವಾಗಿಯೂ ಮೋಟಾರ್‌ಸೈಕಲ್‌ನಲ್ಲಿ ಸ್ಟಂಟ್ ರೈಡರ್ ಆಗಲು ಬಯಸುತ್ತಿದ್ದೆ ಎಂದು ಮಹಿಳೆ ಬಿಬಿಸಿಗೆ ತಿಳಿಸಿದ್ದಾರೆ.

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement