1000 ಮೆಟ್ರಿಕ್ ಟನ್‌ಗಳು : 7020084207400 ರೂ. ಮೌಲ್ಯದ ಈವರೆಗಿನ ವಿಶ್ವದ ಅತಿದೊಡ್ಡ ಚಿನ್ನದ ನಿಕ್ಷೇಪ ಪತ್ತೆ…!

ಜಾಗತಿಕವಾಗಿ ಚಿನ್ನದ ಬೆಲೆಯಲ್ಲಿ ಏರಿಕೆಯಾಗಿರುವ ಸಮಯದಲ್ಲೇ ಗಮನಾರ್ಹವಾದ ಸಂಶೋಧನೆಯಲ್ಲಿ, ಚೀನಾದ ಹುನಾನ್ ಪ್ರಾಂತ್ಯದಲ್ಲಿ ವಿಶ್ವದ ಅತಿದೊಡ್ಡ ಚಿನ್ನದ ನಿಕ್ಷೇಪ ಪತ್ತೆಯಾಗಿದೆ ಎಂದು ವರದಿಯಾಗಿದೆ.
ಚೀನಾದ ಸರ್ಕಾರಿ ಮಾಧ್ಯಮದ ಪ್ರಕಾರ, ಹುನಾನ್ ಪ್ರಾಂತ್ಯದ ಪಿಂಗ್ಜಿಯಾಂಗ್ ಕೌಂಟಿಯಲ್ಲಿ $83 ಶತಕೋಟಿ ಮೌಲ್ಯದ ಸುಮಾರು 1,000 ಮೆಟ್ರಿಕ್ ಟನ್‌ಗಳಷ್ಟು ಉತ್ತಮ ಗುಣಮಟ್ಟದ ಅದಿರು ಕಂಡುಬಂದಿದೆ, ಇದು ಇತಿಹಾಸದಲ್ಲಿ ಇದುವರೆಗೆ ಕಂಡುಹಿಡಿದ ಅತಿದೊಡ್ಡ ಚಿನ್ನದ ನಿಕ್ಷೇಪವಾಗಿದೆ. ಇದು ಈ ಹಿಂದೆ ಪತ್ತೆಯಾಗಿದ್ದ ದಕ್ಷಿಣ ಆಫ್ರಿಕಾದ ಸೌತ್ ಡೀಪ್ ಗಣಿ ಪ್ರದೇಶದ 900 ಮೆಟ್ರಿಕ್ ಟನ್‌ಗಳ ನಿಕ್ಷೇಪದ ದಾಖಲೆಯನ್ನೂ ಮೀರಿಸಿದೆ.
ಚೀನಾದ ಮಾಧ್ಯಮಗಳ ಪ್ರಕಾರ, ಹುನಾನ್ ಪ್ರಾಂತ್ಯದ ಭೂವೈಜ್ಞಾನಿಕ ಬ್ಯೂರೋದ ಭೂವಿಜ್ಞಾನಿಗಳು 2 ಕಿಲೋಮೀಟರ್ ಆಳದಲ್ಲಿ ಚಿನ್ನದ ನಿಕ್ಷೇಪಗಳಿವೆ ಎಂದು ಪತ್ತೆ ಮಾಡಿದ್ದಾರೆ. ಪ್ರಾಥಮಿಕ ಮೌಲ್ಯಮಾಪನಗಳು ಈ ನಿಕ್ಷೇಪಗಳಲ್ಲಿ ಸುಮಾರು 300 ಮೆಟ್ರಿಕ್ ಟನ್‌ಗಳಷ್ಟು ಚಿನ್ನ ಇರಬಹುದು ಎಂದು ಅಂದಾಜಿಸಿವೆ.

ಭೂವಿಜ್ಞಾನಿಗಳು ಹೆಚ್ಚುವರಿ ಚಿನ್ನದ ನಿಕ್ಷೇಪಗಳು ಇನ್ನೂ ಹೆಚ್ಚಿನ ಆಳದಲ್ಲಿರಬಹುದು, ಪ್ರದೇಶದ ಮುಂದುವರಿದ 3D ಮಾಡೆಲಿಂಗ್ ಆಧಾರದ ಮೇಲೆ ಪ್ರಾಯಶಃ 3 ಕಿಲೋಮೀಟರ್ ವರೆಗೆ ತಲುಪಬಹುದು ಎಂದು ಅಂದಾಜಿಸಿದ್ದಾರೆ.
ಹುನಾನ್ ಜಿಯೋಲಾಜಿಕಲ್ ಬ್ಯೂರೋದ ಹಿರಿಯ ಪ್ರಾಸ್ಪೆಕ್ಟರ್ ಚೆನ್ ರುಲಿನ್ ಅವರು ಕೊರೆಯಲಾದ ರಾಕ್ ಕೋರ್‌ಗಳಲ್ಲಿ ಚಿನ್ನದ ಅಂಶವು ಕಂಡುಬಂದಿದೆ ಮತ್ತು ಕೋರ್ ಸ್ಯಾಂಪಲ್‌ಗಳು ಪ್ರತಿ ಮೆಟ್ರಿಕ್ ಟನ್ ಅದಿರು ಸುಮಾರು 138 ಗ್ರಾಂ ಚಿನ್ನವನ್ನು ನೀಡಬಹುದು ಎಂದು ಸೂಚಿಸುತ್ತವೆ.
ಇತ್ತೀಚಿನ ಅಂದಾಜಿನ ಪ್ರಕಾರ, ಚೀನಾ ಈಗಾಗಲೇ ಜಾಗತಿಕ ಚಿನ್ನದ ಮಾರುಕಟ್ಟೆಯಲ್ಲಿ ಪ್ರಬಲ ಉತ್ಪಾದಕನಾಗಿದ್ದು, 2,000 ಟನ್‌ಗಳಿಗಿಂತ ಹೆಚ್ಚಿನ ರಿಸರ್ವ್‌ ಹೊಂದಿದೆ. ಬೃಹತ್ ಚಿನ್ನದ ನಿಕ್ಷೇಪದ ಆವಿಷ್ಕಾರವು ಚೀನಾದ ಚಿನ್ನದ ಉದ್ಯಮವನ್ನು ಮತ್ತಷ್ಟು ಬಲಪಡಿಸಲಿದೆ, ಇದು ಪ್ರಸ್ತುತ ವಿಶ್ವದ ಒಟ್ಟು ಚಿನ್ನದ ಉತ್ಪಾದನೆಯಲ್ಲಿ 10%ರಷ್ಟು ಕೊಡುಗೆ ನೀಡುತ್ತದೆ.

ಪ್ರಮುಖ ಸುದ್ದಿ :-   ವೀಡಿಯೊ..| ತರಗತಿಯಲ್ಲಿ ಪಾಠ ಕೇಳುತ್ತಿದ್ದಾಗಲೇ ಕುಸಿದು ಬಿದ್ದು ವಿದ್ಯಾರ್ಥಿನಿ ಸಾವು ; ಶಾಕಿಂಗ್‌ ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಚೀನಾದಲ್ಲಿ ಈ ಬೃಹತ್‌ ಚಿನ್ನದ ನಿಕ್ಷೇಪ ಪತ್ತೆಯಾಗುವುದಕ್ಕೂ ಮುಂಚಿತವಾಗಿ, ದಕ್ಷಿಣ ಆಫ್ರಿಕಾ, ಇಂಡೋನೇಷ್ಯಾ, ರಷ್ಯಾ ಮತ್ತು ಅಮೆರಿಕ ಪ್ರಮುಖವಾಗಿ ಜಗತ್ತಿನ ಪ್ರಮುಖ ಚಿನ್ನದ ನಿಕ್ಷೇಪಗಳಿರುವ ರಾಷ್ಟ್ರಗಳಾಗಿದ್ದವು. ಈಗ, ಚೀನಾದ ಪಿಂಗ್ಜಿಯಾಂಗ್ ಕೌಂಟಿಯು ಚಿನ್ನದ ಗಣಿಗಾರಿಕೆಯ ನಕ್ಷೆಯಲ್ಲಿ ಅಗ್ರ ಸ್ಥಾನಕ್ಕೆ ಏರಲು ಸಿದ್ಧವಾಗಿದೆ.
ಪ್ರಮುಖ ಚಿನ್ನದ ಗಣಿಗಳು…
ಸೌತ್ ಡೀಪ್ ಗೋಲ್ಡ್ ಮೈನ್, ದಕ್ಷಿಣ ಆಫ್ರಿಕಾ
ಗ್ರಾಸ್ಬರ್ಗ್ ಗೋಲ್ಡ್ ಮೈನ್, ಇಂಡೋನೇಷ್ಯಾ
ಒಲಿಂಪಿಯಾಡಾ ಚಿನ್ನದ ಗಣಿ, ರಷ್ಯಾ
ಲಿಹಿರ್ ಗೋಲ್ಡ್ ಮೈನ್, ಪಪುವಾ ನ್ಯೂ ಗಿನಿಯಾ
ನಾರ್ಟೆ ಅಬಿರ್ಟೊ ಗೋಲ್ಡ್ ಮೈನ್, ಚಿಲಿ
ಕಾರ್ಲಿನ್ ಟ್ರೆಂಡ್ ಗೋಲ್ಡ್ ಮೈನ್, ಅಮೆರಿಕ
ಬೋಡಿಂಗ್ಟನ್ ಗೋಲ್ಡ್ ಮೈನ್, ಆಸ್ಟ್ರೇಲಿಯಾ
ಎಂಪೊನೆಂಗ್ ಚಿನ್ನದ ಗಣಿ, ದಕ್ಷಿಣ ಆಫ್ರಿಕಾ
ಪ್ಯೂಬ್ಲೋ ವಿಜೊ ಗೋಲ್ಡ್ ಮೈನ್, ಡೊಮಿನಿಕನ್ ರಿಪಬ್ಲಿಕ್
ಕೊರ್ಟೆಜ್ ಗೋಲ್ಡ್ ಮೈನ್, ಅಮೆರಿಕ
ತಜ್ಞರು ಈ ಇದರ ಬಗ್ಗೆ ಇನ್ನಷ್ಟು ಆವಿಷ್ಕಾರ ಮಾಡಿದ ನಂತರ, ಈ ಅಭೂತಪೂರ್ವ ಆವಿಷ್ಕಾರವು ಚಿನ್ನದ ಉದ್ಯಮದ ಭೂದೃಶ್ಯವನ್ನು ಮರುರೂಪಿಸಬಹುದಾಗಿದೆ. ಪಿಂಗ್ಜಿಯಾಂಗ್ ಕೌಂಟಿ ಚಿನ್ನದ ಹೊಸ ಜಾಗತಿಕ ರಾಜಧಾನಿಯಾಗಲಿದೆಯೇ? ಕಾಲವೇ ಉತ್ತರಿಸುತ್ತದೆ.

ಪ್ರಮುಖ ಸುದ್ದಿ :-   75 ಬಾರಿ ಸಂವಿಧಾನ ಬದಲಾಯಿಸಿರುವ ಕಾಂಗ್ರೆಸ್...ಅದಕ್ಕೆ ತುರ್ತು ಪರಿಸ್ಥಿತಿ ಕಳಂಕ ಅಳಿಸಿಹಾಕಲು ಸಾಧ್ಯವಿಲ್ಲ ; ಪ್ರಧಾನಿ ಮೋದಿ ವಾಗ್ದಾಳಿ

ಚಿನ್ನದ ನಿಕ್ಷೇಪಗಳು ರೂಪುಗೊಳ್ಳುವುದು ಹೇಗೆ..?
ಭೂವಿಜ್ಞಾನಿಗಳ ಪ್ರಕಾರ, ಖನಿಜ-ಸಮೃದ್ಧ ದ್ರವಗಳು ಭೂಮಿಯ ಹೊರಪದರದಲ್ಲಿನ ಬಿರುಕುಗಳ ಮೂಲಕ ಚಲಿಸುತ್ತವೆ ಮತ್ತು ಸುತ್ತಮುತ್ತಲಿನ ಬಂಡೆಗಳಿಂದ ಚಿನ್ನವನ್ನು ಸಂಗ್ರಹಿಸುತ್ತವೆ ಮತ್ತು ತಾಪಮಾನ ಅಥವಾ ಒತ್ತಡ ಬದಲಾದಾಗ ಚಿನ್ನವನ್ನು ಬಿರುಕುಗಳಲ್ಲಿ ಸಂಗ್ರಹಿಸುತ್ತವೆ. ಚಿನ್ನದ ನಿಕ್ಷೇಪವಾಗಲು ಈ ಭೌಗೋಳಿಕ ಪ್ರಕ್ರಿಯೆಗಳು ಲಕ್ಷಾಂತರ ವರ್ಷಗಳನ್ನು ತೆಗೆದುಕೊಳ್ಳುತ್ತವೆ.
ಚಿನ್ನವು ರೂಪುಗೊಳ್ಳುವ ಮತ್ತೊಂದು ಪ್ರಕ್ರಿಯೆಯು ಪೀಜೋಎಲೆಕ್ಟ್ರಿಸಿಟಿಯಾಗಿದ್ದು ಅದು ದೊಡ್ಡ ಚಿನ್ನದ ಗಟ್ಟಿಗಳ ರಚನೆಗೆ ಕಾರಣವಾಗಬಹುದು. ಭೂಕಂಪಗಳಿಂದ ಉಂಟಾಗುವ ಭೂವೈಜ್ಞಾನಿಕ ಒತ್ತಡವು ಪೀಜೋಎಲೆಕ್ಟ್ರಿಸಿಟಿಯನ್ನು ಸಕ್ರಿಯಗೊಳಿಸುತ್ತದೆ.

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement