ಜೆರುಸಲೇಂ: ಆಕ್ರಮಿತ ಪಶ್ಚಿಮ ದಂಡೆ (West Bank)ಯಲ್ಲಿರುವ ನೂರ್ ಶಮ್ಸ್ ನಿರಾಶ್ರಿತರ ಶಿಬಿರದಲ್ಲಿ ಇರಾನ್ ಬೆಂಬಲಿತ ಪ್ಯಾಲೆಸ್ತೀನ್ ಉಗ್ರಗಾಮಿ ಸಂಘಟನೆ ಇಸ್ಲಾಮಿಕ್ ಜಿಹಾದ್(Islamic Jihad)ನ ಉನ್ನತ ಕಮಾಂಡರ್ ನನ್ನು ನಿರ್ಮೂಲನೆ ಮಾಡಿರುವುದಾಗಿ ಇಸ್ರೇಲ್ ಸೇನೆ ಶುಕ್ರವಾರ ಪ್ರಕಟಿಸಿದೆ.
ಗುರುವಾರ (ಅಕ್ಟೋಬರ್ 10) ನಡೆದ ವೈಮಾನಿಕ ದಾಳಿಯ ಸಮಯದಲ್ಲಿ ನೂರ್ ಶಾಮ್ಸ್‌ನಲ್ಲಿನ ಪ್ಯಾಲೆಸ್ತೀನ್ ಇಸ್ಲಾಮಿಕ್ ಜಿಹಾದ್ (ಪಿಐಎಲ್) ಭಯೋತ್ಪಾದಕ ಗುಂಪಿನ ಮುಖ್ಯಸ್ಥ ಮೊಹಮ್ಮದ್ ಅಬ್ದುಲ್ಲಾ ನನ್ನು ಸೆಂಟ್ರಲ್ ವೆಸ್ಟ್ ಬ್ಯಾಂಕ್‌ನಲ್ಲಿ ಕೊಲ್ಲಲಾಯಿತು ಎಂದು ಇಸ್ರೇಲ್ ರಕ್ಷಣಾ ಪಡೆ (ಐಡಿಎಫ್) ತಿಳಿಸಿದೆ.
ಜೆರುಸಲೆಮ್ ಪೋಸ್ಟ್‌ನ ವರದಿಯ ಪ್ರಕಾರ, ಗುರುವಾರ ಐಡಿಎಫ್ (IDF) ಮತ್ತು ಶಿನ್ ಬೆಟ್ ನಡುವಿನ ಜಂಟಿ ಕಾರ್ಯಾಚರಣೆಯನ್ನು ಇಸ್ರೇಲ್ ಏರ್ ಫೋರ್ಸ್ (IAF) ವಿಮಾನವು ಅಬ್ದುಲ್ಲಾನನ್ನು ಹೊಡೆದುರುಳಿಸಿದೆ. ಇಸ್ಲಾಮಿಕ್ ಜಿಹಾದ್ ಹಮಾಸ್‌ನ ಮಿತ್ರ ಸಂಘಟನೆಯಾಗಿದ್ದು, ಎರಡೂ ಭಯೋತ್ಪಾದಕ ಗುಂಪುಗಳು ಪಶ್ಚಿಮ ದಂಡೆ ಮತ್ತು ಗಾಜಾ ಪಟ್ಟಿಯಲ್ಲಿ ಇಸ್ರೇಲಿ ಪಡೆಗಳೊಂದಿಗೆ ಹೋರಾಡುತ್ತಿವೆ.
ವೈಮಾನಿಕ ದಾಳಿಯಲ್ಲಿ ಎರಡನೇ ಭಯೋತ್ಪಾದಕ ಪ್ರಮುಖನ್ನು ಸಹ ಕೊಲ್ಲಲಾಗಿದೆ ಎಂದು ಇಸ್ರೇಲಿ ಪಡೆಗಳು ಹೇಳಿವೆ. ಆದರೆ ಯಾರೆಂದು ಹೆಸರಿಸಿಲ್ಲ. ಇನ್ನಷ್ಟು ಉಗ್ರರನ್ನೂ ಹೊಡೆದುರುಳಿಸಲಾಗಿದೆ’ ಎಂದು ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ.
ಪಿಐಎಲ್ ಮುಖ್ಯಸ್ಥ ಮೊಹಮ್ಮದ್ ಅಬ್ದುಲ್ಲಾ ಯಾರು…?
ಆಗಸ್ಟ್‌ನಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ಅಬು ಶುಜಾ ಎಂದು ಕರೆಯಲ್ಪಡುತ್ತಿದ್ದ ಮುಹಮ್ಮದ್ ಜಬ್ಬರ್ ಕೊಲ್ಲಲ್ಪಟ್ಟ ನಂತರ ಅಬ್ದುಲ್ಲಾ ನನ್ನು ತುಲ್ಕರೆಮ್-ಏರಿಯಾ ಕ್ಯಾಂಪ್‌ನಲ್ಲಿ ಪಿಐಎಲ್ ಮುಖ್ಯಸ್ಥರನ್ನಾಗಿ ಮಾಡಲಾಯಿತು. ಮುಹಮ್ಮದ್ ಜಬ್ಬರ್ ಆಗಸ್ಟ್ 29ರಂದು ಹತ್ಯೆಯಾಗಿದ್ದ.
“ಅನೇಕ ದಾಳಿಗಳು” ಸೇರಿದಂತೆ ಗುಂಪಿನ ಚಟುವಟಿಕೆಗಳನ್ನು ಸಂಘಟಿಸಲು ಅಬ್ದುಲ್ಲಾ ಹೊಣೆಗಾರನಾಗಿದ್ದಾನೆ ಎಂದು ಐಡಿಎಫ್ (IDF) ಹೇಳಿದೆ.
ತಮ್ಮ ವಿರುದ್ಧ ಸ್ಫೋಟಕಗಳನ್ನು ನಿಯೋಜಿಸಿಸುತ್ತಿದ್ದ ಎಂದು ಇಸ್ರೇಲ್ ಪಡೆಗಳು ಆರೋಪಿಸಿವೆ.
ಗುರುವಾರ ಐಡಿಎಫ್‌ನಿಂದ ನಿರ್ಮೂಲನೆಗೊಂಡ ಇಬ್ಬರು ಭಯೋತ್ಪಾದಕರು M-16 ರೈಫಲ್‌ಗಳು, ನಡುವಂಗಿಗಳು ಮತ್ತು ವಾಹನಗಳೊಂದಿಗೆ ಪತ್ತೆಯಾಗಿದ್ದರು, ಈಗ ಇವೆಲ್ಲವನ್ನೂ ಈ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ ಇಸ್ರೇಲಿ ಪಡೆಗಳು ವಶಪಡಿಸಿಕೊಂಡಿವೆ.
ನಿಮ್ಮ ಕಾಮೆಂಟ್ ಬರೆಯಿರಿ