ವೀಡಿಯೊ..| ವಿಚ್ಛೇದನದಿಂದ ಅಸಮಾಧಾನ, ಜನರ ಮೇಲೆ ಕಾರು ನುಗ್ಗಿಸಿದ ವ್ಯಕ್ತಿ ; 35 ಜನರು ಸಾವು, 43 ಮಂದಿಗೆ ಗಾಯ

ದಕ್ಷಿಣ ಚೀನಾದ ಝುಹೈ ನಗರದ ಕ್ರೀಡಾ ಕೇಂದ್ರದ ಸುತ್ತ ವ್ಯಾಯಾಮ ಮಾಡುತ್ತಿದ್ದ ಜನರ ಮೇಲೆ ಕಾರೊಂದು ನುಗ್ಗಿದ್ದರಿಂದ ಮೂವತ್ತೈದು ಜನರು ಸಾವಿಗೀಡಾಗಿದ್ದಾರೆ ಮತ್ತು 43 ಮಂದಿ ಗಾಯಗೊಂಡಿದ್ದಾರೆ ಎಂದು ಸ್ಥಳೀಯ ಪೊಲೀಸರು ಮಂಗಳವಾರ ತಿಳಿಸಿದ್ದಾರೆ.
ಸೋಮವಾರ ಈ ಘಟನೆ ನಡೆದಿದೆ, ಆದರೆ ಆ ಸಮಯದಲ್ಲಿ ಪೊಲೀಸರು ಜನರು ಗಾಯಗೊಂಡಿದ್ದಾರೆ ಎಂದು ಮಾತ್ರ ಹೇಳಿದ್ದರು, ಆದರೆ ಘಟನೆಯ ವೀಡಿಯೊಗಳನ್ನು ಸಾಮಾಜಿಕ ಮಾಧ್ಯಮದಿಂದ ಸ್ಕ್ರಬ್ ಮಾಡಲಾಗಿದೆ. ಮಂಗಳವಾರ, ಝುಹೈ ಸ್ಪೋರ್ಟ್ಸ್ ಸೆಂಟರ್‌ನಲ್ಲಿ “ಗಂಭೀರ ಮತ್ತು ಕೆಟ್ಟ ಕಾರು ದಾಳಿ” ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಘಟನೆಯಲ್ಲಿ 35 ಜನರು ಸಾವಿಗೀಡಾಗಿದ್ದಾರೆ ಎಂದು ಬಹಿರಂಗಪಡಿಸಿದ್ದಾರೆ. ಗಾಯಗೊಂಡಿರುವ 43 ಮಂದಿ ಸದ್ಯಕ್ಕೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿಸಲಾಗಿದೆ.

62 ವರ್ಷದ ಚಾಲಕ, “ತನ್ನ ವಿಚ್ಛೇದನದ ನಂತರ ಆಸ್ತಿಯ ವಿಭಜನೆಯ ಬಗ್ಗೆ (ಆತನ) ಉಂಟಾದ ಅಸಮಾಧಾನದಿಂದ ಈ ಕೃತ್ಯ ನಡೆಸಿದ್ದಾನೆ” ಎಂದು ಪ್ರಾಥಮಿಕ ತನಿಖೆಗಳು ಸೂಚಿಸಿವೆ ಎಂದು ಪೊಲೀಸರು ಹೇಳಿಕೆಯಲ್ಲಿ ತಿಳಿಸಿದ್ದಾರೆ. ವ್ಯಕ್ತಿ “ಸಣ್ಣ ಎಸ್‌ಯುವಿಯನ್ನು ಗೇಟ್ ಮೂಲಕ ಓಡಿಸಿದ್ದಾನೆ ಮತ್ತು ನಗರದ ಕ್ರೀಡಾ ಕೇಂದ್ರಕ್ಕೆ ಬಲವಂತವಾಗಿ ಕಾರನ್ನು ನುಗ್ಗಿಸಿದ್ದಾನೆ. ಕ್ರೀಡಾ ಮೈದಾನದಲ್ಲಿ ವ್ಯಾಯಾಮ ಮಾಡುತ್ತಿದ್ದ ಜನರತ್ತ ಕಾರನ್ನು ನುಗ್ಗಿಸಿದ್ದಾನೆ ಎಂದು ಪೊಲೀಸರ ಹೇಳಿಕೆ ತಿಳಿಸಿದೆ.

ಪೊಲೀಸರು ಆತನನ್ನು ತಡೆದು ಆಸ್ಪತ್ರೆಗೆ ಕಳುಹಿಸುವ ಮೊದಲು ಆತ ತನ್ನ ಕಾರಿನಲ್ಲಿ ಚಾಕುವಿನಿಂದ ತನ್ನ ದೇಹವನ್ನು ತಾನೇ ಕತ್ತರಿಸಿಕೊಂಡಿರುವುದನ್ನು ಪೊಲೀಸರು ಪತ್ತೆ ಕಂಡುಕೊಂಡಿದ್ದಾರೆ. ಆತ ಕುತ್ತಿಗೆ ಮತ್ತು ದೇಹದ ಇತರ ಭಾಗಗಳಿಗೆ ಸ್ವಯಂ ಗಾಯ ಮಾಡಿಕೊಂಡ ನಂತರ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ, ಪ್ರಸ್ತುತ ಆತ ಕೋಮಾದಲ್ಲಿದ್ದಾನೆ ಮತ್ತು ಹೀಗಾಗಿ ಆತನಿಗೆ ವಿಚಾರಣೆಗೆ ಒಳಗಾಗಲು ಸಾಧ್ಯವಾಗಲಿಲ್ಲ ಎಂದು ಪೊಲೀಸರು ಹೇಳಿದ್ದಾರೆ.
ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಗಾಯಗೊಂಡಿರುವ ಜನರಿಗೆ ಚಿಕಿತ್ಸೆ ನೀಡಲು “ಎಲ್ಲಾ ಪ್ರಯತ್ನಗಳನ್ನು” ಮಾಡುವಂತೆ ಸೂಚಿಸಿದ್ದಾರೆ ಮತ್ತು “ಕಾನೂನಿಗೆ ಅನುಸಾರವಾಗಿ ಅಪರಾಧಿಯನ್ನು ಶಿಕ್ಷಿಸಬೇಕೆಂದು ಹೇಳಿದ್ದಾರೆ” ಎಂದು ಅಧಿಕೃತ ಕ್ಸಿನ್ಹುವಾ ಸುದ್ದಿ ಸಂಸ್ಥೆ ತಿಳಿಸಿದೆ. ಸೋಮವಾರ ರಾತ್ರಿ ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರವಾದ ಗ್ರಾಫಿಕ್ ವೀಡಿಯೊಗಳು ಘಟನೆಯ ನಂತರದ ಪರಿಣಾಮವನ್ನು ತೋರಿಸಿದವು.

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement