ವೀಡಿಯೊ..| ಹೆದ್ದಾರಿ ಬದಿ ಇದ್ದ ಹೊಟೇಲ್‌ ಒಳಗೆ ನುಗ್ಗಿದ ಕಾರು ; ಮೂವರಿಗೆ ಗಾಯ

ಅಹಮದಾಬಾದ್ : ಕಾರೊಂದು ರಸ್ತೆ ಬದಿಯ ರೆಸ್ಟೋರೆಂಟಿಗೆ ನುಗ್ಗಿದ ಘಟನೆ ಗುಜರಾತ್‌ ಛೋಟಾ ಉದಯಪುರ (Chhota Udaipur) ಜಿಲ್ಲೆಯಿಂದ ವರದಿಯಾಗಿದ್ದು, ಸಿಸಿ ಕೆಮರಾದಲ್ಲಿ ದಾಖಲಾಗಿದ್ದ ಈ ಅಪಘಾತದ ವೀಡಿಯೊದಲ್ಲಿ ಸೆರೆಯಾಗಿದೆ.
ರೆಸ್ಟೊರೆಂಟ್ ಒಂದರಲ್ಲಿ ಗ್ರಾಹಕರು ಆಹಾರ ಸೇವಿಸುತ್ತ ಕುಳಿತಿದ್ದಾಗ ಕಾರೊಂದು ಸೀದಾ ರೆಸ್ಟೊರೆಂಟ್ ಒಳಗೇ ನುಗ್ಗಿದೆ. ಕ್ಷಣಮಾತ್ರದಲ್ಲಿ ಆ ಹೊಟೇಲನ್ನು ಸಂಪೂರ್ಣವಾಗಿ ಧ್ವಂಸಗೊಳಿಸಿದೆ.
ಡಿ.10ರ ಬೆಳ್ಳಂಬೆಳಗ್ಗೆ ಈ ಘಟನೆ ನಡೆದಿದೆ ಎಂದು ಹೇಳಲಾಗಿದ್ದು, ಅಪಘಾತದ ದೃಶ್ಯಾವಳಿಗಳು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಕಾರು ನುಗ್ಗಿದ ರಭಸಕ್ಕೆ ರೆಸ್ಟೋರೆಂಟಿನಲ್ಲಿದ್ದ ಟೇಬಲ್, ಚೇರ್‌ಗಳು ಹಾರಿ ಬಿದ್ದಿವೆ. ಈ ಘಟನೆಯಲ್ಲಿ ರೆಸ್ಟೋರೆಂಟ್ ಒಳಗಿದ್ದ ಮೂವರು ಗಾಯಗೊಂಡಿದ್ದಾರೆ. ಅಪಘಾತವಾದ ಕೂಡಲೇ ಕಾರಿನ ಹಾರ್ನ್ ನಿರಂತರವಾಗಿ ಮೊಳಗಲಾರಂಭಿಸಿದೆ, ಕಾರಿನ ಹೆಡ್ ಲೈಟ್ ಅಲ್ಲಿದ್ದ ಬಟ್ಟೆಯ ಗೋಡೆ ಮೇಲೆ ಪ್ರತಿಫಲಿಸಲಾರಂಭಿಸಿದೆ.

ಈ ಕಾರು ನುಗ್ಗಿದ ಟೇಬಲ್‌ನಲ್ಲಿ ಫೋನಿನಲ್ಲಿ ಮಾತನಾಡುತ್ತ ಕುಳಿತಿದ್ದ ವ್ಯಕ್ತಿ ಕಾರು ತನ್ನತ್ತ ನುಗ್ಗಿ ಬರುತ್ತಿರುವುದನ್ನು ಕಂಡು ಎದ್ದು ಓಡಿದ್ದಾನೆ. ಆದರೆ ಪಕ್ಕದಲ್ಲೇ ಇದ್ದ ಇನ್ನೊಂದು ಟೇಬಲ್‌ನಲ್ಲಿ ಕುಳಿತಿದ್ದವರ ಮೇಲೆ ಎಸ್.ಯು.ವಿ ಕಾರು ನುಗ್ಗಿದೆ. ಅಧಿಕಾರಿಗಳ ಪ್ರಕಾರ, ಈ ಅಪಘಾತದಲ್ಲಿ ಮೂವರು ಗಾಯಗೊಂಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಸದ್ಯಕ್ಕೆ ಯಾವುದೇ ಪ್ರಕರಣ ದಾಖಲಾಗಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ.
ಹೆದ್ದಾರಿ ಬದಿಯಲ್ಲಿ ಕಾರ್ಯಾಚರಿಸುತ್ತಿದ್ದ ಈ ರೆಸ್ಟೋರೆಂಟ್ ಅಗತ್ಯ ಅನುಮತಿ ಪತ್ರಗಳಿಲ್ಲದೇ ವ್ಯವಹರಿಸುತ್ತಿತ್ತು ಎನ್ನಲಾಗಿದ್ದು, ಈ ಕಾರಣದಿಂದ ಇದರ ಮಾಲಕರು ಯಾವುದೇ ದೂರು ನೀಡಿಲ್ಲ ಎಂದು ಎನ್ನಲಾಗಿದೆ. ಅಲ್ಲದೆ, ಈ ಅಪಘಾತದಲ್ಲಿ ಗಾಯಗೊಂಡವರಿಗೂ ಸಣ್ಣಪುಟ್ಟ ಗಾಯಗಳಾಗಿದ್ದರಿಂದ ಅವರೂ ಪ್ರಕರಣ ದಾಖಲಿಸಿಲ್ಲ ಎಂದು ಹೇಳಲಾಗಿದೆ.

ಪ್ರಮುಖ ಸುದ್ದಿ :-   ದೆಹಲಿ ಹೋಟೆಲ್‌ನಲ್ಲಿ ಅಗ್ನಿ ಅವಘಡ : 21 ಮಂದಿ ಸಾವು ; ಜೀವ ಉಳಿಸಿಕೊಳ್ಳಲು ಕಟ್ಟಡದಿಂದ ಧುಮುಕಿದ ಇಬ್ಬರು ಮಹಿಳೆಯರು

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement