ಪಾಕ್ ಆಕ್ರಮಿತ ಕಾಶ್ಮೀರಕ್ಕೆ ಚಾಂಪಿಯನ್ಸ್ ಟ್ರೋಫಿ ಕೊಂಡೊಯ್ಯಲು ಪಾಕಿಸ್ತಾನ ಕ್ರಿಕೆಟ್‌ ನಿಯಂತ್ರಣ ಮಂಡಳಿಗೆ ನಿರ್ಬಂಧಿಸಿದ ಐಸಿಸಿ : ವರದಿ

ಭಾರತವನ್ನು ಕೆರಳಿಸುವ ಕೆಲಸಕ್ಕೆ ಮುಂದಾಗಿದ್ದ ಪಾಕಿಸ್ತಾನಕ್ಕೆ, ಐಸಿಸಿ ಖಡಕ್ ಎಚ್ಚರಿಕೆ ನೀಡಿದೆ. ಅದರಂತೆ ಐಸಿಸಿ ಚಾಂಪಿಯನ್ಸ್ ಟ್ರೋಫಿಯನ್ನು ವಿವಾದಿತ ಪ್ರದೇಶವಾದ ಪಾಕ್ ಆಕ್ರಮಿತ ಕಾಶ್ಮೀರಕ್ಕೆ ಕೊಂಡೊಯ್ಯುವಂತಿಲ್ಲ ಎಂದು ಪಾಕಿಸ್ತಾನಕ್ಕೆ ಐಸಿಸಿ ನಿರ್ಬಂಧಿಸಿದೆ ಎಂದು ವರದಿಯಾಗಿದೆ.
ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) 2025 ರ ಚಾಂಪಿಯನ್ಸ್ ʼಟ್ರೋಫಿ ಪ್ರವಾಸʼವನ್ನು ‘ಪಾಕಿಸ್ತಾನ ಆಕ್ರಮಿತ ಕಾಶ್ಮೀರ’ದ ಮೂರು ನಗರಗಳಲ್ಲಿಯೂ ಆಯೋಜಿಸುವ, ಪಾಕಿಸ್ತಾನದ ನಿರ್ಧಾರಕ್ಕೆ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ತಡೆ ಒಡ್ಡಿದೆ ಎಂದು ವರದಿಯಾಗಿದೆ. .
ಈ ಟ್ರೋಫಿಯನ್ನು ದೇಶದಾದ್ಯಂತ ಕೊಂಡೊಯ್ಯಲು ಪಾಕಿಸ್ತಾನ ಕ್ರಿಕೆಟ್ ಮಂಡಳಿ ಸಿದ್ಧವಾಗಿದೆ. ಅಂದರೆ ಪಾಕಿಸ್ತಾನದ ವಿವಿಧ ಸ್ಥಳಗಳಲ್ಲಿ ಚಾಂಪಿಯನ್ಸ್ ಟ್ರೋಫಿಯ ಪ್ರದರ್ಶನವನ್ನು ನಡೆಸಲಾಗುತ್ತದೆ.

ಇದಕ್ಕಾಗಿ ಪಾಕಿಸ್ತಾನ, ಯಾವ್ಯಾವ ಸ್ಥಳಗಳಲ್ಲಿ ಚಾಂಪಿಯನ್ಸ್ ಟ್ರೋಫಿಯ ಪ್ರದರ್ಶನವನ್ನು ಏರ್ಪಡಿಸಬೇಕು ಎಂಬುದರ ಪಟ್ಟಿ ಮಾಡಿ, ಐಸಿಸಿಗೆ ಸಲ್ಲಿಸಿತ್ತು. ಆದರೆ ಪಾಕ್ ಸಲ್ಲಿಸಿದ ಪಟ್ಟಿಯಲ್ಲಿ ವಿವಾದಿತ ಜಾಗದ ಹೆಸರಿರುವುದನ್ನು ಮನಗಂಡಿರುವ ಐಸಿಸಿ, ಆ ಪ್ರದೇಶಕ್ಕೆ ಚಾಂಪಿಯನ್ಸ್ ಟ್ರೋಫಿಯನ್ನು ಕೊಂಡೊಯ್ಯದಂತೆ ಪಾಕ್ ಮಂಡಳಿಗೆ ತಾಕೀತು ಮಾಡಿದೆ.
ಐಸಿಸಿ ಚಾಂಪಿಯನ್ಸ್ ಟ್ರೋಫಿ 2025 ರ ಟ್ರೋಫಿ ಪ್ರದರ್ಶನ ಪ್ರವಾಸವನ್ನು ನವೆಂಬರ್ 16 ರಿಂದ ನಡೆಸಲಾಗುತ್ತದೆ ಎಂದು ಪಿಸಿಬಿ ಗುರುವಾರ ಪ್ರಕಟಿಸಿದೆ. ಇದು ಪಿಒಕೆ ಪ್ರದೇಶದ ಅಡಿಯಲ್ಲಿ ಬರುವ ಸ್ಕರ್ಡು, ಹುಂಜಾ ಮತ್ತು ಮುಜಫರಾಬಾದ್ ನಗರಗಳನ್ನು ಒಳಗೊಂಡಿದೆ.
“ಐಸಿಸಿ ಚಾಂಪಿಯನ್ಸ್ ಟ್ರೋಫಿ 2025 ಟ್ರೋಫಿ ಪ್ರವಾಸವು ಇಸ್ಲಾಮಾಬಾದ್‌ನಲ್ಲಿ ನವೆಂಬರ್ 16 ರಂದು ಪ್ರಾರಂಭವಾಗುತ್ತದೆ, ಸ್ಕರ್ಡು, ಮುರ್ರೆ, ಹುಂಜಾ ಮತ್ತು ಮುಜಫರಾಬಾದ್‌ನಂತಹ ರಮಣೀಯ ಪ್ರವಾಸಿ ತಾಣಗಳಿಗೆ ಭೇಟಿ ನೀಡಲಿದೆ. ನವೆಂಬರ್ 16-24 ರವರೆಗೆ ಓವಲ್‌ನಲ್ಲಿ 2017 ರಲ್ಲಿ ಸರ್ಫರಾಜ್ ಅಹ್ಮದ್ ಎತ್ತಿದ ಟ್ರೋಫಿಯ ಒಂದು ನೋಟವನ್ನು ನೋಡಿ” ಎಂದು ಪಿಸಿಬಿ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದೆ.

ಪ್ರಮುಖ ಸುದ್ದಿ :-   ಓಪನ್‌ಎಐ (OpenAI) ವಿಷಲ್‌ ಬ್ಲೋವರ್‌ ಸುಚಿರ್‌ ಬಾಲಾಜಿ ಅಪಾರ್ಟ್‌ಮೆಂಟ್‌ನಲ್ಲಿ ಶವವಾಗಿ ಪತ್ತೆ...!

ಆದಾಗ್ಯೂ, ವರದಿಗಳ ಪ್ರಕಾರ, ಬಿಸಿಸಿಐ ಗಮನಸೆಳೆದ ನಂತರ ಪಿಒಕೆ ಭಾಗವಾಗಿರುವ ಪ್ರದೇಶಗಳಲ್ಲಿ ‘ಟ್ರೋಫಿ ಪ್ರವಾಸ’ ನಡೆಸುವುದಕ್ಕೆ ಐಸಿಸಿ ನಿರಾಕರಿಸಿದೆ.
ಭಾರತ ಈಗಾಗಲೇ ಪಾಕಿಸ್ತಾನಕ್ಕೆ ತೆರಳುವುದಿಲ್ಲ ಎಂದು ಹೇಳಿಕೆ ನೀಡಿದ್ದು, ಅದನ್ನು ಐಸಿಸಿಗೆ ತಿಳಿಸಿದೆ. ಪಾಕಿಸ್ತಾನಕ್ಕೆ ಸ್ಪರ್ಧೆಗೆ ಹೋಗದಿರುವ ಭಾರತದ ನಿರ್ಧಾರದ ಬಗ್ಗೆ ವಿವರಣೆ ಕೇಳಲು ಪಿಸಿಬಿ ಐಸಿಸಿಗೆ ಪತ್ರ ಬರೆದಿದೆ.
ಏತನ್ಮಧ್ಯೆ, ಪಾಕಿಸ್ತಾನದಲ್ಲಿ ಪೂರ್ಣ ಪಂದ್ಯಾವಳಿಯನ್ನು ಆಯೋಜಿಸುವ ಬಗ್ಗೆ ತಾವು ಅಚಲವಾಗಿರುವುದರಿಂದ ಈ ವಿಷಯದ ಬಗ್ಗೆ ಕೋರ್ಟ್ ಆಫ್ ಆರ್ಬಿಟ್ರೇಶನ್ ಫಾರ್ ಸ್ಪೋರ್ಟ್ (ಸಿಎಎಸ್) ಅನ್ನು ಸಂಪರ್ಕಿಸುವ ಆಯ್ಕೆಯನ್ನು ಪಿಸಿಬಿ ಅನ್ವೇಷಿಸುತ್ತಿದೆ.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement