ವೀಡಿಯೊ..| ಬೆಂಗಳೂರು ; ಬೆಟ್ ಗೆಲ್ಲಲು ಪಟಾಕಿ ಮೇಲೆ ಕುಳಿತ ವ್ಯಕ್ತಿ : ಅದು ಸ್ಫೋಟಗೊಂಡು ಸಾವು

ಬೆಂಗಳೂರು : ಬೆಂಗಳೂರಿನಲ್ಲಿ ದೀಪಾವಳಿಯ ರಾತ್ರಿ ಸ್ನೇಹಿತರೊಂದಿಗೆ ಬೆಟ್ಟಿಂಗ್ ಚಾಲೆಂಜ್‌ ನಲ್ಲಿ ಪಟಾಕಿ ಪೆಟ್ಟಿಗೆಯ ಮೇಲೆ ಕುಳಿತ ವ್ಯಕ್ತಿಯೊಬ್ಬರು ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೆ ಎಂದು ವರದಿಯಾಗಿದೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
32 ವರ್ಷದ ವ್ಯಕ್ತಿಯೊಬ್ಬರು ದೀಪಾವಳಿ ಸಂದರ್ಭದಲ್ಲಿ ಪಟಾಕಿಯ ಪೆಟ್ಟಿಗೆಯ ಮೇಲೆ ಕುಳಿತುಕೊಂಡಿದ್ದರಿಂದ ಸಾವಿಗೀಡಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮದ್ಯದ ಅಮಲಿನಲ್ಲಿದ್ದ ಎಂದು ಹೇಳಲಾದ ಶಬರೀಶ ಎಂಬವರು ತನ್ನ ಆರು ಜನ ಸ್ನೇಹಿತರು ಪಟಾಕಿ ಪಟ್ಟಿಗೆ ಮೇಲೆ ಕುಳಿತುಕೊಳ್ಳುವ ಚಾಲೆಂಜ್‌ ಸ್ವೀಕರಿಸಿದ್ದು, ಅದರಂತೆ ಪಟಾಕಿ ಪೆಟ್ಟಿಗೆಯ ಮೇಲೆ ಕುಳಿತಿದ್ದಾನೆ. ಇವರೆಲ್ಲ ಪಟಾಕಿ ಸಿಡಿಸಲು ಬರುವ ಮುನ್ನ ಎಲ್ಲರೂ ಮದ್ಯ ಸೇವಿಸಿದ್ದರು ಎಂದು ಹೇಳಲಾಗಿದೆ.

ಅಕ್ಟೋಬರ್‌ 31ರಂದು ಈ ಘಟನೆ ನಡೆದಿದೆ ಎನ್ನಲಾಗಿದ್ದು, ಇಲ್ಲಿನ ಕೋಣನಕುಂಟೆಯಲ್ಲಿ ಜಮಾಯಿಸಿದ್ದ ಆರು ಜನರು ಪೆಟ್ಟಿಗೆಯೊಳಗಿದ್ದ ಪಟಾಕಿ ಸಿಡಿಸುವ ವೇಳೆ ಪೆಟ್ಟಿಗೆ ಮೇಲೆ ಕುಳಿತರೆ ಆತನಿಗೆ ಆಟೋರಿಕ್ಷಾ ಖರೀದಿಸಿ ಕೊಡುವುದಾಗಿ ವಾಗ್ದಾನ ಮಾಡಿದ್ದಾರೆ. ಈ ಚಾಲೆಂಜ್‌ ಅನ್ನು ಸ್ವೀಕರಿಸಿದ ವ್ಯಕ್ತಿ ಪಟಾಗಿ ಪೆಟ್ಟಿಗೆಯ ಮೇಲೆ ಕುಳಿತಿದ್ದಾನೆ.
ಸಾಮಾಜಿಕ ಮಾಧ್ಯಮದಲ್ಲಿ ಹೊರಹೊಮ್ಮಿದ ಘಟನೆಯ ಸಿಸಿಟಿವಿ ದೃಶ್ಯಾವಳಿಗಳು ವ್ಯಕ್ತಿಯು ಆಯತಾಕಾರದ ಪೆಟ್ಟಿಗೆಯ ಮೇಲೆ ಕುಳಿತಿರುವುದನ್ನು ತೋರಿಸಿದೆ, ಆತನ ಸ್ನೇಹಿತರು ಅವನನ್ನು ಸುತ್ತುವರೆದಿದ್ದಾರೆ. ಗುಂಪಿನ ಸದಸ್ಯರೊಬ್ಬರು ಪಟಾಕಿಗೆ ಬೆಂಕಿ ಹಚ್ಚಿದ ನಂತರ ಎಲ್ಲರೂ ಅಲ್ಲಿಂದ ಓಡಿದ್ದಾರೆ.

ಪ್ರಮುಖ ಸುದ್ದಿ :-   ಬೆಂಗಳೂರು | ಟೆಕ್ಕಿ ನಂತರ ಹೆಂಡತಿ ಕಾಟಕ್ಕೆ ಆತ್ಮಹತ್ಯೆ ಮಾಡಿಕೊಂಡ ಪೊಲೀಸ್‌ ಕಾನ್‌ಸ್ಟೆಬಲ್...! ಡೆತ್​ನೋಟ್​ನಲ್ಲಿ ಕಿರುಕುಳದ ಆರೋಪ

ಶಬರೀಶ ಒಬ್ಬನೇ ಪೆಟ್ಟಿಗೆಯ ಮೇಲೆ ಕುಳಿತು ಪಟಾಕಿ ಸಿಡಿಯುವುದನ್ನೇ ಕಾಯುತ್ತಿದ್ದ. ಕೆಲವು ಸೆಕೆಂಡುಗಳ ಕಾಯುವಿಕೆಯ ನಂತರ, ಪೆಟ್ಟಿಗೆಯೊಳಗಿದ್ದ ಪಟಾಕಿಗಳು ಒಮ್ಮೆಲೇ ಸ್ಫೋಟಗೊಂಡು ಆತ ಸಾವಿಗೀಡಾಗಿದ್ದಾನೆ.. ದಟ್ಟವಾದ ಹೊಗೆಯ ನಡುವೆ, ಸ್ನೇಹಿತರು ಆತನತ್ತ ಧಾವಿಸಿದರು, ಆದರೆ ಆತ ರಸ್ತೆಯ ಮೇಲೆ ಕುಸಿದುಬಿದ್ದಿದ್ದ.
ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿಯಿತು, ಆದರೆ ಚಿಕಿತ್ಸೆ ಫಲಿಸದೆ ಶನಿವಾರ ಮೃತಪಟ್ಟಿದ್ದಾನೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
“ಅಪರಾಧೀಯ ನರಹತ್ಯೆಯ ಪ್ರಕರಣವನ್ನು ದಾಖಲಿಸಲಾಗಿದೆ ಮತ್ತು ಘಟನೆಯಲ್ಲಿ ಭಾಗಿಯಾಗಿರುವ ಆರು ಜನರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ” ಎಂದು ಉಪ ಪೊಲೀಸ್ ಆಯುಕ್ತರು(ದಕ್ಷಿಣ ಬೆಂಗಳೂರು) ತಿಳಿಸಿದ್ದಾರೆ.

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement