ಮಂಗಳೂರು | ಆರ್ಡರ್ ನೆಪದಲ್ಲಿ ಅಮೆಜಾನ್ ಸಂಸ್ಥೆಗೆ ವಂಚನೆ : ಇಬ್ಬರು ಆರೋಪಿಗಳ ಬಂಧನ

ಮಂಗಳೂರು: ನಕಲಿ ವಿಳಾಸ ನೀಡುವ ಮೂಲಕ ಭಾರೀ ಮೌಲ್ಯದ ಸೊತ್ತುಗಳನ್ನು ಆರ್ಡರ್ ಮಾಡಿ ಅಮೆಝಾನ್ ಕಂಪೆನಿಗೆ ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜಸ್ಥಾನ ಮೂಲದ ಇಬ್ಬರು ಆರೋಪಿಗಳನ್ನು ಮಂಗಳೂರಿನಲ್ಲಿ ಬಂಧಿಸಲಾಗಿದೆ.
. ವಂಚನೆ ಮಾಡಿದ ಪ್ರಕರಣದಲ್ಲಿ ಇಬ್ಬರು ಆರೋಪಿಗಳನ್ನು ಮಂಗಳೂರಿನ ಉರ್ವ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ರಾಜಸ್ಥಾನ ಮೂಲದ ರಾಜಕುಮಾರ ಮೀನಾ (23) ಮತ್ತು ಸುಭಾಷ ಗುರ್ಜರ್ (27) ಎಂದು ಗುರುತಿಸಲಾಗಿದೆ. ಅವರು ನಕಲಿ ಗುರುತಿನ ಮೂಲಕ ಸುಮಾರು 11,45,000 ರೂ. ಮೌಲ್ಯದ ಸರಕು ಆರ್ಡರ್ ಮಾಡಿದ ಬಗ್ಗೆ ಉರ್ವಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಆರೋಪಿಗಳು ನಗರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಬಳಿಯ ವಿಳಾಸದಲ್ಲಿ ‘ಅಮಿತ್’ ಎಂಬ ಹೆಸರಿನಲ್ಲಿ ಎರಡು ದುಬಾರಿ ಮೌಲ್ಯದ ಸೋನಿ ಕ್ಯಾಮರಾಗಳು ಮತ್ತು 10 ಇತರ ವಸ್ತುಗಳನ್ನು ನಕಲಿ ವಿವರ ಬಳಸಿ ಆರ್ಡರ್ ಮಾಡಿದ್ದಾರೆ. ಆರೋಪಿಗಳು ನಕಲಿ ವಿಳಾಸ ಮತ್ತು ಸಂಪರ್ಕ ಸಂಖ್ಯೆ ನೀಡಿದ್ದು ಮತ್ತು ‘ಅಮಿತ್’ ಎಂಬ ಹೆಸರಿಗೆ ಡೆಲಿವರಿ ನಿಗದಿಪಡಿಸಿದ್ದರು.

ಡೆಲಿವರಿ ಸಂದರ್ಭದಲ್ಲಿ ರಾಜಕುಮಾರ ಮೀನಾ ವಸ್ತುಗಳನ್ನು ಸಂಗ್ರಹಿಸಿ ಒಟಿಪಿ ನೀಡಿದ್ದರು. ಆದರೆ, ಸುಭಾಷ ಗುರ್ಜರ್ ಅವರು ವಿತರಣಾ ಸಿಬ್ಬಂದಿಯನ್ನು ಈ ಸಂದರ್ಭದಲ್ಲಿ ಗೊಂದಲಕ್ಕೊಳಪಡಿಸಿದ್ದಾರೆ. ಈ ವೇಳೆ ಆರೋಪಿಗಳು ಇತರ ವಸ್ತುಗಳ ಸ್ಟಿಕ್ಕರ್‌ಗಳಿಗೆ ಸೋನಿ ಸ್ಟಿಕ್ಕರ್‌ ಅಂಟಿಸಿ ಅದನ್ನು ಆರ್ಡರ್‌ ಬಾಕ್ಸ್‌ಗೆ ಬದಲಾಯಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ನಂತರ ರಾಜಕುಮಾರ ಮೀನಾ ಉದ್ದೇಶಪೂರ್ವಕವಾಗಿ ತಪ್ಪಾದ OTP ನೀಡಿ ಕೆಲಸವನ್ನು ವಿಳಂಬಗೊಳಿಸಿದ್ದರು. ಇದರಿಂದಾಗಿ ಡೆಲಿವರಿ ದೃಢೀಕರಣದಲ್ಲಿ ವಿಳಂಬವಾಯಿತು. ಅವರು ಮರುದಿನ ಕ್ಯಾಮರಾಗಳನ್ನು ಸಂಗ್ರಹಿಸುವುದಾಗಿ ವಿತರಣಾ ಸಿಬ್ಬಂದಿಗೆ ತಿಳಿಸಿ ಅವರನ್ನು ವಾಪಸ್ ಕಳುಹಿಸಿದರು. ಆರೋಪಿಗಳು ನಂತರ ಸೋನಿ ಕ್ಯಾಮೆರಾಗಳ ಆರ್ಡರ್​ ರದ್ದುಗೊಳಿಸಿದರು. ಇದು ಅನುಮಾನಕ್ಕೆ ಕಾರಣವಾಯಿತು. ಆ ವೇಳೆ ಬಾಕ್ಸ್‌ಗಳನ್ನು ಪರಿಶೀಲಿಸಿದಾಗ, ಅಮೆಜಾನ್‌ನ ವಿತರಣಾ ಪಾಲುದಾರರಾದ ಮಹೀಂದ್ರ ಲಾಜಿಸ್ಟಿಕ್ಸ್ ಸ್ಟಿಕ್ಕರ್ ಬದಲಾವಣೆ ಆಗಿರುವುದನ್ನು ಕಂಡುಹಿಡಿದಿದೆ ಮತ್ತು ಅದನ್ನು ಅಮೆಜಾನ್‌ (Amazon)ಗೆ ಈ ಬಗ್ಗೆ ರಿಪೊರ್ಟ್‌ ಮಾಡಿದೆ.

ಪ್ರಮುಖ ಸುದ್ದಿ :-   ಹಸುಗಳ ಕೆಚ್ಚಲು ಕೊಯ್ದ ಪ್ರಕರಣ: ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ; ಸಿಎಂ ಸಿದ್ದರಾಮಯ್ಯ

ರಾಜಕುಮಾರ ಮೀನಾನನ್ನು ಆರಂಭದಲ್ಲಿ ಸೇಲಂ ಪೊಲೀಸರು ಬಂಧಿಸಿದ್ದು, ಬಳಿಕ ಉರ್ವಾ ಪೊಲೀಸರು ಕಸ್ಟಡಿಗೆ ತೆಗೆದುಕೊಂಡರು. ಸುಭಾಷನನ್ನು ಮಂಗಳೂರಿನಲ್ಲಿ ಬಂಧಿಸಲಾಯಿತು ಎಂದು ಮಂಗಳೂರು ನಗರ ಪೊಲೀಸ್ ಕಮೀಷನರ್ ಅನುಪಮ ಅಗರ್ವಾಲ್ ತಿಳಿಸಿದ್ದಾರೆ. ಆರೋಪಿಗಳು ಮೋಸದಿಂದ ಪಡೆದ ಸೊತ್ತುಗಳನ್ನು ಮಾರಾಟ ಮಾಡಿದ್ದರಿಂದ ಅದಕ್ಕೆ ಬದಲಿಯಾಗಿ ಪಡೆದ ನಗದು ಹಣ 11,45,000 ರೂ.ಗಳನ್ನು ವಶಪಡಿಸಿಕೊಂಡು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಇಬ್ಬರೂ ದೇಶಾದ್ಯಂತ ವಿವಿಧ ರಾಜ್ಯಗಳಲ್ಲಿ ಇದೇ ರೀತಿಯ ವಂಚನೆಗಳನ್ನು ನಡೆಸುತ್ತಿರಬಹುದು ಎಂದು ಶಂಕಿಸಲಾಗಿದೆ. ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಉರ್ವ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement