ಗ್ವಾಲಿಯರ್ (ಮಧ್ಯಪ್ರದೇಶ): ಮಧ್ಯಪ್ರದೇಶದ ಗ್ವಾಲಿಯರ್ ಜಿಲ್ಲೆಯಲ್ಲಿ ಕೆನಡಾ ಮೂಲದ ಗ್ಯಾಂಗ್‌ಸ್ಟರ್ ಅರ್ಷದೀಪ್ ಸಿಂಗ್ ದಲ್ಲಾನ ಇಬ್ಬರು ಸಹಾಯಕರು 45 ವರ್ಷದ ವ್ಯಕ್ತಿಯನ್ನು ಗುಂಡಿಕ್ಕಿ ಕೊಂದಿದ್ದಾರೆ.
ಕಳೆದ ತಿಂಗಳು ಪಂಜಾಬಿನ ಫರೀದ್‌ಕೋಟ್‌ನಲ್ಲಿ ಸಿಖ್ ಕಾರ್ಯಕರ್ತ ಗುರುಪ್ರೀತ್ ಸಿಂಗ್ ಹರಿ ನೌ ಹತ್ಯೆ ಪ್ರಕರಣದಲ್ಲಿ ಭಾಗಿಯಾಗಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.
ಗ್ವಾಲಿಯರ್ ಗುಂಡಿನ ದಾಳಿಯಲ್ಲಿ ಮೃತಪಟ್ಟವನನ್ನು ಜಸ್ವಂತ್ ಸಿಂಗ್ ಗಿಲ್ ಎಂದು ಗುರುತಿಸಲಾಗಿದ್ದು, 2016 ರ ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಒಳಗಾಗಿದ್ದ ಮತ್ತು ಪರೋಲ್ ಮೇಲೆ ಹೊರಬಂದಿದ್ದ ಎನ್ನಲಾಗಿದೆ. ಈತನನ್ನು ಕೆನಡಾ ಮೂಲದ ಗ್ಯಾಂಗ್‌ಸ್ಟರ್ ಅರ್ಷದೀಪ್ ಸಿಂಗ್ ದಲ್ಲಾನ ಇಬ್ಬರು ಸಹಾಯಕರು ಗುರುವಾರ ಗುಂಡಿಕ್ಕಿ ಕೊಂದಿದ್ದು, ಕೊಲೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ವೀಡಿಯೊದಲ್ಲಿ, ವ್ಯಕ್ತಿ ಕಾಲೋನಿಯ ಇತರರೊಂದಿಗೆ ಮಾತನಾಡುತ್ತಿದ್ದಾಗ, ಇಬ್ಬರು ಬೈಕ್ ನಲ್ಲಿ ಬಂದು ಗುಂಡು ಹಾರಿಸಿದ್ದಾರೆ. ನಂತರ ಜಸ್ವಂತ್ ಸಿಂಗ್ ಗಿಲ್ ನೆಲದ ಮೇಲೆ ಬಿದ್ದಿದ್ದಾನೆ. ಆದರೂ ಬೈಕ್‌ನಲ್ಲಿ ಬಂದ ವ್ಯಕ್ತಿ ಇನ್ನೂ ಒಂದು ಗುಂಡು ಹಾರಿಸಿದ್ದಾನೆ ಮತ್ತು ಮೃತಪಟ್ಟಿದ್ದನ್ನು ಖಚಿತಪಡಿಸಕೊಂಡು ಅಲ್ಲಿಂದ ಪರಾರಿಯಾಗಿದ್ದಾನೆ.
ಸೋನಿ ಸರ್ದಾರ್ ಎಂದು ಕರೆಯಲ್ಪಡುವ ಮೃತ ಜಸ್ವಂತ್ ಸಿಂಗ್ 45 ವರ್ಷ ವಯಸ್ಸಿನವರಾಗಿದ್ದು, ಪೆರೋಲ್ ಮೇಲೆ ಬಿಡುಗಡೆಯಾಗಿದ್ದ. 2016ರಲ್ಲಿ ನಡೆದ ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದ.
ಊಟದ ನಂತರ, ಆತ ನಿಯಮಿತವಾಗಿ ತನ್ನ ಕಾಲೋನಿಯ ಸುತ್ತಲೂ ವಾಕಿಂಗ್ ಮಾಡುತ್ತಿದ್ದ. ವಾಕಿಂಗ್ ಸಮಯದಲ್ಲಿ ಕೆಲವರೊಂದಿಗೆ ಮಾತನಾಡುತ್ತಿದ್ದಾಗ, ಮೋಟಾರ್ ಸೈಕಲ್‌ನಲ್ಲಿ ಇಬ್ಬರು ವ್ಯಕ್ತಿಗಳು ಬಂದರು. ಆತನೊಂದಿಗೆ ಮಾತನಾಡಿದರು. ನಂತರ ಇದ್ದಕ್ಕಿದ್ದಂತೆ ಮೂರು ಗುಂಡು ಹಾರಿಸಿ ಸ್ಥಳದಿಂದ ಪಲಾಯನ ಮಾಡಿದ್ದಾರೆ.
ಗುಂಡಿನ ದಾಳಿಯಿಂದ ನಿವಾಸಿಗಳು ಆತಂಕಿತರಾಗಿದ್ದರು. ಕುಟುಂಬ ಸದಸ್ಯರು ತಕ್ಷಣ ಅವರನ್ನು ಗ್ವಾಲಿಯರ್‌ನ ಆಸ್ಪತ್ರೆಗೆ ಸಾಗಿಸಿದರು, ಅಲ್ಲಿ ಆತ ಮೃತಪಟ್ಟಿದ್ದಾನೆ ಎಂದು ಘೋಷಿಸಲಾಯಿತು.
ಉತ್ತಮ ನಡವಳಿಕೆಯಿಂದಾಗಿ, ಆತನಿಗೆ ಸಾಂದರ್ಭಿಕ ಪೆರೋಲ್ ಗೆ ಅನುಮತಿ ನೀಡಲಾಗಿತ್ತು. ಈ ಬಾರಿ 15 ದಿನಗಳ ಕಾಲ ಪೆರೋಲ್ ನೀಡಲಾಗಿತ್ತು.
ಗೋಪಾಲ್ ಬಾಗ್ ನಗರವು ಪ್ರವೇಶದ್ವಾರದಲ್ಲಿ ಗಾರ್ಡ್ ಪೋಸ್ಟ್ ಹೊಂದಿರುವ ಗೇಟ್ ಕಾಲೋನಿಯಾಗಿದೆ. ಆದರೆ, ಸೆಕ್ಯೂರಿಟಿ ಗಾರ್ಡ್ ಕಳೆದೆರಡು ದಿನಗಳಿಂದ ರಜೆ ಹಾಕಿದ್ದರಿಂದ ಗೇಟ್ ತೆರೆದುಕೊಂಡಿತ್ತು. ಇದು ದಾಳಿಕೋರರಿಗೆ ಅಪರಾಧ ಎಸಗಲು ಮತ್ತು ತಪ್ಪಿಸಿಕೊಳ್ಳಲು ಸುಲಭವಾಗುವಂತೆ ಮಾಡಿತು.
ನಿಮ್ಮ ಕಾಮೆಂಟ್ ಬರೆಯಿರಿ