ಗಾಲ್ವಾನ್ ಘರ್ಷಣೆಯ 4 ವರ್ಷಗಳ ನಂತರದ ಬ್ರಿಕ್ಸ್‌ನಲ್ಲಿ ಮೊದಲ ದ್ವಿಪಕ್ಷೀಯ ಸಭೆ ನಡೆಸಲಿರುವ ಪ್ರಧಾನಿ ಮೋದಿ-ಚೀನಾ ಅಧ್ಯಕ್ಷ

ನವದೆಹಲಿ: ರಷ್ಯಾದಲ್ಲಿ ನಡೆಯಲಿರುವ ಬ್ರಿಕ್ಸ್ ಶೃಂಗಸಭೆಯ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ 2020 ರ ಗಾಲ್ವಾನ್ ಘರ್ಷಣೆಯ ನಂತರದ ಮೊದಲ ದ್ವಿಪಕ್ಷೀಯ ಸಭೆ ನಡೆಸಲಿದ್ದಾರೆ ಎಂದು ವಿದೇಶಾಂಗ ಕಾರ್ಯದರ್ಶಿ ವಿಕ್ರಂ ಮಿಸ್ರಿ ಹೇಳಿದ್ದಾರೆ.
ಕಳೆದ ಕೆಲವು ವರ್ಷಗಳಿಂದ ಅನೇಕ ಅಡಚಣೆಗಳನ್ನು ಎದುರಿಸುತ್ತಿರುವ ವಾಸ್ತವಿಕ ನಿಯಂತ್ರಣ ರೇಖೆ(LAC)ಯ ಉದ್ದಕ್ಕೂ ಗಸ್ತು ವ್ಯವಸ್ಥೆಯ ಬಗ್ಗೆ ಮೂಡಿದ ಒಮ್ಮತದ ನಂತರ ಭಾರತ-ಚೀನಾ ಸಂಬಂಧದಲ್ಲಿನ ಸುಧಾರಣೆ ಬಗ್ಗೆ ಈ ಸಭೆಯು ಒತ್ತಿಹೇಳುತ್ತದೆ.
ನವೀಕೃತ ಸಂಬಂಧಗಳ ಬಗ್ಗೆ ಊಹಾಪೋಹಗಳ ಮಧ್ಯೆ, ವಿಕ್ರಂ ಮಿಶ್ರಿ ಅವರು ಭಾರತದ ಪ್ರಧಾನಿ ನರೇಂದ್ರ ಮೋದಿ ಹಾಗೂ ಚೀನಾ ಅಧ್ಯಕ್ಷ ಕ್ಸಿ ಜಿನ್‌ ಪಿಂಗ್‌ ದ್ವಿಪಕ್ಷೀಯ ಮಾತುಕತೆ ನಡೆಸುತ್ತಿದ್ದಾರೆ ಎಂದು ಪ್ರಕಟಿಸಿದ್ದಾರೆ.

2020 ರ ಗಾಲ್ವಾನ್ ಘರ್ಷಣೆಯ ನಂತರ ಇಬ್ಬರು ನಾಯಕರ ನಡುವೆ ಕೇವಲ ಒಂದು ಔಪಚಾರಿಕ ಸಭೆ ನಡೆದಿದೆ. ಅದು ಆಗಸ್ಟ್ 2023 ರಲ್ಲಿ ದಕ್ಷಿಣ ಆಫ್ರಿಕಾದ ಜೋಹಾನ್ಸ್‌ಬರ್ಗ್‌ನಲ್ಲಿ ನಡೆದ ಬ್ರಿಕ್ಸ್ ಶೃಂಗಸಭೆಯ ಬದಿಯಲ್ಲಿ ನಡೆದಿದೆ. ಇಂಡೋನೇಷ್ಯಾದ ಬಾಲಿಯಲ್ಲಿ ನಡೆದ G20 ಶೃಂಗಸಭೆಯ ಸಮಯದಲ್ಲಿ ಸಂಕ್ಷಿಪ್ತ ಅನೌಪಚಾರಿಕ ಸಂವಾದವೂ ನಡೆದಿದೆ.
ಉಭಯ ನಾಯಕರು ಪ್ರಸ್ತುತ ರಷ್ಯಾದ ಕಜಾನ್‌ನಲ್ಲಿ ಬ್ರಿಕ್ಸ್ ಶೃಂಗಸಭೆಯಲ್ಲಿ ಪಾಲ್ಗೊಂಡಿದ್ದಾರೆ, ಇದರಲ್ಲಿ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುತಿನ್, ಬ್ರೆಜಿಲ್‌ನ ಲುಲಾ ಡ ಸಿಲ್ವಾ ಮತ್ತು ದಕ್ಷಿಣ ಆಫ್ರಿಕಾದ ಸಿರಿಲ್ ರಾಮಫೋಸಾ ಕೂಡ ಭಾಗವಹಿಸುತ್ತಿದ್ದಾರೆ.

ಪ್ರಮುಖ ಸುದ್ದಿ :-   ಕ್ರಿಕೆಟ್‌ | ಚಾಂಪಿಯನ್ಸ್ ಟ್ರೋಫಿಗೆ ಭಾರತದ ತಂಡ ಪ್ರಕಟ

ಗಡಿ ಗಸ್ತು ವ್ಯವಸ್ಥೆಯಲ್ಲಿನ ಮಾತುಕತೆಯ ಪ್ರಗತಿಯು ಗಾಲ್ವಾನ್ ಕಣಿವೆಯ ಘರ್ಷಣೆಯ ನಾಲ್ಕು ವರ್ಷಗಳ ನಂತರ ಬಂದಿದೆ. 2020 ರ ಪೂರ್ವದ ವ್ಯವಸ್ಥೆಗೆ ಮರಳುವುದನ್ನು ಒಳಗೊಂಡಿರುವ ಈ ಗಸ್ತು ವ್ಯವಸ್ಥೆಯು ಪರಿಸ್ಥಿತಿಯನ್ನು ಸ್ಥಿರಗೊಳಿಸುವ ಒಂದು ಕ್ರಮ ಎಂದು ನೋಡಲಾಗುತ್ತಿದೆ.
2020ರ ಜೂನ್ 15 ರಂದು ಗಾಲ್ವಾನ್ ಕಣಿವೆಯಲ್ಲಿ ಭಾರತೀಯ ಮತ್ತು ಚೀನಾದ ಪಡೆಗಳು ವಾಸ್ತವ ನಿಯಂತ್ರಣ ರೇಖೆ(LAC)ಯ ಉದ್ದಕ್ಕೂ ಘರ್ಷಣೆ ನಡೆಸಿದ್ದವು. ಎರಡೂ ಕಡೆಯವರು ಸಾವುನೋವುಗಳನ್ನು ಅನುಭವಿಸಿದರು, ಇದು ದ್ವಿಪಕ್ಷೀಯ ಸಂಬಂಧಗಳಲ್ಲಿ ಉದ್ವಿಗ್ನತೆಗೆ ಕಾರಣವಾಯಿತು.
ಇದು ದ್ವಿಪಕ್ಷೀಯ ಸಂಬಂಧಗಳಲ್ಲದೆ, ಇದು ಇತರ ಕ್ಷೇತ್ರಗಳ ಮೇಲೆಯೂ ಪರಿಣಾಮ ಬೀರಿತು. ನಾಲ್ಕು ವರ್ಷಗಳಿಂದ ಉಭಯ ರಾಷ್ಟ್ರಗಳ ನಡುವೆ ನೇರ ವಿಮಾನಯಾನ ಇರಲಿಲ್ಲ.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement