ಚಾಮರಾಜನಗರ: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಿಂದ ಹಾದು ತಮಿಳುನಾಡಿಗೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಆನೆಗಳ ದಾಳಿಯಿಂದ ದ್ವಿಚಕ್ರವಾಹನ ಸವಾರ ಸ್ವಲ್ಪದರಲ್ಲೇ ಪಾರಾಗಿರುವ ಘಟನೆ ನಡೆದಿದೆ. ಇಡೀ ಘಟನೆಯನ್ನು ಕಾರಿನಲ್ಲಿದ್ದವರು ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾರೆ.
ಮೈಸೂರು -ಊಟಿ ರಾಷ್ಟ್ರೀಯ ಹೆದ್ದಾರಿಯು ಬಂಡೀಪುರ ಅರಣ್ಯದ ನಡುವೆ ಹಾದುಹೋಗಿದೆ. ಹೆದ್ದಾರಿಯಲ್ಲಿ ಶುಕ್ರವಾರದಂದು ಊಟಿ ಕಡೆಯಿಂದ ಮೈಸೂರಿನತ್ತ ಬರುತ್ತಿದ್ದ ಬೈಕ್ ಸವಾರ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾನೆ. ಮೈ ಝುಂ ಎನಿಸುವ ದೃಶ್ಯವನ್ನು ಕಾರಿನಲ್ಲಿದ್ದ ಪ್ರಯಾಣಿಕರು ಸೆರೆ ಹಿಡಿದಿದ್ದಾರೆ.
ವೀಡಿಯೊದಲ್ಲಿ ರಸ್ತೆ ಬದಿ ಮರಿ ಜೊತೆ ಎರಡು ಆನೆಗಳು ನಿಂತಿರುವುದು ಕಂಡುಬಂದಿದೆ. ಆನೆಗಳು ನಿಂತ ಎರಡೂ ಕಡೆಗಳಲ್ಲಿ ದೂರದಲ್ಲಿ ಕಾರುಗಳು ಹಾಗೂ ಇತರ ವಾಹನಗಳು ನಿಂತಿದ್ದು, ಆನೆ ಅಲ್ಲಿಂದ ಹೋಗುವುದನ್ನೇ ಕಾಯುತ್ತಿರುವುದನ್ನು ನೋಡಬಹುದು. ಆದರೆ ಅಷ್ಟರಲ್ಲಿ ಓರ್ವ ಬೈಕ್ ಸವಾರ ರಸ್ತೆ ಬದಿಯಲ್ಲಿ ಮರಿಯ ಜೊತೆ ನಿಂತಿದ್ದ ಆನೆಗಳ ಸಮೀಪದಲ್ಲಿಯೇ ಬೈಕ್ ಓಡಿಸಿಕೊಂಡು ಹೋಗಲು ಯತ್ನಿಸಿದ್ದಾನೆ. ಆಗ ಒಂದು ಬೃಹತ್ ದಿಢೀರನೇ ದಾಳಿ ಮಾಡಲು ಮುಂದಾಗಿದೆ. ಅದು ಇದ್ದಕ್ಕಿದ್ದಂತೆ ಮೋಟಾರ್‌ಸೈಕಲ್ ಸವಾರನ ಕಡೆಗೆ ಮುನ್ನುಗ್ಗಿದೆ.
ಭಯಭೀತನಾದ ಸವಾರ ಮೋಟಾರ್ ಸೈಕಲ್ ಅನ್ನು ಸೈಕಲ್ ಅನ್ನು ರಸ್ತೆ ಬದಿಯಲ್ಲಿ ಓಡಿಸಿಕೊಂಡು ಹೋಗುವಾಗ ಬೈಕ್ ನೆಲಕ್ಕೆ ಬಿದ್ದಿದೆ ಮತ್ತು ಆತ ರಸ್ತೆಬದಿಯ ಪೊದೆಗಳ ಕಡೆಗೆ ಬಿದ್ದಿದ್ದಾನೆ. ನಂತರ ಆತ ಬೈಕ್ ಅನ್ನು ಬಿಟ್ಟು ಓಡಿದ್ದಾನೆ. ವೀಡಿಯೋದಲ್ಲಿ ಬೈಕ್ ಸವಾರರು ಆನೆಗಳಿಗೆ ಏನೋ ಕೂಗಿ ಸನ್ನೆ ಮಾಡುತ್ತಿರುವಂತೆ ಕಾಣುತ್ತಿದೆ. ಎಲ್ಲಾ ಮೂರು ಆನೆಗಳು ರಸ್ತೆಯ ಇನ್ನೊಂದು ಬದಿಗೆ ಚಲಿಸುತ್ತವೆ, ಆದರೆ ಅವು ಇದ್ದಕ್ಕಿದ್ದಂತೆ ಪುನಃ ತಾವಿ ನಿಂತಿದ್ದ ಸ್ಥಳಕ್ಕೆ ತಕ್ಷಣವೇ ವಾಪಸ್ ಬರುತ್ತವೆ. ನಂತರ ಅಲ್ಲಿಂದ ನಿಧಾನವಾಗಿ ತೆರಳುತ್ತವೆ. ಉದಗಮಂಗಲದಿಂದ ಬರುತ್ತಿದ್ದ ಬೈಕ್ ಸವಾರ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ನಿಮ್ಮ ಕಾಮೆಂಟ್ ಬರೆಯಿರಿ