ನಾಸಾ(NASA)ದ 47 ವರ್ಷ ವಯಸ್ಸಿನ ವಾಯೇಜರ್ 1 ಬಾಹ್ಯಾಕಾಶ ನೌಕೆಯು ಇತ್ತೀಚೆಗೆ 1981ರಿಂದಲೂ ಬಳಸದ ರೇಡಿಯೋ ಟ್ರಾನ್ಸ್‌ಮಿಟರ್‌ನ ಸಹಾಯದಿಂದ ಕಳೆದುಕೊಂಡಿದ್ದ ಭೂಮಿಯ ಸಂಪರ್ಕವನ್ನು ಮತ್ತೆ ಸ್ಥಾಪಿಸಿದೆ. ಕ್ಯಾಲಿಫೋರ್ನಿಯಾದ ಜೆಟ್ ಪ್ರೊಪಲ್ಷನ್ ಲ್ಯಾಬೊರೇಟರಿ (JPL) ನಲ್ಲಿರುವ ನಾಸಾದ (NASA) ಇಂಜಿನಿಯರ್‌ಗಳು ಬಾಹ್ಯಾಕಾಶ ನೌಕೆಯೊಂದಿಗೆ ಕಳೆದುಕೊಂಡಿದ್ದ ಭೂಮಿಯ ಸಂಪರ್ಕವನ್ನು ಅಕ್ಟೋಬರ್ 24 ರಂದು ಮರುಸ್ಥಾಪಿಸಿದ್ದಾರೆ.
1500 ಕೋಟಿ ಮೈಲುಗಳಷ್ಟು ದೂರದಲ್ಲಿರುವ ಅಂತರ್ ತಾರಾ ಬಾಹ್ಯಾಕಾಶದಲ್ಲಿರುವ ಬಾಹ್ಯಾಕಾಶ ನೌಕೆಯು ಅದರ ಟ್ರಾನ್ಸ್‌ಮಿಟರ್‌ಗಳಲ್ಲಿ ಒಂದನ್ನು ಸ್ಥಗಿತಗೊಳಿಸಿದ್ದರಿಂದ ಅಕ್ಟೋಬರ್ 16 ರಂದು ಸಂವಹನ ಮಾಡುವಲ್ಲಿ ತೊಂದರೆ ಅನುಭವಿಸಿತು. ಈ ಸಂಪರ್ಕ ಸ್ಥಗಿತಗೊಳಿಸುವಿಕೆಯು ಬಾಹ್ಯಾಕಾಶ ನೌಕೆಯ ದೋಷ ಸಂರಕ್ಷಣಾ ವ್ಯವಸ್ಥೆಯಿಂದ ಪ್ರಚೋದಿಸಲ್ಪಟ್ಟಿರಬಹುದು, ಇದು ವಿದ್ಯುತ್ ಬಳಕೆ ತುಂಬಾ ಹೆಚ್ಚಿರುವಾಗ ಕೆಲವು ವ್ಯವಸ್ಥೆಗಳನ್ನು ಕಡಿತ ಮಾಡಿಕೊಳ್ಳುತ್ತದೆ ಎಂದು ಹೇಳಲಾಗಿದೆ.
ನಾಸಾ ಪ್ರಕಾರ, ಸಂದೇಶವು ಭೂಮಿಯಿಂದ ವಾಯೇಜರ್ 1 ಬಾಹ್ಯಾಕಾಶ ನೌಕೆಯನ್ನು ತಲುಪಲು ಸುಮಾರು 23 ಗಂಟೆಗಳನ್ನು ತೆಗೆದುಕೊಳ್ಳುತ್ತದೆ. ಅಲ್ಲಿಂದ ಭುಮಿಗೆ ತಲುಪಲು ಅಷ್ಟೇ ಸಮಯ ತೆಗೆದುಕೊಳ್ಳುತ್ತದೆ.ಅಕ್ಟೋಬರ್ 16 ರಂದು, ನಾಸಾ ಇಂಜಿನಿಯರ್‌ಗಳು ಬಾಹ್ಯಾಕಾಶ ನೌಕೆಗೆ ಆದೇಶವನ್ನು ಕಳುಹಿಸಿದಾಗ, ಅವರು ಅಕ್ಟೋಬರ್ 18 ರವರೆಗೂ ಅದರ ಪ್ರತಿಕ್ರಿಯೆಯನ್ನು ಪತ್ತೆಹಚ್ಚಲು ಅವರಿಗೆ ಸಾಧ್ಯವಾಗಲಿಲ್ಲ. ಒಂದು ದಿನದ ನಂತರ, ವಾಯೇಜರ್ 1 ರೊಂದಿಗೆ ಸಂವಹನವು ಸಂಪೂರ್ಣವಾಗಿ ನಿಂತುಹೋಯಿತು.
ತನಿಖೆಯ ನಂತರ, ಬಾಹ್ಯಾಕಾಶ ಸಂಸ್ಥೆ ತಂಡವು ವಾಯೇಜರ್ 1 ರ ದೋಷ ಸಂರಕ್ಷಣಾ ವ್ಯವಸ್ಥೆಯು ಬಾಹ್ಯಾಕಾಶ ನೌಕೆಯನ್ನು ಎರಡನೇ, ಕಡಿಮೆ-ಶಕ್ತಿಯ ಟ್ರಾನ್ಸ್‌ಮಿಟರ್‌ಗೆ ಬದಲಾಯಿಸಿಕೊಂಡಿದೆ ಎಂಬುದು ಕಂಡುಬಂತು.
ವಾಯೇಜರ್ 1 ಎರಡು ರೇಡಿಯೋ ಟ್ರಾನ್ಸ್‌ಮಿಟರ್‌ಗಳನ್ನು ಹೊಂದಿದೆ, ಆದರೆ ‘ಎಕ್ಸ್-ಬ್ಯಾಂಡ್’ ಎಂದು ಕರೆಯಲ್ಪಡುವ ಒಂದನ್ನು ಮಾತ್ರ ವರ್ಷಗಳಿಂದ ಬಳಸುತ್ತಿದೆ. ಆದಾಗ್ಯೂ, ಇತರ ಟ್ರಾನ್ಸ್‌ಮಿಟರ್ – ‘S-ಬ್ಯಾಂಡ್’ – 1981 ರಿಂದಲೂ ಬಳಸದ ವಿಭಿನ್ನ ಆವರ್ತನವನ್ನು ಬಳಸುತ್ತದೆ.
ಪ್ರಸ್ತುತ, ನಾಸಾ ದೋಷ ಸಂರಕ್ಷಣಾ ವ್ಯವಸ್ಥೆಯನ್ನು ಯಾವುದು ಸಕ್ರಿಯಗೊಳಿಸಿದೆ ಎಂಬುದನ್ನು ನಿರ್ಧರಿಸುವವರೆಗೆ X-ಬ್ಯಾಂಡ್ ಟ್ರಾನ್ಸ್‌ಮಿಟರ್‌ಗೆ ಪುನಃ ಬದಲಾಯಿಸದಿರಲು ನಿರ್ಧರಿಸಿದೆ. ಇದು ವಾರಗಳ ಕಾಲ ಸಮಯ ತೆಗೆದುಕೊಳ್ಳಬಹುದು ಎಂದು ನಾಸಾ ಹೇಳಿದೆ.
“ಎಂಜಿನಿಯರ್‌ಗಳು ಜಾಗರೂಕರಾಗಿದ್ದಾರೆ ಏಕೆಂದರೆ ಅವರು ಎಕ್ಸ್-ಬ್ಯಾಂಡ್ ಅನ್ನು ಆನ್ ಮಾಡಲು ಯಾವುದೇ ಸಂಭಾವ್ಯ ಅಪಾಯಗಳಿವೆಯೇ ಎಂದು ನಿರ್ಧರಿಸಲು ಬಯಸುತ್ತಾರೆ. ಈ ಮಧ್ಯೆ, ಎಸ್-ಬ್ಯಾಂಡ್ ಟ್ರಾನ್ಸ್‌ಮಿಟರ್ ಕಾರ್ಯನಿರ್ವಹಿಸುತ್ತಿದೆಯೇ ಮತ್ತು ಸ್ವೀಕರಿಸಿದೆಯೇ ಎಂದು ಪರಿಶೀಲಿಸಲು ಎಂಜಿನಿಯರ್‌ಗಳು ಅಕ್ಟೋಬರ್ 22 ರಂದು ವಾಯೇಜರ್ 1ಕ್ಕೆ ಸಂದೇಶವನ್ನು ಕಳುಹಿಸಿದ್ದಾರೆ. ಅಕ್ಟೋಬರ್ 24 ರಂದು ನೌಕೆಯಿಂದ ದೃಢೀಕರಣವನ್ನು ಸ್ವೀಕರಿಸಿದೆ. ಆದರೆ ತಂಡವು ಹೆಚ್ಚು ಕಾಲ ಅವಲಂಬಿಸಲು ಬಯಸುತ್ತಿರುವ ʼಫಿಕ್ಸ್ʼ ಅಲ್ಲ” ಎಂದು ವಾಯೇಜರ್ ಮಿಷನ್ ಅಶ್ಯೂರೆನ್ಸ್ ಮ್ಯಾನೇಜರ್ ಬ್ರೂಸ್ ವ್ಯಾಗನರ್ ಸಿಎನ್‌ಎನ್‌ಗೆ ತಿಳಿಸಿದರು.
ವಾಯೇಜರ್ 1 ಅನ್ನು ವಾಯೇಜರ್ 2 ರ ನಂತರ ಉಡಾವಣೆ ಮಾಡಲಾಯಿತು, ಆದರೆ ವೇಗವಾದ ಮಾರ್ಗದಿಂದಾಗಿ ಅದು ವಾಯೇಜರ್ 2ಕ್ಕಿಂತ ಮುಂಚೆಯೇ ಕ್ಷುದ್ರಗ್ರಹ ಪಟ್ಟಿಯಿಂದ ನಿರ್ಗಮಿಸಿತು ಮತ್ತು ಡಿಸೆಂಬರ್ 15, 1977 ರಂದು ವಾಯೇಜರ್ 2 ಅನ್ನು ಹಿಂದಿಕ್ಕಿತು. ಬಾಹ್ಯಾಕಾಶ ನೌಕೆಯು ಅಂತರ್ ತಾರಾ ಬಾಹ್ಯಾಕಾಶಕ್ಕೆ ಪ್ರವೇಶ ಮಾಡಿದ ಸಾಹಸ ಮಾಡಿದ ಮೊದಲ ಮಾನವ ನಿರ್ಮಿತ ವಸ್ತುವಾಗಿದೆ.
ಬಾಹ್ಯಾಕಾಶ ನೌಕೆಯು ನಮ್ಮ ಸೌರವ್ಯೂಹದ ಹೊರಗಿನ ಪ್ರಭಾವಗಳು ಸೂರ್ಯನ ಪ್ರಭಾವಕ್ಕಿಂತ ಬಲವಾಗಿರುವ ಗಡಿ ಹೀಲಿಯೋಸ್ಪಿಯರ್ ಅನ್ನು ದಾಟಿದ ಮೊದಲನೆಯ ಮಾನವ ನಿರ್ಮಿತ ವಸ್ತುವೂ ಹೌದು.
ಈವರೆಗೆ, ವಾಯೇಜರ್ 1 ಗುರುಗ್ರಹದ ಸುತ್ತ ತೆಳುವಾದ ಉಂಗುರವನ್ನು ಮತ್ತು ಎರಡು ಹೊಸ – ಥೀಬ್ ಮತ್ತು ಮೆಟಿಸ್ ಎಂಬ ಜೋವಿಯನ್ ಉಪಗ್ರಹಗಳನ್ನು ಪತ್ತೆ ಮಾಡಿದೆ. ಇದು ಶನಿಗ್ರಹದಲ್ಲಿ ಐದು ಚಂದ್ರಗಳು ಮತ್ತು ‘ಜಿ-ರಿಂಗ್’ ಎಂಬ ಹೊಸ ಉಂಗುರವನ್ನು ಸಹ ಪತ್ತೆ ಮಾಡಿದೆ.
ನಿಮ್ಮ ಕಾಮೆಂಟ್ ಬರೆಯಿರಿ