ಮಹಾರಾಷ್ಟ್ರ ಚುನಾವಣೆಯಲ್ಲಿ ಉದ್ಧವ ಠಾಕ್ರೆ ಮುಖ ಉಳಿಸಲು ರಾಜ ಠಾಕ್ರೆ ಪಕ್ಷದಿಂದ ಪರೋಕ್ಷ ಸಹಾಯ ; ಅದು ಆಗಿದ್ದು ಹೇಗೆ..?

ಮುಂಬೈ: ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಆಡಳಿತಾರೂಢ ಮಹಾಯುತಿ ಮೈತ್ರಿಕೂಟಕ್ಕೆ ಭಾರಿ ಜಯ ಗಳಿಸಿದೆ. ವಿಪಕ್ಷಗಳ ಮೈತ್ರಿಕೂಟವಾದ ಮಹಾ ವಿಕಾಸ್ ಅಘಾಡಿ (ಎಂವಿಎ) ಬಹಳ ಕಡಿಮೆ ಸ್ಥಾನಗಳಿಗೆ ಕುಸಿದಿದೆ. ಉದ್ಧವ್ ಠಾಕ್ರೆ ಅವರ ಶಿವಸೇನೆ (ಯುಬಿಟಿ) ಕೇವಲ 20 ಸ್ಥಾನಗಳನ್ನು ಮಾತ್ರ ಗಳಿಸಿದೆ. ಅದರಲ್ಲಿಯೂ ಇಷ್ಟು ಸ್ಥಾನ ಗಳಿಸಲು ಸೋದರಸಂಬಂಧಿ ರಾಜ ಠಾಕ್ರೆ ಅವರ ಮಹಾರಾಷ್ಟ್ರ ನವನಿರ್ಮಾಣ ಸೇನೆ (ಎಂಎನ್‌ಎಸ್) ಸ್ಪರ್ಧೇ ಉದ್ಧವ್ ಠಾಕ್ರೆ ಅವರ ಪಕ್ಷಕ್ಕೆ ಪರೋಕ್ಷವಾಗಿ ಸಹಾಯವಾಗಿರುವುದು ಫಲಿತಾಂಶದಲ್ಲಿ ಕಂಡುಬಂದಿದೆ…! ಯಾಕೆಂದರೆ ರಾಜ ಠಾಕ್ರೆ ಅವರನ್ನು ಉದ್ಧವ್‌ ಠಾಕ್ರೆ ಅವರ ರಾಜಕೀಯ ವಿರೋಧಿ ಎಂದೇ ಈಗ ಪರಿಗಣಿಸಲಾಗುತ್ತದೆ.
ನಿರ್ಣಾಯಕ ಕ್ಷೇತ್ರಗಳಲ್ಲಿ ಎಂಎನ್‌ಎಸ್ ಅಭ್ಯರ್ಥಿಗಳನ್ನು ಕಣಕ್ಕಿಳಿಸದಿದ್ದರೆ, ಉದ್ಧವ್ ಠಾಕ್ರೆ ಅವರ ಶಿವಸೇನೆ (ಯುಬಿಟಿ) ಕೇವಲ 10 ಸ್ಥಾನಗಳಲ್ಲಿ ಮಾತ್ರ ಗೆಲ್ಲುತ್ತಿತ್ತು ಎಂಬುದು ಅಂಕಿ ಅಂಶಗಳಿಂದ ಕಂಡುಬಂದಿದೆ. ಇವುಗಳಲ್ಲಿ ಹೆಚ್ಚಿನ ಸ್ಥಾನಗಳು ಏಕನಾಥ ಶಿಂಧೆ ಅವರ ಶಿವಸೇನೆ ಬಣಕ್ಕೆ ಹೋಗುತ್ತಿತ್ತು ಎಂದು ರಾಜಕೀಯ ವಿಶ್ಲೇಷಕರು ಸೂಚಿಸುತ್ತಾರೆ. ವರ್ಲಿ, ಮಾಹಿಮ್ ಮತ್ತು ಬಾಂದ್ರಾ ಪೂರ್ವದಂತಹ ಕ್ಷೇತ್ರಗಳು ಸೇರಿದಂತೆ ಎಂಟು ಕ್ಷೇತ್ರಗಳಲ್ಲಿ ಉದ್ಧವ್‌ ಠಾಕ್ರೆ ಶಿವಸೇನೆ ಗೆಲ್ಲಲ್ಲು ಎಂಎನ್‌ಎಸ್ ನಿರ್ಣಾಯಕ ಪಾತ್ರವನ್ನು ವಹಿಸಿದೆ ಎಂದು ಹೇಳಲಾಗುತ್ತದೆ. ಹೀಗಾಗಿ ಅವರು ತೆಗೆದುಕೊಂಡ ಮತಗಳು ಉದ್ಧವ್‌ ಠಾಕ್ರೆ ವಿರೋಧಿ ಮತಗಳು ಎಂದು ವಿಶ್ಲೇಶಿಸಲಾಗುತ್ತಿದೆ.

ಮಾಹಿಮ್‌ನಲ್ಲಿ, ಎಂಎನ್‌ಎಸ್ ಅಭ್ಯರ್ಥಿ ಅಮಿತ್ ಠಾಕ್ರೆ 33,062 ಮತಗಳನ್ನು ಗಳಿಸಿದ್ದಾರೆ. ಆಡಳಿತರೂಢ ಮೈತ್ರಿಕೂಟದ ಮತಗಳನ್ನು ವಿಭಜಿಸಿದರು ಮತ್ತು ಉದ್ಧವ್ ಠಾಕ್ರೆ ಅವರ ಅಭ್ಯರ್ಥಿ ಮಹೇಶ ಸಾವಂತ್ ಅವರು ಶಿಂಧೆ ಬಣದ ಸದಾ ಸರ್ವಾಂಕರ್ ವಿರುದ್ಧ 1,316 ಮತಗಳ ಕಡಿಮೆ ಅಂತರದಿಂದ ಗೆಲ್ಲಲು ಅನುವು ಮಾಡಿಕೊಟ್ಟರು. ಅದೇ ರೀತಿ ಉದ್ಧವ್‌ ಠಾಕ್ರೆ ಪುತ್ರ ಆದಿತ್ಯ ಠಾಕ್ರೆ ಸ್ಪರ್ಧಿಸಿದ್ದ ವರ್ಲಿಯಲ್ಲಿ ಎಂಎನ್‌ಎಸ್ ಅಭ್ಯರ್ಥಿ ಸಂದೀಪ ದೇಶಪಾಂಡೆ 19,367 ಮತಗಳನ್ನು ಗಳಿಸಿದ್ದಾರೆ. ಈ ಮತ ವಿಭಜನೆಯು ಶಿಂಧೆ ಅಭ್ಯರ್ಥಿ ಮಿಲಿಂದ್ ದಿಯೋರಾ ಅವರ ವಿರುದ್ಧ ಆದಿತ್ಯ ಠಾಕ್ರೆ 8,801 ಮತಗಳ ಅಂತರದಿಂದ ಗೆಲ್ಲಲು ಕಾರಣವಾಯಿತು ಎಂದು ಹೇಳಲಾಗುತ್ತಿದೆ.
ಎಂಎನ್‌ಎಸ್‌ ಪಕ್ಷವು ಪ್ರಭಾವ ಬೀರಿದ ಇತರ ನಿರ್ಣಾಯಕ ಕ್ಷೇತ್ರಗಳಲ್ಲಿ ವಿಖ್ರೋಲಿ, ಜೋಗೇಶ್ವರಿ ಪೂರ್ವ ಮತ್ತು ಕಲಿನಾ ಸೇರಿವೆ. ಜೋಗೇಶ್ವರಿ ಪೂರ್ವದಲ್ಲಿ, ಎಂಎನ್‌ಎಸ್ 64,239 ಮತಗಳನ್ನು ಗಳಿಸಿತು, ಉದ್ಧವ್ ಅವರ ಬಣವು 1,541 ಮತಗಳ ಅಲ್ಪ ಅಂತರದಿಂದ ಸ್ಥಾನ ಗೆದ್ದುಕೊಂಡಿತು.
ದಿಂಡೋಶಿ, ವರ್ಸೋವಾ ಮತ್ತು ಗುಹಾಗರ್‌ನಲ್ಲಿ ಇದೇ ರೀತಿಯ ಸನ್ನಿವೇಶವಿತ್ತು, ಅಲ್ಲಿ ಎಂಎನ್‌ಎಸ್‌ ಅಭ್ಯರ್ಥಿಗಳು ಶಿಂಧೆಯವರ ಶಿವಸೇನೆಯ ಸಾಕಷ್ಟು ಮತಗಳನ್ನು ಪಡೆದರು. ಉದಾಹರಣೆಗೆ, ಗುಹಾಗರ್‌ನಲ್ಲಿ ಉದ್ಧವ್ ಠಾಕ್ರೆ ಅವರ ಅಭ್ಯರ್ಥಿ 2,830 ಮತಗಳಿಂದ ಗೆದ್ದರು, ಅಲ್ಲಿ ಎಂಎನ್‌ಎಸ್ 6,712 ಮತಗಳನ್ನು ಪಡೆದು ಶಿಂಧೆ ಪಕ್ಷದ ಗೆಲುವನ್ನು ತಡೆಯಿತು.

ಪ್ರಮುಖ ಸುದ್ದಿ :-   ಆಪರೇಶನ್‌ ಸಿಂಧೂರ : ಪಾಕಿಸ್ತಾನದ ವಾಯುನೆಲೆಗಳ ಮೇಲಿನ ದಾಳಿಯಲ್ಲಿ 20% ಮೂಲಸೌಕರ್ಯ; ಹಲವಾರು ಯುದ್ಧ ವಿಮಾನಗಳು ನಾಶ...!

ವಿಕ್ರೋಲಿ: 66,093 ಮತಗಳನ್ನು ಪಡೆದ ಉದ್ಧವ ಶಿವಸೇನೆ ಅಭ್ಯರ್ಥಿ 15,526 ಮತಗಳಿಂದ ಜಯಗಳಿಸಿದ್ದಾರೆ. ಇಲ್ಲಿ ಎಂಎನ್‌ಎಸ್ ಅಭ್ಯರ್ಥಿ 16,813 ಮತಗಳನ್ನು ಪಡೆದಿದ್ದಾರೆ.
ಜೋಗೇಶ್ವರಿ ಪೂರ್ವ: ಉದ್ಧವ ಶಿವಸೇನೆ ಅಭ್ಯರ್ಥಿ 1,541 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಅವರು 77,044 ಮತಗಳನ್ನು ಪಡೆದರೆ, ಎಂಎನ್‌ಎಸ್ 64,239 ಮತಗಳನ್ನು ಪಡೆದಿದೆ.
ದಯಾಡೋಚಿ: ಗೆಲುವಿನ ಅಂತರ 6,182 ಮತಗಳಾಗಿದ್ದು, ಉದ್ಧವ ಶಿವಸೇನೆ ಅಭ್ಯರ್ಥಿ 76,437 ಮತಗಳನ್ನು ಪಡೆದಿದ್ದಾರೆ. ಇಲ್ಲಿ ಎಂಎನ್‌ಎಸ್ ಅಭ್ಯರ್ಥಿ 20,309 ಮತಗಳನ್ನು ಪಡೆದಿದ್ದಾರೆ.
ವರ್ಸೋವಾ: ಉದ್ಧವ ಶಿವಸೇನೆ ಅಭ್ಯರ್ಥಿ 65,396 ಮತಗಳನ್ನು ಪಡೆದು 1,600 ಮತಗಳಿಂದ ಜಯಗಳಿಸಿದ್ದಾರೆ. ಇಲ್ಲಿ ಎಂಎನ್‌ಎಸ್ ಅಭ್ಯರ್ಥಿ 6,752 ಮತಗಳನ್ನು ಪಡೆದಿದ್ದಾರೆ.
ಕಲಿನಾ: ಗೆಲುವಿನ ಅಂತರ 5,008 ಮತಗಳಾಗಿದ್ದು, ಉದ್ಧವ ಶಿವಸೇನೆ ಅಭ್ಯರ್ಥಿ 59,820 ಮತಗಳನ್ನು ಪಡೆದಿದ್ದಾರೆ. ಇಲ್ಲಿ ಎಂಎನ್‌ಎಸ್‌ ಅಭ್ಯರ್ಥಿ 6,062 ಮತಗಳನ್ನು ಪಡೆದಿದ್ದಾರೆ.
ವಂಡ್ರೆ ಪೂರ್ವ: 57,708 ಮತ ಪಡೆದು ಉದ್ಧವ ಶಿವಸೇನೆ ಅಭ್ಯರ್ಥಿ 11,365 ಮತಗಳಿಂದ ಗೆಲುವು ಸಾಧಿಸಿದ್ದಾರೆ. ಎಂಎನ್‌ಎಸ್ 16,074 ಮತಗಳನ್ನು ಪಡೆದಿದೆ.
ವಾನಿ: ಉದ್ಧವ ಶಿವಸೇನೆ ಅಭ್ಯರ್ಥಿ 94,618 ಮತಗಳನ್ನು ಪಡೆದು 15,560 ಮತಗಳಿಂದ ಜಯಗಳಿಸಿದ್ದಾರೆ. ಎಂಎನ್‌ಎಸ್ ಅಭ್ಯರ್ಥಿ 21,977 ಮತಗಳನ್ನು ಪಡೆದಿದ್ದಾರೆ.
ಗುಹಾಗರ್: ಗೆಲುವಿನ ಅಂತರ 2,830 ಮತಗಳು, ಉದ್ಧವ ಶಿವಸೇನೆ 71,241 ಮತಗಳನ್ನು ಪಡೆದಿದ್ದಾರೆ. ಇಲ್ಲಿ ಎಂಎನ್ಎಸ್ 6,712 ಮತಗಳನ್ನು ಪಡೆದಿದೆ.

ಪ್ರಮುಖ ಸುದ್ದಿ :-   ಜಮ್ಮು-ಕಾಶ್ಮೀರ : ಮೂವರು ಲಷ್ಕರ್ ಭಯೋತ್ಪಾದಕರನ್ನು ಹೊಡೆದುರುಳಿಸಿದ ಭದ್ರತಾ ಪಡೆಗಳು

ಮುಂಬೈ ಮತ್ತು ಇತರ ಪ್ರಮುಖ ಪ್ರದೇಶಗಳಲ್ಲಿ ಎಂಎನ್‌ಎಸ್‌ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದು ಉದ್ಧವ್ ಅವರ ಬಣಕ್ಕೆ ಪರೋಕ್ಷವಾಗಿ ಪ್ರಯೋಜನವನ್ನು ನೀಡಿತು, ಇದು ತನ್ನ ನಗರ ಭದ್ರಕೋಟೆಯನ್ನು ಉಳಿಸಿಕೊಳ್ಳಲು ಸಹಾಯ ಮಾಡಿತು. ವರ್ಲಿ, ಮಾಹಿಮ್ ಮತ್ತು ಬಾಂದ್ರಾ ಪೂರ್ವದಂತಹ ಸೀಟುಗಳು ಈ ಫಲಿತಾಂಶಕ್ಕೆ ವಿಶೇಷವಾಗಿ ನಿರ್ಣಾಯಕವಾಗಿವೆ.
ಏಕನಾಥ ಶಿಂಧೆ ಬಣಕ್ಕೆ, ಎಂಎನ್‌ಎಸ್‌ನ ಸ್ಪರ್ಧೆಯಿಂದ ಹಿನ್ನಡೆಯಾಯಿತು. ಎಂಎನ್‌ಎಸ್ ಈ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸದಿದ್ದರೆ ಶಿಂಧೆ ಅವರ ಶಿವಸೇನೆ 10 ಹೆಚ್ಚುವರಿ ಸ್ಥಾನಗಳನ್ನು ಗಳಿಸಬಹುದಿತ್ತು ಎಂದು ವಿಶ್ಲೇಷಕರು ಅಂದಾಜಿಸಿದ್ದಾರೆ. ಮತ ವಿಭಜನೆಯು ಉದ್ಧವ್ ಅವರ ಬಣಕ್ಕೆ ನಿರ್ಣಾಯಕ ವಿಜಯಗಳನ್ನು ಪಡೆಯಲು ಅವಕಾಶ ಮಾಡಿಕೊಟ್ಟಿತು, ಶಿಂಧೆ ಅವರು ನಿರೀಕ್ಷಿಸಿದ್ದಕ್ಕಿಂತ ಕಡಿಮೆ ಸ್ಥಾನಗಳನ್ನು ಪಡೆದರು.
ಎಂಎನ್‌ಎಸ್ ಒಂದೇ ಒಂದು ಸ್ಥಾನವನ್ನು ಗೆಲ್ಲದಿದ್ದರೂ ಚುನಾವಣಾ ಫಲಿತಾಂಶಗಳ ಮೇಲೆ ರಾಜ ಠಾಕ್ರೆಯವರ ಪರೋಕ್ಷ ಪ್ರಭಾವದಿಂದಗೆಲುವು ಸೋಲುಗಳ ಮೇಲೆ ಪ್ರಭಾವ ಬೀರುವ ಸಾಮರ್ಥ್ಯವನ್ನು ಎತ್ತಿ ತೋರಿಸುತ್ತದೆ. ಮತಗಳನ್ನು ವಿಭಜಿಸುವಲ್ಲಿ MNS ಪಾತ್ರವು ಭವಿಷ್ಯದ ಚುನಾವಣೆಗಳಲ್ಲಿ ಹೊಸ ಮೈತ್ರಿಗಳು ಮತ್ತು ತಂತ್ರಗಾರಿಕೆಗಳ ಸಾಧ್ಯತೆಗಳನ್ನು ತೆರೆದಿದೆ. ಈ ಫಲಿತಾಂಶಗಳ ನಂತರ, ರಾಜ ಠಾಕ್ರೆಯವರ ಎಂಎನ್‌ಎಸ್‌ (MNS) ಮಹಾರಾಷ್ಟ್ರದ ರಾಜಕೀಯ ರಂಗದಲ್ಲಿ ಸಮೀಕರಣಗಳನ್ನು ಬದಲಾಯಿಸುವ ಮತ್ತು ಹೊಸ ಶಕ್ತಿಯ ಡೈನಾಮಿಕ್ಸ್ ಅನ್ನು ರೂಪಿಸುವ ಮಹತ್ವದ ರಾಜಕೀಯ ಆಟಗಾರನಾಗಿ ಹೊರಹೊಮ್ಮಬಹುದು.
ಮಹಾರಾಷ್ಟ್ರದಲ್ಲಿ ಬಿಜೆಪಿಯು ಸ್ಪರ್ಧಿಸಿದ 149 ಸ್ಥಾನಗಳಲ್ಲಿ 132 ಸ್ಥಾನಗಳನ್ನು ಗೆದ್ದುಕೊಂಡಿದೆ, ಶಿವಸೇನೆ (ಏಕನಾಥ ಶಿಂಧೆ) 57 ಮತ್ತು ಅಜಿತ್ ಪವಾರ್ ಅವರ ಎನ್‌ಸಿಪಿ 41 ಸ್ಥಾನಗಳಲ್ಲಿ ಜಯಗಳಿಸಿದೆ. ವಿಪಕ್ಷಗಳಾದ ಕಾಂಗ್ರೆಸ್ ಕೇವಲ 16 ಸ್ಥಾನಗಳಲ್ಲಿ ಗೆಲುವು ಸಾಧಿಸಲು ಸಾಧ್ಯವಾಯಿತು, ಉದ್ಧವ ಶಿವಸೇನೆ 20ರಲ್ಲಿ ಸೇನಾ(ಯುಬಿಟಿ) ಮತ್ತು 10ರಲ್ಲಿ ಎನ್‌ಸಿಪಿ(ಶರದ್‌ ಪವಾರ್‌) ಜಯಗಳಿಸಿದೆ.

5 / 5. 3

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement