ವೀಡಿಯೊ..| ದೀಪಾವಳಿಗಾಗಿ ಒಯ್ಯುತ್ತಿದ್ದ ʼಈರುಳ್ಳಿ ಬಾಂಬ್’ ಪಟಾಕಿ ಸ್ಫೋಟ ; ಒಬ್ಬರು ಸಾವು, 6 ಮಂದಿಗೆ ಗಾಯ

ಹೈದರಾಬಾದ್ : ಆಂಧ್ರಪ್ರದೇಶದ ಎಲೂರು ಜಿಲ್ಲೆಯಲ್ಲಿ ಪಟಾಕಿ ಸಿಡಿಸಿದ ಅವಘಡದಲ್ಲಿ ಒಬ್ಬರು ಮೃತಪಟ್ಟು, ಆರು ಮಂದಿ ಗಾಯಗೊಂಡಿದ್ದಾರೆ. ದ್ವಿಚಕ್ರ ವಾಹನದಲ್ಲಿ ವ್ಯಕ್ತಿಯೊಬ್ಬರು ದೀಪಾವಳಿ ಹಬ್ಬದ ವಿಶೇಷ ಪಟಾಕಿ-ಈರುಳ್ಳಿ ಬಾಂಬ್‌ಗಳನ್ನು ಸಾಗಿಸುತ್ತಿದ್ದಾಗ ಸ್ಥಳೀಯ ದೇವಸ್ಥಾನದ ಬಳಿಯ ಗುಂಡಿಗೆ ಬೈಕ್ ಡಿಕ್ಕಿ ಹೊಡೆದು ಆ ಈರುಳ್ಳಿ ಬಾಂಬ್‌ಗಳು ಬಿದ್ದು ಸ್ಫೋಟಗೊಂಡಿವೆ.
ವರದಿಗಳು ದೀಪಾವಳಿಯ ‘ಈರುಳ್ಳಿ ಬಾಂಬ್‌’ಗಳ ಸ್ಫೋಟದ ಪರಿಣಾಮವು ಐಇಡಿ (IED) ಅಥವಾ ಸುಧಾರಿತ ಸ್ಫೋಟಕ ಸಾಧನದಷ್ಟೇ ಸ್ಫೋಟಕ ಶಕ್ತಿಯನ್ನು ಹೊಂದಿತ್ತು ಎಂದು ಸೂಚಿಸುತ್ತದೆ.ದುರಂತದ ಸಿಸಿಟಿವಿ ದೃಶ್ಯಾವಳಿಯು ಬಿಳಿ ಸ್ಕೂಟರ್‌ನಲ್ಲಿ ಇಬ್ಬರು ವ್ಯಕ್ತಿಗಳು ಗುರುವಾರ ಮಧ್ಯಾಹ್ನ 12:17ರ ಸುಮಾರಿಗೆ ಕಿರಿದಾದ ರಸ್ತೆಯ ಮೂಲಕ ವೇಗದಲ್ಲಿ ಚಾಲನೆ ಮಾಡುವುದನ್ನು ತೋರಿಸಿದೆ; ರಸ್ತೆ ಅಗಲವಾಗಿ ಮುಖ್ಯರಸ್ತೆ ಸಂಧಿಸುವ ಹಂತಕ್ಕೆ ಬರುತ್ತಿದ್ದಂತೆ ಬೈಕ್ ಸ್ಫೋಟಗೊಂಡಿದೆ. ಜಂಕ್ಷನ್‌ನಲ್ಲಿ ಐದರಿಂದ ಆರು ಮಂದಿಯ  ಗುಂಪು ಇತ್ತು.

ಸ್ಫೋಟದ ಶಕ್ತಿಯು ಇಡೀ ಪ್ರದೇಶವು ಗಾಢ ಬೂದು ಹೊಗೆಯಿಂದ ಆವೃತವಾಗುವಂತಾಯಿತು. ಸುತ್ತಲೂ ಕಾಗದದ ತುಂಡುಗಳು ಹಾರಾಡುತ್ತಿವೆ. ಹೊಗೆಯ ಮಧ್ಯೆಯೇ ಸ್ಫೋಟದಿಂದ ಹೇಗೋ ಬದುಕುಳಿದ ಇಬ್ಬರು ಓಡಿ ಬರುತ್ತಿರುವುದು ಕಂಡುಬಂದಿದೆ. ಮತ್ತು ಬೈಕಿನ ಭಾಗಗಳು ಮತ್ತು ದೇಹದ ಭಾಗಗಳು ದೂರದಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿರುವುದು ಕಂಡುಬಂದಿದೆ. ಇಬ್ಬರು ಪುರುಷರು ತಮ್ಮ ಕಿವಿಗಳನ್ನು ಹಿಡಿಕೊಂಡು ಬರುತ್ತಿರುವುದುನ್ನು ಕಾಣಬಹುದು, ಬಹುಶಃ ಸ್ಫೋಟದ ಶಬ್ದವು ಅವರ ಕಿವಿಗೆ ಹೆಚ್ಚು ಪರಿಣಾಮ ಬೀರಿದಂತೆ ತೋರುತ್ತದೆ. ರಿಂಗಣಿಸುತ್ತಿದ್ದಾರೆ ಮತ್ತು ಸಹಾಯಕ್ಕಾಗಿ ಹತ್ತಿರದ ಮನೆಯ ನಿವಾಸಿಗಳನ್ನು ಸಂಪರ್ಕಿಸುತ್ತಿದ್ದಾರೆ.

ಪಟಾಕಿ ಸ್ಫೋಟದಲ್ಲಿ ಪಿಲಿಯನ್ ರೈಡ್ ಮಾಡುತ್ತಿದ್ದ ಸುಧಾಕರ ಅವರಿಗೆ ತೀವ್ರ ಸುಟ್ಟಗಾಯಗಳಾಗಿದ್ದು, ಮಾರಣಾಂತಿಕ ಗಾಯಗಳಿಂದ ಮೃತಪಟ್ಟಿದ್ದಾರೆ. ಗಾಯಗೊಂಡಿರುವ ಇತರ ಆರು ಮಂದಿಯನ್ನು ತಬೇಲು ಸಾಯಿ, ಸುವರ ಶಶಿ, ಕೆ ಶ್ರೀನಿವಾಸ ರಾವ್, ಎಸ್‌.ಕೆ. ಖಾದರ್, ಸುರೇಶ ಮತ್ತು ಸತೀಶ ಎಂದು ಗುರುತಿಸಲಾಗಿದೆ. ಅವರನ್ನು ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ. ಅವರಲ್ಲಿ ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ ಎಂದು ಇಂಡಿಯಾ ಟುಡೇ ವರದಿ ಮಾಡಿದೆ. ಪೊಲೀಸರು ಸ್ಥಳಕ್ಕಾಗಮಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

ಪ್ರಮುಖ ಸುದ್ದಿ :-   ಅಂಕೋಲಾ| ಹಾಡು ನಿಲ್ಲಿಸಿದ ಜಾನಪದ ಕೋಗಿಲೆ ; ಪದ್ಮಶ್ರೀ ಪುರಸ್ಕೃತೆ ಸುಕ್ರಿ ಬೊಮ್ಮಗೌಡ ಇನ್ನಿಲ್ಲ

5 / 5. 3

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement