20 ಓವರ್‌ಗಳಲ್ಲಿ 344 ರನ್‌ ಗಳು : T20 ಪಂದ್ಯದಲ್ಲಿ ಅತಿ ಹೆಚ್ಚು ರನ್‌ ಗಳಿಸಿ ಹೊಸ ಇತಿಹಾಸ ಬರೆದ ಜಿಂಬಾಬ್ವೆ…!

ನೈರೋಬಿ: ಬುಧವಾರ ನಡೆದ T20 ವಿಶ್ವಕಪ್‌ನ ಉಪ ಪ್ರಾದೇಶಿಕ ಆಫ್ರಿಕಾ B ಗುಂಪಿನ ಅರ್ಹತಾ ಪಂದ್ಯದಲ್ಲಿ ಗ್ಯಾಂಬಿಯಾ ವಿರುದ್ಧ 4 ವಿಕೆಟ್‌ಗೆ 344 ರನ್ ಗಳಿಸುವ ಮೂಲಕ ಜಿಂಬಾಬ್ವೆ T20I ಇತಿಹಾಸದಲ್ಲಿ ಅತ್ಯಧಿಕ ಮೊತ್ತ ಗಳಿಸಿದ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು
. ಇತ್ತೀಚಿನ ವರ್ಷಗಳಲ್ಲಿ ಐಪಿಎಲ್‌ನಲ್ಲಿ ಪಂಜಾಬ್ ಕಿಂಗ್ಸ್‌ಗಾಗಿ ಆಡುವ ಜಿಂಬಾಬ್ವೆ ತಂಡದ ನಾಯಕ ಸಿಕಂದರ್ ರಾಜಾ ಅವರು ಕೇವಲ 43 ಎಸೆತಗಳಲ್ಲಿ 15 ಸಿಕ್ಸರ್‌ಗಳೊಂದಿಗೆ ಅಜೇಯ 133 ರನ್ ಗಳಿಸಿದರು. ಕಳೆದ ವರ್ಷ ಏಷ್ಯನ್ ಗೇಮ್ಸ್‌ನಲ್ಲಿ ಮಂಗೋಲಿಯಾ ವಿರುದ್ಧ ಗಳಿಸಿದ ನೇಪಾಳದ 314 ರನ್‌ ಈವರೆಗಿನ ಅತ್ಯಧಿಕ ಮೊತ್ತವಾಗಿತ್ತು. ಈಗ 344 ರನ್ ಗಳಿಸುವ ಮೂಲಕ ಜಿಂಬಾಬ್ವೆ ಆ ದಾಖಲೆಯನ್ನು ಮುರಿದಿದೆ. ಒಟ್ಟಾರೆಯಾಗಿ, ಜಿಂಬಾಬ್ವೆ 20 ಓವರ್‌ಗಳಲ್ಲಿ 30 ಬೌಂಡರಿಗಳ ಹೊರತಾಗಿ 27 ಸಿಕ್ಸರ್‌ಗಳನ್ನು ಬಾರಿಸಿತು.

ರಾಜಾ ಅವರ 15 ಸಿಕ್ಸರ್‌ಗಳನ್ನು ಬಾರಿಸಿದ್ದರೂ T20 ಇನ್ನಿಂಗ್ಸ್‌ನಲ್ಲಿ ಗರಿಷ್ಠ ಸಂಖ್ಯೆಯ ಹೊಡೆದಿದ್ದು ಅವರಲ್ಲ, ಬದಲಗಿ ಸೈಪ್ರಸ್ ವಿರುದ್ಧ 18 ಸಿಕ್ಸರ್‌ಗಳನ್ನು ಹೊಡೆದ ಎಸ್ಟೋನಿಯಾದ ಸಾಹಿಲ್ ಚೌಹಾಣ ಅವರ ಹೆಸರಿನಲ್ಲಿದೆ.
ಐಸಿಸಿ(ICC) ತನ್ನ ಎಲ್ಲಾ ಅಂಗಸಂಸ್ಥೆ ಸದಸ್ಯ ರಾಷ್ಟ್ರಗಳಿಗೆ T20I ಸ್ಥಾನಮಾನ ನೀಡಿದೆ, ಇದು ಕೆಲವು ದುರ್ಬಲ ರಾಷ್ಟ್ರಗಳು ತುಲನಾತ್ಮಕವಾಗಿ ಬಲಿಷ್ಠ ಅಂತಾರಾಷ್ಟ್ರೀಯ ತಂಡಗಳ ವಿರುದ್ಧ ಸ್ಪರ್ಧಿಸಿದಾಗ ದಾಖಲೆಗಳನ್ನು ಮುರಿಯಲು ಕಾರಣವಾಗುತ್ತಿದೆ.

ಪ್ರಮುಖ ಸುದ್ದಿ :-   ಕೊನೆಗೂ ಕೆನಡಾದಲ್ಲಿ ʼಖಲಿಸ್ತಾನಿ ಪ್ರತ್ಯೇಕತಾವಾದಿಗಳುʼ ಇರುವುದನ್ನು ಒಪ್ಪಿಕೊಂಡ ಪ್ರಧಾನಿ ಜಸ್ಟಿನ್‌ ಟ್ರುಡೊ...!
https://twitter.com/FanCode/status/1849083796416823595?ref_src=twsrc%5Etfw%7Ctwcamp%5Etweetembed%7Ctwterm%5E1849083796416823595%7Ctwgr%5E996f2fcccb3edf0c462d458d30e2e7ffe878c11b%7Ctwcon%5Es1_&ref_url=https%3A%2F%2Fsports.ndtv.com%2Fcricket%2F344-in-20-overs-zimbabwe-script-history-shatters-indias-big-t20i-record-6856928

ಈ ತಿಂಗಳ ಆರಂಭದಲ್ಲಿ ಹೈದರಾಬಾದ್‌ನಲ್ಲಿ ಬಾಂಗ್ಲಾದೇಶದ ವಿರುದ್ಧ ಭಾರತವು 6 ವಿಕೆಟ್‌ಗೆ 297 ರನ್ ಗಳಿಸಿದ್ದನ್ನು ಮೀರಿದ ಜಿಂಬಾಬ್ವೆ ಎಲ್ಲಾ ಟೆಸ್ಟ್ ಆಡುವ ರಾಷ್ಟ್ರಗಳಲ್ಲಿ T20I ನಲ್ಲಿ ಅತಿ ಹೆಚ್ಚು ಸ್ಕೋರ್ ಮಾಡಿದ ತಂಡವಾಗಿ ಹೊರಹೊಮ್ಮಿದೆ.
ಗ್ಯಾಂಬಿಯಾದ ಮೂಸಾ ಜೊಬರ್ತೆ ಅವರು ತಮ್ಮ 4 ಓವರ್‌ಗಳಲ್ಲಿ 93 ರನ್‌ಗಳನ್ನು ನೀಡಿ T20I ಇತಿಹಾಸದಲ್ಲಿ ಅತ್ಯಂತ ದುಬಾರಿ ಬೌಲರ್ ಎಂಬ ಅಪಖ್ಯಾತಿ ಗಳಿಸಿದರು, ಇದು ಶ್ರೀಲಂಕಾದ ಕಸುನ್ ರಜಿತಾ ಅವರಿಗಿಂತ ಕಳಪೆ ಸಾಧನೆಯಾಗಿದೆ. ಅವರು 4 ಓವರ್‌ಗಳಲ್ಲಿ 75 ರನ್ ನೀಡಿದ್ದರು.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement