ವೀಡಿಯೊ…| ಪೆಟ್ರೋಲ್ ತುಂಬುತ್ತಿರುವಾಗಲೇ ಪಂಪ್‌ ನಲ್ಲಿ ಲೈಟರಿನಲ್ಲಿ ಬೆಂಕಿ ಹಚ್ಚಿದ ಕುಡುಕ ; ಭುಗಿಲೆದ್ದ ಬೆಂಕಿ ….!

ಹೈದರಾಬಾದ್: ಮದ್ಯದ ಅಮಲಿನಲ್ಲಿದ್ದ ವ್ಯಕ್ತಿಯೊಬ್ಬ ಪೆಟ್ರೋಲ್ ಪಂಪ್‌ನಲ್ಲಿ ಲೈಟರ್ ಹಚ್ಚಿ ಬೆಂಕಿ ಹಚ್ಚಿದ ಘಟನೆ ಶನಿವಾರ ಸಂಜೆ ಹೈದರಾಬಾದಿನಲ್ಲಿ ನಡೆದಿದ್ದು, ನಂತರ ಆತನನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಶನಿವಾರ ಸಂಜೆ 7 ಗಂಟೆ ಸುಮಾರಿಗೆ ಈ ಘಟನೆ ನಡೆದಿದ್ದು, ಆರೋಪಿಯನ್ನು ಚಿರನ್ ಎಂದು ಗುರುತಿಸಲಾಗಿದೆ. ಆತ ಕುಡಿದ ಸ್ಥಿತಿಯಲ್ಲಿ ಕೈಯಲ್ಲಿ ಸಿಗರೇಟ್ ಲೈಟರ್‌ ಹಿಡಿದು ನಾಚರಂ ಪ್ರದೇಶದ ಪೆಟ್ರೋಲ್ ಪಂಪ್‌ಗೆ ಬಂದಿದ್ದಾನೆ. ಪೆಟ್ರೋಲ್ ಬಂಕ್‌ನಲ್ಲಿದ್ದ ಉದ್ಯೋಗಿಗಳಲ್ಲಿ ಒಬ್ಬರು ಅವರು ಲೈಟರ್‌ ಅನ್ನು ಬೆಂಕಿ ಹಚ್ಚಲು ತಂದಿದ್ದೀರಾ ಎಂದು ಆರೋಪಿಯನ್ನುಪ್ರಶ್ನಿಸಿದರು. ನಂತರ ಮಾತಿಗೆ ಮಾತು ಬೆಳೆದು ಸಿಬ್ಬಂದಿ ಚಿರನ್‌ ಕುರಿತು ” ಧೈರ್ಯವಿದ್ದರೆ” ಲೈಟರ್‌ನಲ್ಲಿ ಬೆಂಕಿ ಹಚ್ಚುವಂತೆ ಸವಾಲು ಹಾಕಿ ಪ್ರಚೋದಿಸಿದ್ದಾನೆ ಎಂದು ವರದಿಯಾಗಿದೆ.

ತಕ್ಷಣವೇ ಇದಕ್ಕೆ ಪ್ರತಿಕ್ರಿಯಿಸಿದ ಕುಡಿತದ ಅಮಲಿನಲ್ಲಿದ್ದ ಆರೋಪಿಯು ಪೆಟ್ರೋಲ್‌ ಬಂಕ್‌ ಉದ್ಯೋಗಿ ಸ್ಕೂಟರ್‌ನಲ್ಲಿ ಪೆಟ್ರೋಲ್‌ ಹಾಕುತ್ತಿದ್ದಾಗ ಲೈಟರ್‌ ಉರಿಸಿದ್ದಾನೆ. ತಕ್ಷಣವೇ ಬೆಂಕಿ ಪೆಟ್ರೋಲ್‌ಗೆ ತಗಲು ಹೊತ್ತಿ ಉರಿಯಲಾರಂಭಿಸಿತು. ಘಟನೆ ಸಂಬಂಧ ಬಿಹಾರ ಮೂಲದ ಇಬ್ಬರೂ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಮುಖ ಸುದ್ದಿ :-   75 ಬಾರಿ ಸಂವಿಧಾನ ಬದಲಾಯಿಸಿರುವ ಕಾಂಗ್ರೆಸ್...ಅದಕ್ಕೆ ತುರ್ತು ಪರಿಸ್ಥಿತಿ ಕಳಂಕ ಅಳಿಸಿಹಾಕಲು ಸಾಧ್ಯವಿಲ್ಲ ; ಪ್ರಧಾನಿ ಮೋದಿ ವಾಗ್ದಾಳಿ
https://twitter.com/sudhakarudumula/status/1850377808037687362?ref_src=twsrc%5Etfw%7Ctwcamp%5Etweetembed%7Ctwterm%5E1850377808037687362%7Ctwgr%5E1be80c9b03dc7f28c23dbc0cc684f9e649b8cd17%7Ctwcon%5Es1_&ref_url=https%3A%2F%2Fnews24online.com%2Findia%2Fdrunk-man-arrested-for-starting-fire-at-hyderabad-petrol-pump-on-a-dare%2F368167%2F

ಘಟನೆಯ ಸಿಸಿಟಿವಿ ದೃಶ್ಯಾವಳಿಗಳಲ್ಲಿ, ಒಮ್ಮೆಗೆ ಬೆಂಕಿ ಹೊತ್ತಿಕೊಂಡಾಗ ಅದರ ಬಳಿ ನಿಂತಿದ್ದ ಮಹಿಳೆ ಮತ್ತು ಮಗು ಪಾರಾಗುತ್ತಿರುವ ಕ್ಷಣವನ್ನು ತೋರಿಸಿದೆ. ಪೆಟ್ರೋಲ್ ಪಂಪ್‌ನಲ್ಲಿ ನಿಂತಿದ್ದ ಇತರರೆಲ್ಲರೂ ಓಡಿಹೋಗುತ್ತಿರುವುದನ್ನು ಕಾಣಬಹುದು.
“ಈ ಅಪಾಯಕಾರಿ ಕೃತ್ಯವು ಜೀವಕ್ಕೆ ಅಪಾಯವನ್ನುಂಟುಮಾಡುತ್ತದೆ. ವಿಶೇಷವಾಗಿ ಭಾರೀ ದಟ್ಟಣೆಯಿರುವ ಈ ಜನನಿಬಿಡ ಪ್ರದೇಶದಲ್ಲಿ ಇದು ಸ್ಫೋಟವನ್ನು ಉಂಟುಮಾಡಬಹುದು, ” ಎಂದು ನಾಚರಂ ಪೊಲೀಸ್ ಇನ್ಸ್ಪೆಕ್ಟರ್ ಜಿ ರುದ್ವಿರಕುಮಾರ ಹೇಳಿದ್ದಾರೆ.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement