ನವದೆಹಲಿ : ನೈಋತ್ಯ ದೆಹಲಿಯಲ್ಲಿ ಕರ್ತವ್ಯದಲ್ಲಿದ್ದ ಇಬ್ಬರು ಟ್ರಾಫಿಕ್ ಪೊಲೀಸ್ ಸಿಬ್ಬಂದಿಯನ್ನು ಕಾರಿನಲ್ಲಿ ಸುಮಾರು 20 ಮೀಟರ್ ಎಳೆದೊಯ್ದ ಘಟನೆ ನಡೆದ ವರದಿಯಾಗಿದೆ. ಈ ಸಂಬಂಧ ಶಂಕಿತ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.
ಶನಿವಾರ ಸಂಜೆ 7:45 ರ ಸುಮಾರಿಗೆ ವೇದಾಂತ ದೇಶಿಕಾ ಮಾರ್ಗದ ಬಳಿಯ ಬೆರ್ ಸರೈ ಟ್ರಾಫಿಕ್ ಲೈಟ್‌ನಲ್ಲಿ ಈ ಘಟನೆ ಸಂಭವಿಸಿದ್ದು, ಸಹಾಯಕ ಸಬ್ ಇನ್ಸ್‌ಪೆಕ್ಟರ್ ಪ್ರಮೋದ ಮತ್ತು ಹೆಡ್ ಕಾನ್ಸ್‌ಟೇಬಲ್ ಶೈಲೇಶ್ ಚೌಹಾಣ ಅವರಿಗೆ ಗಂಭೀರ ಗಾಯಗಳಾಗಿವೆ.
ಘಟನೆ ನಡೆದಾಗ ಪೊಲೀಸರು ಸಂಚಾರ ನಿಯಮ ಉಲ್ಲಂಘನೆಗಾಗಿ ನಿತ್ಯ ಚಲನ್‌ಗಳನ್ನು ನೀಡುತ್ತಿದ್ದರು. ಶನಿವಾರ ರಾತ್ರಿ 7:45 ರ ಸುಮಾರಿಗೆ, ವಾಹನವೊಂದು ಕೆಂಪು ದೀಪ ಇದ್ದಾಗಲೂ ಟ್ರಾಫಿಕ್ ಸಿಗ್ನಲ್ ಅನ್ನು ಉಲ್ಲಂಘಿಸಿದ್ದಾರೆ. ಆಗ ಮತ್ತು ಹೆಡ್ ಕಾನ್ಸ್‌ಟೇಬಲ್ ಶೈಲೇಶ ಕಾರು ಚಾಲಕನಿಗೆ ನಿಲ್ಲಿಸಲು ಸೂಚಿಸಿದಾಗ, ಚಾಲಕ ಪರಾರಿಯಾಗಲು ಪ್ರಯತ್ನಿಸಿದ್ದಾನೆ,ಘಟನಾ ಸ್ಥಳದಿಂದ ವೇಗವಾಗಿ ಹೋಗುವ ಮೊದಲು ಅಡ್ಡ ಬಂದ ಪೊಲೀಸ್ ಸಿಬ್ಬಂದಿಯನ್ನು ಸುಮಾರು 20 ಮೀಟರ್‌ಗಳವರೆಗೆ ಎಳೆದುಕೊಂಡು ಹೋಗಿದ್ದಾನೆ ಎಂದು ಅಧಿಕಾರಿ ಹೇಳಿದರು.
ಕಾರು ಯು-ಟರ್ನ್ ತೆಗೆದುಕೊಂಡಾಗ ಅದರ ಬಾನೆಟ್‌ನಲ್ಲಿ ನೇತಾಡುತ್ತಿದ್ದ ಪೊಲೀಸರು ಚಾಲಕನಿಗೆ ಕಾರನ್ನು ನಿಲ್ಲಿಸಲು ಸೂಚಿಸಿದರು, ಆತ ನಿಲ್ಲಿಸದೆ ಕಾರು ಚಲಾಯಿಸಿದ್ದು ಕಂಡುಬಂದಿದೆ. ಸುಮಾರು 20 ನಿಮಿಷಗಳ ನಂತರ, ಕಾರು ನಿಂತಿದೆ. ಅಪರಿಚಿತ ವಾಹನವು ಕರ್ತವ್ಯದಲ್ಲಿದ್ದ ಟ್ರಾಫಿಕ್ ಅಧಿಕಾರಿಗಳಿಗೆ ಡಿಕ್ಕಿ ಹೊಡೆದು ಸ್ಥಳದಿಂದ ಪರಾರಿಯಾಗಿದೆ ಎಂದು ಕಿಶನ್ ಗಢ್ ಪೊಲೀಸ್ ಠಾಣೆಯಲ್ಲಿ ಪಿಸಿಆರ್ ಕರೆ ಸ್ವೀಕರಿಸಿದೆ” ಎಂದು ಅಧಿಕಾರಿ ಹೇಳಿದರು.
ತಕ್ಷಣವೇ ಪೊಲೀಸ್ ತಂಡವನ್ನು ಸ್ಥಳಕ್ಕೆ ಕಳುಹಿಸಲಾಯಿತು ಮತ್ತು ಗಾಯಗೊಂಡ ಸಿಬ್ಬಂದಿಯನ್ನು ಪಿಸಿಆರ್ ವ್ಯಾನ್ ಮೂಲಕ ಸಫ್ದರ್‌ಜಂಗ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅವರು ಹೇಳಿದರು.
ತಂಡವು ಆಸ್ಪತ್ರೆಗೆ ತಲುಪಿತು ಮತ್ತು ಸಹಾಯಕ ಸಬ್ ಇನ್ಸ್‌ಪೆಕ್ಟರ್ (ಎಎಸ್‌ಐ) ಪ್ರಮೋದ ಮತ್ತು ಹೆಡ್ ಕಾನ್‌ಸ್ಟೆಬಲ್ ಸೈಲೇಶ್ ಚೌಹಾಣ ಆರೋಗ್ಯ ಸ್ಥಿರವಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಪೊಲೀಸರ ಹೇಳಿಕೆ ಆಧರಿಸಿ, ಕೊಲೆ ಯತ್ನ ಮತ್ತು ಅಧಿಕೃತ ಕರ್ತವ್ಯ ನಿರ್ವಹಣೆಗೆ ಅಡ್ಡಿಪಡಿಸಿದ ಹಾಗೂ ಸಾರ್ವಜನಿಕರ ಪ್ರಾಣಕ್ಕೆ ಅಪಾಯ ತಂದೊಡ್ಡಿದ ಆರೋಪದಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.ಎಎಸ್‌ಐ ಪ್ರಮೋದ ಮತ್ತು ಹೆಡ್ ಕಾನ್ಸ್‌ಟೇಬಲ್ ಶೈಲೇಶಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ವರದಿಯಾಗಿದೆ.
ವಾಹನದ ಮಾಲೀಕರನ್ನು ಗುರುತಿಸಲಾಗಿದ್ದು, ಶೀಘ್ರವೇ ಬಂಧಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಈ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಅವರು ಹೇಳಿದರು.
ನಿಮ್ಮ ಕಾಮೆಂಟ್ ಬರೆಯಿರಿ