ಮುಂಬೈ: ಮಹಾರಾಷ್ಟ್ರದ ಜಲ್ಗಾಂವ್ ಜಿಲ್ಲೆಯಲ್ಲಿ ಅಂಬ್ಯುಲೆನ್ಸ್‌ಗೆ ಬೆಂಕಿ ತಗುಲಿದ ಪರಿಣಾಮ ಕೆಲವೇ ನಿಮಿಷಗಳಲ್ಲಿ ಆಂಬುಲೆನ್ಸ್ ಸ್ಫೋಟಗೊಂಡಿದೆ. ಅದರಲ್ಲಿದ್ದ ಗರ್ಭಿಣಿ ಮತ್ತು ಅವರ ಕುಟುಂಬದವರು ಪವಾಡ ಸದೃಶ್ಯ ರೀತಿಯಲ್ಲಿ ಅಪಾಯದಿಂದ ಪಾರಾಗಿದ್ದಾರೆ.
ಆಂಬುಲೆನ್ಸ್ ಸ್ಫೋಟದ ತೀವ್ರತೆಯ ಪರಿಣಾಮದಿಂದ ಹತ್ತಿರದ ಮನೆಗಳ ಕಿಟಕಿಗಳು ಸಹ ಛಿದ್ರಗೊಂಡಿದೆ. ಅದೃಷ್ಟವಶಾತ್ ಈ ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ , ಪ್ರಾಣಹಾನಿ ಸಂಭವಿಸಿಲ್ಲ ಎಂದು ವರದಿಯಾಗಿದೆ. “ರಸ್ತೆಯ ಮಧ್ಯದಲ್ಲಿ ಉರಿಯುತ್ತಿರುವ ಆಂಬುಲೆನ್ಸ್‌ನಲ್ಲಿ ಭಾರಿ ಸ್ಫೋಟ ಸಂಭವಿಸಿದ ಕ್ಷಣಗಳನ್ನು ತೋರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ಜಲ್ಗಾಂವದ ದಾದಾವಾಡಿ ಪ್ರದೇಶದ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಘಟನೆ ನಡೆದಿದೆ. ಆಂಬುಲೆನ್ಸ್‌ನಲ್ಲಿ ಗರ್ಭಿಣಿ ಮತ್ತು ಅವರ ಕುಟುಂಬವನ್ನು ಎರಾಂಡೋಲ್ ಸರ್ಕಾರಿ ಆಸ್ಪತ್ರೆಯಿಂದ ಜಲ್ಗಾಂವದ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯಲಾಗುತ್ತಿತ್ತು ಎಂದು ಹೇಳಲಾಗಿದೆ. ಆಂಬುಲೆನ್ಸ್ ಚಾಲಕ ತನ್ನ ವಾಹನದ ಎಂಜಿನ್‍ನಿಂದ ಹೊಗೆ ಬರುತ್ತಿರುವುದನ್ನು ಕಂಡು ತಕ್ಷಣ ಕೆಳಗಿಳಿದು ಪ್ರಯಾಣಿಕರನ್ನು ಕೆಳಗಿಳಿಯುವಂತೆ ತಿಳಿಸಿದ್ದಾನೆ. ಅಲ್ಲದೆ, ವಾಹನದ ಸಮೀಪ ಬರದಂತೆ ಹತ್ತಿರದಲ್ಲಿದ್ದ ಜನರಿಗೆ ಎಚ್ಚರಿಸಿದ್ದಾನೆ. ಕೆಲವೇ ಕ್ಷಣದಲ್ಲಿ ವಾಹನಕ್ಕೆ ಬೆಂಕಿ ಹೊತ್ತಿಕೊಂಡು ಕೆಲವೇ ನಿಮಿಷಗಳಲ್ಲಿ, ಅದು ಆಂಬುಲೆನ್ಸ್ ಆಮ್ಲಜನಕ ಟ್ಯಾಂಕ್‍ಗೆ ಹರಡಿ ದೊಡ್ಡ ಸ್ಫೋಟಕ್ಕೆ ಕಾರಣವಾಯಿತು.
ನಿಮ್ಮ ಕಾಮೆಂಟ್ ಬರೆಯಿರಿ