ಪತಿಯ ದೀರ್ಘಾಯುಷ್ಯಕ್ಕಾಗಿ ಕರ್ವಾ ಚೌತ್‌ ಉಪವಾಸ ಮಾಡಿದ ನಂತರ ವಿಷ ಹಾಕಿ ಗಂಡನನ್ನು ಕೊಂದ ಪತ್ನಿ…!

ತನ್ನ ಪತಿಯ ದೀರ್ಘಾಯುಷ್ಯಕ್ಕಾಗಿ ಪ್ರಾರ್ಥಿಸಲು ಕರ್ವಾ ಚೌತ್ ಉಪವಾಸವನ್ನು ಮುಗಿಸಿದ ಕೆಲವು ಗಂಟೆಗಳ ನಂತರ ಮಹಿಳೆಯೊಬ್ಬರು ತನ್ನ ಪತಿಗೆ ವಿಷ ನೀಡಿ ಸಾಯಿಸಿದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ ಎಂದು ವರದಿಯಾಗಿದೆ.
ಶೈಲೇಶಕುಮಾರ (32) ಎಂಬವರು ಬೇರೊಬ್ಬ ಮಹಿಳೆಯೊಂದಿಗೆ ಸಂಬಂಧ ಹೊಂದಿದ್ದಾರೆಂದು ಶಂಕಿಸಿ ಅವರ ಪತ್ನಿ ಸವಿತಾ ಅವರಿಗೆ ವಿಷ ನೀಡಿದ್ದಾಳೆ ಎಂದು ಕೌಶಂಬಿ ಜಿಲ್ಲೆಯ ಕಡ ಧಾಮ್ ಪೊಲೀಸ್ ಠಾಣೆಯ ಅಧಿಕಾರಿಗಳು,
ಕರ್ವಾ ಚೌತ್ ಆಚರಣೆಯ ಅಂಗವಾಗಿ ಭಾನುವಾರ ಶೈಲೇಶಕುಮಾರ ಅವರ ದೀರ್ಘಾಯುಷ್ಯಕ್ಕಾಗಿ ಪ್ರಾರ್ಥಿಸಲು ಪತ್ನಿ ಸವಿತಾ ಉಪವಾಸ ಮಾಡುತ್ತಿದ್ದರು ಮತ್ತು ಶೈಲೇಶ ಕೂಡ ಬೆಳಿಗ್ಗೆಯಿಂದ ಅದರ ವ್ಯವಸ್ಥೆಯಲ್ಲಿ ನಿರತರಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಸವಿತಾ ಸಂಜೆ ಉಪವಾಸ ಮುಗಿಸುವಾಗ ಶೈಲೇಶ ಅವರೊಂದಿಗೆ ಜಗಳವಾಡಿದ್ದಾಳೆ. ಆದರೆ ಶೀಘ್ರದಲ್ಲೇ ಎಲ್ಲವೂ ಸಹಜ ಸ್ಥಿತಿಗೆ ಮರಳಿತು. ದಂಪತಿ ಒಟ್ಟಿಗೆ ಊಟ ಮಾಡಿದ್ದು, ಬಳಿಕ ಸವಿತಾ ಶೈಲೇಶ ಅವರಿಗೆ ಪಕ್ಕದ ಮನೆಗೆ ಹೋಗಿ ಏನನ್ನೋ ತರುವಂತೆ ಹೇಳಿದ್ದಾಳೆ, ಆತ ಹೋದ ತಕ್ಷಣ ಮನೆಯಿಂದ ಪರಾರಿಯಾಗಿದ್ದಾಳೆ ಎಂದು ಹೇಳಲಾಗಿದೆ.
ನಂತರ ತೀವ್ರವಾಗಿ ಅಸ್ವಸ್ಥಗೊಂಡ ಶೈಲೇಶ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು ಎಂದು ಸಹೋದರ ಅಖಿಲೇಶ ಹೇಳಿದ್ದಾರೆ.

ಪ್ರಮುಖ ಸುದ್ದಿ :-   ವೀಡಿಯೊ..| ಜೈಲಿನಿಂದ ಬಿಡುಗಡೆಯಾಗಿ ಮನೆಗೆ ಬಂದ ಅಲ್ಲು ಅರ್ಜುನಗೆ ಕುಟುಂಬಸ್ಥರಿಂದ ಭಾವುಕ ಸ್ವಾಗತ

ಆಸ್ಪತ್ರೆಯಲ್ಲಿ ತನ್ನ ಪತ್ನಿ ಸವಿತಾ ಆಹಾರದಲ್ಲಿ ತನ್ನ ಆಹಾರದಲ್ಲಿ ವಿಷ ಬೆರೆಸಿದ್ದಾಳೆ ಎಂದು ಶೈಲೇಶಕುಮಾರ ಹೇಳಿರುವ ವೀಡಿಯೊ ಹೇಳಿಕೆಯನ್ನು ಸಹ ರೆಕಾರ್ಡ್ ಮಾಡಲಾಗಿದೆ. ನಂತರ ಚಿಕಿತ್ಸೆ ವೇಳೆ ಶೈಲೇಶ ಮೃತಪಟ್ಟಿದ್ದಾರೆ. ಪತ್ನಿ ಸವಿತಾಳನ್ನು ಬಂಧಿಸಲಾಗಿದೆ.
ಕೌಶಂಬಿ ಪೊಲೀಸ್ ವರಿಷ್ಠಾಧಿಕಾರಿ ಬ್ರಿಜೇಶಕುಮಾರ ಶ್ರೀವಾಸ್ತವ ಮಾತನಾಡಿ, “ಇಸ್ಮಾಯಿಲ್‌ ಪುರ ಗ್ರಾಮದಿಂದ ಈ ಅಪರಾಧ ನಡೆದ ವರದಿಯಾಗಿದೆ, ಜಗಳವಾಡಿದ ನಂತರ ಮಹಿಳೆ ತನ್ನ ಪತಿಗೆ ವಿಷ ತಿನ್ನಿಸಿದ್ದಾಳೆ, ಚಿಕಿತ್ಸೆ ವೇಳೆ ವ್ಯಕ್ತಿ ಮೃತಪಟ್ಟಿದ್ದಾನೆ, ಪ್ರಕರಣ ದಾಖಲಿಸಲಾಗಿದೆ, ಮಹಿಳೆಯನ್ನು ಬಂಧಿಸಲಾಗಿದ್ದು, ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ತಿಳಿಸಿದ್ದಾರೆ.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement