ವಿವಾದಿತ ಇಸ್ಲಾಮಿಕ್ ಬೋಧಕ ಝಾಕಿರ್ ನಾಯ್ಕ್ ಅವರು ತಮ್ಮ ಪಾಕಿಸ್ತಾನದ ಭೇಟಿಯ ಸಮಯದಲ್ಲಿ ಅವರು ಆ ದೇಶಕ್ಕೆ ಪ್ರಯಾಣಿಸುತ್ತಿದ್ದಾಗ ಹೆಚ್ಚುವರಿ ಸಾಮಾನು ಸರಂಜಾಮುಗಳ ಮೇಲೆ ವಿಧಿಸಿದ್ದ ಶುಲ್ಕ ಮನ್ನಾ ಮಾಡಲು ಪಾಕಿಸ್ತಾನದ ಸರ್ಕಾರಿ ಏರ್ಲೈನ್ಸ್ ನಿರಾಕರಿಸಿದ್ದಕ್ಕೆ ಗರಂ ಆಗಿದ್ದಾರೆ.
ಪಾಕಿಸ್ತಾನ್ ಇಂಟರ್ನ್ಯಾಶನಲ್ ಏರ್ಲೈನ್ಸ್ (ಪಿಐಎ) ತನ್ನ ಹೆಚ್ಚುವರಿ ಸಾಮಾ-ಸರಂಜಾಮುಗಳಿಗೆ ವಿಧಿಸಿಲಾಗಿದ್ದ ಶುಲ್ಕದಲ್ಲಿ ಶೇಕಡಾ 50 ರಷ್ಟು ರಿಯಾಯಿತಿ ನೀಡಿತು ಎಂದು ಅವರೇ ಹೇಳಿದ್ದಾರೆ. ಆದರೆ ರಿಯಾಯಿತಿ ಕೊಡಿವಿದಾದರೆ ಸಂಪೂರ್ಣವಾಗಿ ಕೊಡಿ, ಇಲ್ಲಿದ್ದರೆ ಬೇಡ ಎಂದು ತಾನೇ ನಿರಾಕರಿಸಿದ್ದೇನೆ ಎಂದು ಅವರು ಹೇಳಿಕೊಂಡಿದ್ದಾರೆ.
ವೈರಲ್ ಆದ ವೀಡಿಯೊವೊಂದರಲ್ಲಿ, ಝಾಕೀರ್ ನಾಯ್ಕ್ ಅವರು ಭಾರತ ಮತ್ತು ಮುಸ್ಲಿಂ-ಬಹುಸಂಖ್ಯಾತ ರಾಷ್ಟ್ರವಾದ ಪಾಕಿಸ್ತಾನದ ನಡುವಿನ ವ್ಯತ್ಯಾಸವನ್ನು ಎತ್ತಿ ತೋರಿಸಿದ್ದಾರೆ. ಹಿಂದೂ ಅಧಿಕಾರಿಯೂ ಸಹ ತನಗೆ ಸಾಮಾನು-ಸಂಜಾಮುಗಳನ್ನು ಉಚಿತವಾಗಿ ಸಾಗಿಸಲು ಅನುಮತಿಸುತ್ತಾರೆ. ಆದರೆ ಮುಸ್ಲಿಂ-ಬಹುಸಂಖ್ಯಾತ ರಾಷ್ಟ್ರವಾದ ಪಾಕಿಸ್ತಾನದಲ್ಲಿ ತನಗೆಶುಲ್ಕ ವಿಧಿಸಲಾಗಿದೆ ಎಂದು ಹೇಳಿದ್ದಾರೆ
ನಾನು ಪಿಐಎ ಸಿಇಒ ಜೊತೆ ಮಾತನಾಡಿದೆ. ಡಾಕ್ಟರ್ ಝಾಕೀರ್ ನಾಯ್ಕ್ ಅವರಿಗಾಗಿ ನಾವು ಏನು ಬೇಕಾದರೂ ಮಾಡಬಹುದು ಎಂದರು. ನಾವು ಆರು ಮಂದಿ ಪ್ರಯಾಣಿಸುತ್ತಿದ್ದೆವು: ನಮ್ಮಲ್ಲಿ 500 ಅಥವಾ 600 ಕೆಜಿ ಹೆಚ್ಚುವರಿ ಲಗೇಜ್ ಇದೆ ಎಂದು ನಾನು ಹೇಳಿದೆ. ಹೆಚ್ಚುವರಿ ಲಗೇಜಿಗೆ ವಿಧಿಸಲಾಗಿರುವ ಶುಲ್ಕದಲ್ಲಿ ಶೇ.50ರಷ್ಟು ರಿಯಾಯಿತಿ ನೀಡುತ್ತೇವೆ ಎಂದರು. ಆಗ ನಾನು ಹೇಳಿದೆ, ನೀವು ನೀಡಬೇಕಾದರೆ 100 ಪರ್ಸೆಂಟ್ ಡಿಸ್ಕೌಂಟ್ ಕೊಡಿ, ಇಲ್ಲದಿದ್ದರೆ ಅದನ್ನು ಮರೆತುಬಿಡಿ. ಭಾರತದಲ್ಲಿ ಯಾರಾದರೂ ನನ್ನನ್ನು ಕಂಡರೆ, ಮುಸ್ಲಿಮೇತರರೂ ನನ್ನನ್ನು ಉಚಿತವಾಗಿ ಒಳಗೆ ಬಿಡುತ್ತಾರೆ. ಇದು ಭಾರತ” ಎಂದು ಹೇಳಿದ್ದಾರೆ.
ಪಾಕಿಸ್ತಾನದ ವ್ಯವಹಾರಗಳ ಬಗ್ಗೆ ಮಾತನಾಡುವಾಗ, “ನನ್ನ ವೀಸಾ , ನಾನು ಸರ್ಕಾರಿ ಅತಿಥಿ ಎಂದು ಹೇಳುತ್ತದೆ ಮತ್ತು ಪಿಐಎ (PIA) ಯ ಸಿಇಒ (CEO) ನಾವು ನಿಮಗೆ (ಝಾಕಿರ್) 50 ಪ್ರತಿಶತ ರಿಯಾಯಿತಿಯನ್ನು ನೀಡುತ್ತೇವೆ ಎಂದು ಹೇಳುತ್ತಾರೆ. ಅವರು ತುಂಬಾ ಶುಲ್ಕ ವಿಧಿಸುತ್ತಿದ್ದಾರೆ, ನನಗೆ ತುಂಬಾ ಬೇಸರವಾಯಿತು. ನಿಮ್ಮ ರಿಯಾಯಿತಿ ನನಗೆ ಬೇಡ ಎಂದು ಅವರು ಹೇಳಿರುವುದನ್ನು ವೀಡಿಯೊದಲ್ಲಿ ಕೇಳಬಹುದು.
ನಿಮ್ಮ ಕಾಮೆಂಟ್ ಬರೆಯಿರಿ