ವಕೀಲೆ ಹತ್ಯೆ ಪ್ರಕರಣಕ್ಕೆ ಟ್ವಿಸ್ಟ್‌ : 20 ಲಕ್ಷ ರೂ. ಕೊಡ್ತೇವೆ ಹೇಳಿ ಕೇವಲ ₹ 1 ಲಕ್ಷ ಕೊಟ್ರು ; ಪೊಲೀಸರಿಗೆ ದೂರು ನೀಡಿದ ವಕೀಲೆಯ ಕೊಲೆ ಆರೋಪಿ…!

ಮೀರತ್‌ : ಉತ್ತರ ಪ್ರದೇಶದ ಮೀರತ್‌ನಲ್ಲಿ ನಡೆದ ಒಂದು ವರ್ಷದ ಹಿಂದಿನ ಕೊಲೆ ಪ್ರಕರಣವು ಅಚ್ಚರಿಯ ತಿರುವು ಪಡೆದುಕೊಂಡಿದೆ. ಕೊಲೆ ಮಾಡಿದ್ದಕ್ಕಾಗಿ ಭರವಸೆ ನೀಡಿದಷ್ಟು ಹಣ ಕೊಟ್ಟಿಲ್ಲ ಎಂದು ಗುತ್ತಿಗೆ ಕೊಲೆಗಾರನೇ ಪೊಲೀಸರಿಗೆ ದೂರು ನೀಡಿದ ಪ್ರಕರಣ ವರದಿಯಾಗಿದೆ. ವಕೀಲೆ ಅಂಜಲಿ ಅವರನ್ನು ಕೊಲ್ಲಲು 20 ಲಕ್ಷ ರೂ.ಗಳ ಗುತ್ತಿಗೆ ನೀಡಲಾಗಿತ್ತು, ಆದರೆ ಆ ಭರವಸೆ ನೀಡಿದಷ್ಟು ಹಣವನ್ನು ನೀಡಿಲ್ಲ ಎಂದು ಗುತ್ತಿಗೆ ಕೊಲೆಗಾರ ದೂರಿನಲ್ಲಿ ಆರೋಪಿಸಿದ್ದಾನೆ.
ಸುಮಾರು ಒಂದು ವರ್ಷದ ಹಿಂದೆ ಹಾಲಿನ ಬೂತ್‌ನಿಂದ ಮನೆಗೆ ಮರಳುತ್ತಿದ್ದಾಗ ಇಬ್ಬರು ದುಷ್ಕರ್ಮಿಗಳು ವಕೀಲೆ ಅಂಜಲಿ ಅವರನ್ನು ಗುಂಡಿಕ್ಕಿ ಕೊಂದಿದ್ದರು. ಆಸ್ತಿ ವಿವಾದದ ಹಿನ್ನೆಲೆಯಲ್ಲಿ ಬಾಡಿಗೆ ಕೊಲೆಗಾರರನ್ನು ನೇಮಿಸಿದ ಶಂಕೆಯ ಮೇಲೆ ಆಕೆಯ ಪತಿ ಮತ್ತು ಅತ್ತೆಯನ್ನು ಆರಂಭದಲ್ಲಿ ಬಂಧಿಸಲಾಗಿತ್ತು. ಆದರೆ, ಪೊಲೀಸರಿಗೆ ಅವರು ಭಾಗಿಯಾದ ಬಗ್ಗೆ ಯಾವುದೇ ನಿರ್ದಿಷ್ಟ ಪುರಾವೆಗಳು ಸಿಗದ ಕಾರಣ ಅವರನ್ನು ನಂತರ ಬಿಡುಗಡೆ ಮಾಡಲಾಯಿತು.

ಅಪರಾಧ ನಡೆದ ಕೆಲವು ದಿನಗಳ ನಂತರ ಪೊಲೀಸರು ಆರೋಪಿಗಳಾದ ನೀರಜ ಶರ್ಮಾ ಮತ್ತು ಯಶಪಾಲ ಅವರನ್ನು ಬಂಧಿಸಿದ್ದಾರೆ. ಅವರನ್ನು ಸುರೇಶ ಭಾಟಿ ಎಂಬ ವ್ಯಕ್ತಿ ಬಾಡಿಗೆಗೆ ಪಡೆದಿದ್ದ ಎನ್ನಲಾಗಿದೆ. ಕೊಲೆಯ ಹಿಂದಿನ ರಾತ್ರಿ ನೀರಜ್ ಮನೆಯಲ್ಲಿ ಬಾಡಿಗೆ ಹಂತಕರು ತಂಗಿದ್ದರು ಎಂದು ತನಿಖಾಧಿಕಾರಿಗಳು ಬಹಿರಂಗಪಡಿಸಿದ್ದಾರೆ. ಪೊಲೀಸರು ಎರಡು ಸ್ಕೂಟರ್‌ಗಳು ಮತ್ತು ಅಪರಾಧಕ್ಕೆ ಸಂಬಂಧಿಸಿದ ಪಿಸ್ತೂಲ್ ಅನ್ನು ವಶಪಡಿಸಿಕೊಂಡಿದ್ದಾರೆ.
ಇದೀಗ ಪ್ರಕರಣದ ಹೊಸ ಟ್ವಿಸ್ಟ್‌ನಲ್ಲಿ ಇತ್ತೀಚೆಗೆ ಜಾಮೀನಿನ ಮೇಲೆ ಬಿಡುಗಡೆಯಾಗಿರುವ ನೀರಜ ಶರ್ಮಾ ಪೊಲೀಸರಿಗೆ ದೂರು ನೀಡಿದ್ದು, ಅಂಜಲಿಯ ಪತಿ, ಅತ್ತೆ ಸರಳಾ ಗುಪ್ತಾ ಮತ್ತು ಮಾವ ಪವನ ಗುಪ್ತಾ ಅವರ ಒತ್ತಾಯದ ಮೇರೆಗೆ ಅಂಜಲಿಯನ್ನು ಕೊಲ್ಲಲಾಗಿದೆ ಎಂದು ಆರೋಪಿಸಿದ್ದಾರೆ. 20 ಲಕ್ಷ ರೂ. ಮೌಲ್ಯದ ಡೀಲ್‌ಗೆ ಒಪ್ಪಂದವಾಗಿತ್ತು. ಒಪ್ಪಂದದ ಪ್ರಕಾರ ಬಾಡಿಗೆ ಹಂತಕರಾದ ತಾವು ಜೈಲಿಗೆ ಹೋಗಿದ್ದಾಗಿ ನೀರಜ್ ಹೇಳಿಕೊಂಡಿದ್ದಾನೆ.

ಪ್ರಮುಖ ಸುದ್ದಿ :-   ಈ ಬಗ್ಗೆ ಎಚ್ಚರ | ಅಂಗಡಿಗಳಲ್ಲಿದ್ದ ಕ್ಯೂಆರ್‌ (QR) ಕೋಡ್‌ ಅನ್ನು ರಾತ್ರೋರಾತ್ರಿ ಬದಲಾಯಿಸಿದ ವಂಚಕರು...! ಗ್ರಾಹಕರು ಪಾವತಿಸಿದ ಹಣ ವಂಚಕರ ಖಾತೆಗೆ..!!

ಮೂಲಗಳ ಪ್ರಕಾರ, ಪೊಲೀಸರು ನಿಜವಾದ ಮಾಸ್ಟರ್‌ಮೈಂಡ್‌ಗಳನ್ನು ಬಿಡುಗಡೆ ಮಾಡಿದ್ದಾರೆ ಎಂದು ನೀರಜ್ ಆರೋಪಿಸಿದ್ದಾನೆ ಮತ್ತು ಹೊಸದಾಗಿ ತನಿಖೆ ನಡೆಸಲು ಒತ್ತಾಯಿಸಿದ್ದಾನೆ. ಆತ ಪ್ರಕರಣಕ್ಕೆ ಸಂಬಂಧಿಸಿದಂತೆ ಹೊಸ ಸಾಕ್ಷ್ಯವನ್ನು ಸಹ ಒದಗಿಸಿದ್ದಾನೆ ಎಂದು ವರದಿಯಾಗಿದೆ.
“ಅಂಜಲಿಯ ಅತ್ತೆ, ಮಾವ, ಪತಿ, ಮತ್ತು ಮತ್ತೊಬ್ಬ ದುಷ್ಯಂತ್ ಶರ್ಮಾ ನನ್ನನ್ನು ಅವರ ಅಂಗಡಿಗೆ ಕರೆದು, ‘ನೀವು ಅಂಜಲಿಯನ್ನು ಕೊಲ್ಲಬೇಕು. ಅವಳು ನಮಗೆ ಕಿರುಕುಳ ನೀಡುತ್ತಿದ್ದಾಳೆ, ಎಲ್ಲಾ ಆಸ್ತಿಯನ್ನು ತನ್ನ ಹಿಡಿತಕ್ಕೆ ತೆಗೆದುಕೊಂಡಿದ್ದಾಳೆ. ಮತ್ತು ನಮ್ಮ ವಿರುದ್ಧ ಅನೇಕ ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಅವರು ಹೇಳಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ.
ಅಧಿಕಾರಿಗಳ ಪ್ರಕಾರ, ಸಂತ್ರಸ್ತೆ ತನ್ನ ಮಾಜಿ ಪತಿ ನಿತಿನ್ ಗುಪ್ತಾ ಹೆಸರಿನಲ್ಲಿದ್ದ ಮನೆಯಲ್ಲಿ ವಾಸಿಸುತ್ತಿದ್ದಳು. ಆಕೆಯ ಅತ್ತೆ ಹಾಗೂ ಮನೆಯವರು ನಂತರ ಆಸ್ತಿಯನ್ನು ಯಶಪಾಲ ಮತ್ತು ಸುರೇಶ್ ಭಾಟಿಯಾ ಎಂಬವರಿಗೆ ಮಾರಾಟ ಮಾಡಿದರು, ಆದರೆ ಅಂಜಲಿ ಮನೆಯನ್ನು ಖಾಲಿ ಮಾಡಲು ಸಿದ್ಧರಿರಲಿಲ್ಲ. ಇದು ವಿವಾದಕ್ಕೆ ಕಾರಣವಾಯಿತು.

ಆಸ್ತಿ ಖರೀದಿದಾರರು ಶರ್ಮಾ ಮತ್ತು ಇತರ ಇಬ್ಬರಿಗೆ ಅಂಜಲಿಯನ್ನು ಕೊಲ್ಲಲು ₹20 ಲಕ್ಷಕ್ಕೆ ಗುತ್ತಿಗೆ ನೀಡಿದ್ದರು. ಯಶಪಾಲ, ಭಾಟಿಯಾ, ಶರ್ಮಾ ಮತ್ತು ಅಂಜಲಿಗೆ ಗುಂಡು ಹಾರಿಸಿದ ಇಬ್ಬರು ಹಂತಕರು ಸೇರಿದಂತೆ ಐವರನ್ನು ಬಂಧಿಸಲಾಯಿತು. ಒಂದು ವರ್ಷದ ನಂತರ, ಈಗ ಜಾಮೀನಿನ ಮೇಲೆ ಬಿಡುಗಡೆಯಾದ ನೀರಜ್‌ ಶರ್ಮಾ ಕೊಲೆಯಾದ ಅಂಜಲಿಯ ಅತ್ತೆ ಮತ್ತು ಪತಿ ಕೂಡ ಹತ್ಯೆಯಲ್ಲಿ ಭಾಗಿಯಾಗಿದ್ದಾರೆ ಎಂದು ಬಹಿರಂಗಪಡಿಸಿದ್ದಾನೆ.
ಅತ್ತೆ-ಮಾವ ಹಾಗೂ ಪತಿ ₹ 20 ಲಕ್ಷ ಪರಿಹಾರ ನೀಡುವುದಾಗಿ ಭರವಸೆ ನೀಡಿದ್ದರು ಮತ್ತು ₹ 1 ಲಕ್ಷವನ್ನು ಮುಂಗಡವಾಗಿ ನೀಡಿದ್ದರು. ತನ್ನ ಬಂಧನದಿಂದಾಗಿ ಉಳಿದ ₹ 19 ಲಕ್ಷ ತೆಗೆದುಕೊಳ್ಳಲು ಸಾಧ್ಯವಾಗಲಿಲ್ಲ. ಆದರೆ, ಈಗ ಜಾಮೀನಿನ ಜೈಲಿನಿಂದ ಹೊರಗೆ ಬಂದ ನಂತರ ಉಳಿದ ಹಣಕ್ಕಾಗಿ ಮೃತ ಅಂಜಲಿಯ ಸಂತ್ರಸ್ತೆಯ ಅತ್ತೆ ಸಂಪರ್ಕಿಸಿದಾಗ ಅವರು ಅಷ್ಟು ಹಣವನ್ನು ಕೊಡಲು ನಿರಾಕರಿಸಿದರು ಎಂದು ಆತ ಹೇಳಿದ್ದಾನೆ.

ಪ್ರಮುಖ ಸುದ್ದಿ :-   ಗಂಟಲಲ್ಲಿ ಪಿಸ್ತಾ ಸಿಪ್ಪೆ ಸಿಲುಕಿ 2 ವರ್ಷದ ಮಗು ಸಾವು

ಪೊಲೀಸರು ನಮ್ಮನ್ನು ಬಂಧಿಸಿದಾಗ, ನಾವು ಅಂಜಲಿಯ ಅತ್ತೆಯ ಹೆಸರನ್ನು ಬಹಿರಂಗಪಡಿಸಲಿಲ್ಲ, ನಾವು ಹಣಕಾಸಿನ ಒಪ್ಪಂದ ಮಾಡಿಕೊಂಡಿದ್ದರಿಂದ ಅವರ ಬಗ್ಗೆ ಯಾವುದೇ ಮಾಹಿತಿ ನೀಡಲಿಲ್ಲ. ಈಗ ನಾವು ನಮ್ಮ ತಪ್ಪಿಗೆ ವಿಷಾದಿಸುತ್ತೇವೆ, ಅದಕ್ಕಾಗಿಯೇ ನಾವು ಎಲ್ಲಾ ವಿವರಗಳನ್ನು ಬಹಿರಂಗಪಡಿಸುತ್ತಿದ್ದೇವೆ ಎಂದು ಶೂಟರ್ ನೀರಜ್‌ ಹೇಳಿದ್ದಾನೆ.
ಮೃತ ಅಂಜಲಿಯ ಪತಿ ತನ್ನ ಸಮಯ ಮತ್ತು ಅವಳು ಯಾವಾಗ ಹೊರಬರುತ್ತಾಳೆ ಎಂದು ತಿಳಿಸಿದ್ದಾನೆ ಎಂದು ನೀರಜ್ ಹೇಳಿದ್ದಾನೆ. ಈ ವ್ಯಕ್ತಿಗಳು ಹಲವು ವರ್ಷಗಳಿಂದ ಅಂಜಲಿಗೆ ಕಿರುಕುಳ ನೀಡುತ್ತಿದ್ದರು, ಇದಕ್ಕೆ ನಾನೇ ಸಾಕ್ಷಿ. ಆದ್ದರಿಂದ ಇವರೆಲ್ಲರ ವಿರುದ್ಧ ಕಠಿಣ ಕ್ರಮ ಜರುಗಿಸಿ ಅಂಜಲಿ ಹತ್ಯೆಗೆ ಸಂಚು ರೂಪಿಸಿದ ಆರೋಪ ಹೊರಿಸುವಂತೆ ಕೋರುತ್ತೇನೆ ಎಂದು ಆತ ದೂರಿನಲ್ಲಿ ತಿಳಿಸಿದ್ದಾನೆ.
ಮೀರತ್ ನಗರದ ಹಿರಿಯ ಪೊಲೀಸ್ ಅಧಿಕಾರಿ ಆಯುಷ್ ವಿಕ್ರಂ ಮಾತನಾಡಿ, ಈ ಬಗ್ಗೆ ತನಿಖೆ ನಡೆಸಲಾಗುವುದು ಮತ್ತು ಹೊಸ ಸಂಗತಿಗಳು ಹೊರಬಂದರೆ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

5 / 5. 3

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement