‘ಬೇಯಿಸಿದ ಶಿಶುಗಳನ್ನು ತಿನ್ನಿಸಿದರು…ಅತ್ಯಾಚಾರ ಮಾಡಿದರು’: ಐಸಿಸ್‌ ಭಯಾನಕ ಕ್ರೌರ್ಯದ ಬಗ್ಗೆ ಬಿಚ್ಚಿಟ್ಟ ಗಾಜಾದಿಂದ ಪಾರಾಗಿಬಂದ ಒತ್ತೆಯಾಳು…!

ಇಸ್ರೇಲಿ ರಕ್ಷಣಾ ಪಡೆ (IDF) ಮತ್ತು ಅಮೆರಿಕ ರಾಯಭಾರ ಕಚೇರಿಯಿಂದ ಗಾಜಾದಲ್ಲಿ ರಕ್ಷಿಸಲ್ಪಟ್ಟ ಯಾಜಿದಿ ಮಹಿಳೆ ಫೌಜಿಯಾ ಅಮೀನ್ ಸಿಡೊ ಅವರು ಇಸ್ಲಾಮಿಕ್ ಸ್ಟೇಟ್ (ISIS) ಭಯೋತ್ಪಾದನೆ ಸಂಘಟನೆ ಬಗ್ಗೆ ಭಯಾನಕ ಸಂಗತಿಗಳನ್ನು ಬಿಚ್ಚಿಟ್ಟಿದ್ದಾರೆ.
ಇಸ್ಲಾಮಿಕ್ ಸ್ಟೇಟ್ ಭಯೋತ್ಪಾದಕರು ತನ್ನನ್ನು ಇತರ ಯಾಜಿದಿಗಳೊಂದಿಗೆ ಅಪಹರಿಸಿದ ನಂತರ ಅವರು ತಮಗೆ ಯಾಜಿದಿ ಸಮುದಾಯದ ಶಿಶುಗಳ ಮಾಂಸವನ್ನು ತಿನ್ನಿಸಿದರು ಎಂಬ ಭಯಾನಕ ಸಂಗತಿಗಳನ್ನು ಬ್ರಿಟಿಷ್ ಸಾಕ್ಷ್ಯಚಿತ್ರ ನಿರ್ಮಾಪಕರ ಮುಂದೆ ಹೇಳಿದ್ದಾರೆ.
ಬ್ರಿಟಿಷ್ ಪಡೆಗಳಲ್ಲಿ ಸೇವೆ ಸಲ್ಲಿಸಿದ ಮತ್ತು ಇರಾಕಿ ಕುರ್ದಿಗಳ ಸ್ವಯಂಸೇವಕರಾಗಿದ್ದ ಸಾಕ್ಷ್ಯಚಿತ್ರ ನಿರ್ಮಾಪಕ ಅಲನ್ ಡಂಕನ್ ಅವರೊಂದಿಗೆ ಮಾತನಾಡಿದ ಫೌಜಿಯಾ ಅವರು, ತನ್ನ 11ನೇ ವಯಸ್ಸಿನಲ್ಲಿ ತನ್ನ ಯುವ ಸಹೋದರರೊಂದಿಗೆ ಐಸಿಸ್‌ನಿಂದ ಅಪಹರಿಸಲ್ಪಟ್ಟ ಬಗ್ಗೆ ಹೇಳಿದ್ದಾರೆ.

2014 ರಿಂದ, ಸಾಮೂಹಿಕ ಹತ್ಯೆಗಳು, ಲೈಂಗಿಕ ಗುಲಾಮಗಿರಿ, ಬಲವಂತದ ಮತಾಂತರ ಮತ್ತು ಸ್ಥಳಾಂತರದ ಮೂಲಕ ಐಸಿಸ್‌ (ISIS) ವ್ಯವಸ್ಥಿತವಾಗಿ ಇರಾಕ್‌ನಲ್ಲಿ ಯಾಜಿದಿ ಸಮುದಾಯದ ಮೇಲೆ ಬರ್ಬತೆಯನ್ನು ಪ್ರದರ್ಶಿಸಿದೆ. ಸಾವಿರಾರು ಯಾಜಿದಿಗಳು ಕೊಲ್ಲಲ್ಪಟ್ಟರು ಮತ್ತು ಅನೇಕ ಮಹಿಳೆಯರು ಮತ್ತು ಮಕ್ಕಳನ್ನು ಅಪಹರಿಸಲಾಯಿತು ಎಂದು ರಕ್ಷಿಸಲ್ಪಟ್ಟ ಯಾಜಿದಿ ಮಹಿಳೆ ಫೌಜಿಯಾ ಅಮೀನ್ ಸಿಡೊ ಹೇಳಿದ್ದಾರೆ.
ಫೌಜಿಯಾ ಅವರು ಇರಾಕ್ ಮತ್ತು ಸಿರಿಯಾದಲ್ಲಿ ಹೆಚ್ಚಾಗಿ ಕಂಡುಬರುವ ಈ ಪುರಾತನ ಧಾರ್ಮಿಕ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಐಸಿಸ್‌ 5,000 ಕ್ಕೂ ಯಾಜಿದಿ ಸಮುದಾಯದವರನ್ನು ಕೊಂದಿದೆ ಮತ್ತು 2014 ರಲ್ಲಿ ಐಸಿಸ್ ಅಭಿಯಾನದಲ್ಲಿ ಸಾವಿರಾರು ಜನರನ್ನು ಅಪಹರಿಸಲಾಯಿತು, ಇದು ನರಮೇಧ ನಡೆಸಿದೆ ಎಂದು ವಿಶ್ವಸಂಸ್ಥೆ ಹೇಳಿದೆ.

“ಅವರು ನಮಗೆ ಆಹಾರವನ್ನು ಕೊಡುವುದಾಗಿ ಹೇಳಿದರು. ಅನ್ನ ಮಾಡಿ ಅದರೊಂದಿಗೆ ತಿನ್ನಲು ಮಾಂಸವನ್ನು ಕೊಟ್ಟರು. ನಮಗೆ ತುಂಬಾ ಹಸಿದಿದ್ದರಿಂದ ನಾವು ಮೇಜಿನ ಮೇಲಿದ್ದಿದ್ದನ್ನು ತಿಂದೆವು, ನಾವು ತಿನ್ನುವಾಗ ರುಚಿ ವಿಚಿತ್ರವಾಗಿತ್ತು. ಆದರೆ ಹಸಿದಿದ್ದರಿಂದ ನಾವು ತಿಂದೆವು. ನಂತರ, ನಮಗೆಲ್ಲರಿಗೂ ಹೊಟ್ಟೆ ನೋವು ಕಾಣಿಸಿಕೊಂಡಿತು ಮತ್ತು ಅನಾರೋಗ್ಯದ ಅನುಭವವಾಯಿತು. ನಮ್ಮಲ್ಲಿ ಕೆಲವರಿಗೆ ಹೊಟ್ಟೆ ನೋವು ಕಾಣಿಸಿಕೊಂಡಿತು ”ಎಂದು ಫೌಜಿಯಾ ಚಲನಚಿತ್ರ ನಿರ್ಮಾಪಕರಿಗೆ ಹೇಳಿದರು ಎಂದು ಸನ್ ಮತ್ತು ಜೆರುಸಲೆಮ್ ಪೋಸ್ಟ್ ಉಲ್ಲೇಖಿಸಿದೆ.
“ನಾವು ಊಟ ಮುಗಿಸಿದ ನಂತರ, ಇದು ಯಾಜಿದಿ ಶಿಶುಗಳ ಮಾಂಸ ಎಂದು ಅವರು ನಮಗೆ ಹೇಳಿದರು. ಅವರು ನಮಗೆ ಶಿರಚ್ಛೇದ ಮಾಡಿದ ಯಾಜಿದಿ ಶಿಶುಗಳ ಚಿತ್ರಗಳನ್ನು ತೋರಿಸಿದರು. ಮತ್ತು ‘ಇವರೇ ನೀವು ಈಗ ತಿಂದಿರುವ ಮಕ್ಕಳು ಎಂದು ತಿಳಿಸಿದರು. ಒಬ್ಬ ಮಹಿಳೆ ಹೃದಯಾಘಾತಕ್ಕೊಳಗಾದರು ಮತ್ತು ಸ್ವಲ್ಪ ಸಮಯದ ನಂತರ ಮಹಿಳೆ ನಿಧನರಾದರು. ಈ ಮಕ್ಕಳ ತಾಯಂದಿರೂ ಅಲ್ಲಿದ್ದರು. ಒಬ್ಬ ತಾಯಿ ತನ್ನ ಮಗುವನ್ನು ಅದರ ಕೈಗಳಿಂದ ಗುರುತಿಸಿದಳು ಎಂದು ಫೌಜಿಯಾ ಅಮೀನ್ ಸಿಡೊ ಐಸಿಸ್‌ನ ಭಯಾನಕ ಕೃತ್ಯದ ಬಗ್ಗೆ ಹೇಳಿದರು.

200 ಇತರ ಯಾಜಿದಿ ಮಹಿಳೆಯರು ಮತ್ತು ಮಕ್ಕಳೊಂದಿಗೆ ಆಕೆಯನ್ನು ಒಂಬತ್ತು ತಿಂಗಳ ಕಾಲ ಭೂಗತ ಜೈಲಿನಲ್ಲಿ ಬಂಧಿಸಿಡಲಾಗಿತ್ತು. ಕೆಲವು ಮಕ್ಕಳು ಕಲುಷಿತ ನೀರು ಕುಡಿದು ಸಾವಿಗೀಡಾಗಿದ್ದಾರೆ. ಸಿಡೋವನ್ನು ಅಬು ಅಮರ್ ಅಲ್-ಮಕ್ಡಿಸಿ ಸೇರಿದಂತೆ ಅನೇಕ ಜಿಹಾದಿ ಹೋರಾಟಗಾರರಿಗೆ ಮಾರಾಟ ಮಾಡಲಾಯಿತು. ಅವರೊಂದಿಗೆ ಆಕೆಗೆ ಇಬ್ಬರು ಮಕ್ಕಳು ಜನಿಸಿದ್ದಾರೆ.
ವರ್ಷಗಳ ಬಂಧನದ ನಂತರ, ಅಮೆರಿಕ ರಾಯಭಾರ ಕಚೇರಿಯೊಂದಿಗೆ ಜಂಟಿ ಕಾರ್ಯಾಚರಣೆಯಲ್ಲಿ ಇಸ್ರೇಲಿ ಸೇನೆಯಿಂದ ರಕ್ಷಿಸಲ್ಪಟ್ಟಳು ಆದಾಗ್ಯೂ, ಆಕೆಯ ಮಕ್ಕಳು ಗಾಜಾದಲ್ಲಿ ಆಕೆಯ ಸೆರೆಯಲ್ಲಿಟ್ಟ ಕುಟುಂಬದೊಂದಿಗೆ ಉಳಿದುಕೊಂಡಿದ್ದಾರೆ, ಅಲ್ಲಿ ಅವರನ್ನು ಅರಬ್ ಮುಸ್ಲಿಮರಂತೆ ಬೆಳೆಸಲಾಗುತ್ತಿದೆ ಎಂದು ಆಕೆ ಹೇಳಿದ್ದಾರೆ.
“ನಾನು ಇರಾಕ್‌ಗೆ ಹಿಂತಿರುಗುವವರೆಗೂ, ನಾನು ಸಾರ್ವಕಾಲಿಕ ‘ಸಬಾಯಾ’ ಆಗಿ ಗಾಜಾದಲ್ಲಿಯೂ ಇದ್ದೆ (ಯುವತಿಯನ್ನು ಸೆರೆಯಲ್ಲಿಟ್ಟು ಲೈಂಗಿಕವಾಗಿ ಬಳಸಿಕೊಳ್ಳುವ ಅರೇಬಿಕ್ ಪದ) ಎಂದು ಫೌಜಿಯಾ ಅಮೀನ್ ಸಿಡೊ ಹೇಳಿದರು.

ಫೌಜಿಯಾ ಅವರನ್ನು ಉತ್ತರ ಇರಾಕಿನ ಸಿಂಜಾರ್ ಪ್ರದೇಶದಲ್ಲಿರುವ ಅವರ ಕುಟುಂಬಕ್ಕೆ ಮರಳಿಸಲಾಗಿದೆ. ಸಮ್ಮಿಶ್ರ ಪಡೆಗಳು ಸುದೀರ್ಘ ಯುದ್ಧಗಳಲ್ಲಿ ಐಸಿಸ್‌ನವರನ್ನು ಸೋಲಿಸುವವರೆಗೆ ಸಿಂಜಾರ್ ಮತ್ತು ಉತ್ತರ ಇರಾಕ್‌ನ ಅನೇಕ ಪ್ರದೇಶಗಳು ಐಸಿಸ್‌ (ISIS) ನಿಯಂತ್ರಣದಲ್ಲಿದ್ದವು. ಆದಾಗ್ಯೂ, ಐಸಿಸ್‌ (ISIS) ದುರ್ಬಲವಾಗಿದ್ದರೂ, ಪಶ್ಚಿಮ ಏಷ್ಯಾ ಮತ್ತು ಆಫ್ರಿಕಾದ ಕೆಲವು ಭಾಗಗಳಲ್ಲಿ ಇನ್ನೂ ಸಕ್ರಿಯವಾಗಿದೆ.
2014 ರಲ್ಲಿ ಇರಾಕ್‌ನ ಸಿಂಜಾರ್ ಪ್ರದೇಶದಿಂದ ಇಸ್ಲಾಮಿಕ್ ಸ್ಟೇಟ್ ಉಗ್ರಗಾಮಿಗಳಿಂದ 10,000 ಕ್ಕೂ ಹೆಚ್ಚು ಯಾಜಿದಿಗಳನ್ನು ಸೆರೆಹಿಡಿಯಲಾಯಿತು, ಅನೇಕರನ್ನು ಲೈಂಗಿಕ ಗುಲಾಮಗಿರಿಗೆ ಮಾರಾಟ ಮಾಡಲಾಯಿತು ಅಥವಾ ಬಾಲ ಸೈನಿಕರಾಗಿ ತರಬೇತಿ ನೀಡಲಾಗುತ್ತಿದೆ ಮತ್ತು ಅವರನ್ನು ಟರ್ಕಿ ಮತ್ತು ಸಿರಿಯಾ ಗಡಿಯುದ್ದಕ್ಕೂ ಕರೆದೊಯ್ಯಲಾಯಿತು.
ವರ್ಷಗಳಲ್ಲಿ, ಇರಾಕಿನ ಅಧಿಕಾರಿಗಳ ಪ್ರಕಾರ, 3,500 ಕ್ಕೂ ಹೆಚ್ಚು ಜನರನ್ನು ರಕ್ಷಿಸಲಾಗಿದೆ ಅಥವಾ ಬಿಡುಗಡೆ ಮಾಡಲಾಗಿದೆ. 2,600 ಜನರು ಇನ್ನೂ ನಾಪತ್ತೆಯಾಗಿದ್ದಾರೆ.
ಅನೇಕರು ಸತ್ತಿರುವ ಭಯವಿದೆ ಆದರೆ ನೂರಾರು ಜನರು ಇನ್ನೂ ಜೀವಂತವಾಗಿದ್ದಾರೆ ಎಂದು ಯಾಜಿದಿ ಕಾರ್ಯಕರ್ತರು ಹೇಳುತ್ತಾರೆ.

5 / 5. 3

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement