ಸಿದ್ದಾಪುರ: ಉತ್ತರ ಜಿಲ್ಲೆಯ ಸಿದ್ದಾಪುರ ತಾಲೂಕಿನ ಮುಸೆಗಾರ ಎಂಬ ಗ್ರಾಮದ ಮನೆಯೊಂದರ ಅಂಗಳದಲ್ಲಿ ಕರಿ ಚಿರತೆ ಕಾಣಿಸಿಕೊಂಡಿದೆ.
ಸಿದ್ದಾಪುರ ತಾಲೂಕಿನ ಮುಸೆಗಾರಎಂಬ ಗ್ರಾಮದ ಮನೆಯೊಂದರ ಅಂಗಳಲದಲ್ಲಿ ಈ ಕಪ್ಪು ಚಿರತೆ ಕಾಣಿಸಿಕೊಂಡಿದ್ದು, ಈ ಹಿಂದೆಯೂ ಎರಡು ಕಾಣಿಸಿಕೊಂಡಿತ್ತು ಹಾಗೂ ಪ್ರತಿ ಬಾರಿ ಕಾಣಿಸಿಕೊಂಡಾಗಲೂ ನಾಯಿಯನ್ನು ಹೊತ್ತೊಯ್ದಿತ್ತು ಎಂದು ಹೇಳಲಾಗಿದೆ.
ನಾಯಿ ರುಚಿ ಕಂಡಿರುವ ಚಿರತೆ ಸುಲಭ ಬೇಟೆಗಾಗಿ ನಾಯಿಯನ್ನು ಹುಡುಕಿಕೊಂಡು ಮತ್ತೆ ಬಂದಿದೆ. ಶನಿವಾರ ರಾತ್ರಿ 10:30 ಗಂಟೆ ಹೊತ್ತಿಗೆ ಮನೆಯ ಅಂಗಳಕ್ಕೆ ಬಂದ ಕಪ್ಪು ಚಿರತೆ ನಾಯಿಗಾಗಿ ಹುಡುಕಾಟ ನಡೆಸಿದೆ. ಈ ದೃಶ್ಯ ಮನೆಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಗ್ರಾಮಕ್ಕೆ ಅದರಲ್ಲಿಯೂ ವಿಶೇಷವಾಗಿ ಮನೆಯ ಅಂಗಳಕ್ಕೆ ಪದೇಪದೇ ಚಿರತೆ ಬರುವುದರಿಂದ ಮನೆಯವರು ಹಾಗೂ ಗ್ರಾಮಸ್ಥರು ಕಂಗಾಲಾಗಿದ್ದಾರೆ.
ಈ ಬಗ್ಗೆ ಅರಣ್ಯ ಇಲಾಖೆ ಗಂಭೀರವಾಗಿ ಪರಿಗಣಿಸಬೇಕು. ಗ್ರಾಮಕ್ಕೆ ನುಗ್ಗಿ ಬರುವ ಚಿರತೆ ಸೆರೆ ಹಿಡಿದು ಇಲ್ಲಿಂದ ಸ್ಥಳಾಂತರಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಪಶ್ಚಿಮ ಘಟ್ಟದ ಪ್ರದೇಶಗಳಲ್ಲಿ ಅಪರೂಪದ ಈ ಕಪ್ಪು ಚಿರತೆಗಳು ಆಗಾಗ ಕಾಣಿಸಿಕೊಳ್ಳುತ್ತವೆ. ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ, ಶಿರಸಿ, ಸುತ್ತಮುತ್ತಲಿನ ಪ್ರದೇಶಗಳಲ್ಲಿ ಇವು ಹೆಚ್ಚಾಗಿ ಕಾಣಿಸಿಕೊಂಡಿವೆ.
ನಿಮ್ಮ ಕಾಮೆಂಟ್ ಬರೆಯಿರಿ