ವೀಡಿಯೊ…| ಮೊಬೈಲ್ ಕಸಿದುಕೊಂಡ ಶಿಕ್ಷಕನಿಗೆ ಕ್ಲಾಸ್​ ರೂಂನಲ್ಲೇ ಚಾಕುವಿನಿಂದ ಇರಿದ ವಿದ್ಯಾರ್ಥಿಗಳು…!

ಉತ್ತರ ಪ್ರದೇಶದ ಬಹ್ರೈಚ್ ಜಿಲ್ಲೆಯ ಮಿಹಿನ್‌ಪುರವಾದಲ್ಲಿರುವ ನವಯುಗ ಇಂಟರ್ ಕಾಲೇಜಿನಲ್ಲಿ ಓದುತ್ತಿರುವ 11 ನೇ ತರಗತಿಯ ವಿದ್ಯಾರ್ಥಿ ಗುರುವಾರ (ಡಿಸೆಂಬರ್ 12) ತರಗತಿಯಲ್ಲಿ ತನ್ನ ಮೊಬೈಲ್ ಫೋನ್ ಜಪ್ತಿ ಮಾಡಿದ್ದಕ್ಕಾಗಿ ತನ್ನ ಇಂಗ್ಲಿಷ್ ಶಿಕ್ಷಕರಿಗೆ ಚಾಕುವಿನಿಂದ ಇರಿದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಶಿಕ್ಷಕ ರಾಜೇಂದ್ರ ಪ್ರಸಾದ ಅವರಿಗೆ ಗಂಭೀರ ಗಾಯಗಳಾಗಿದ್ದು, ಜಿಲ್ಲಾ ವೈದ್ಯಕೀಯ ಕಾಲೇಜಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅವರು ತಿಳಿಸಿದ್ದಾರೆ.
“ಮೂರು ದಿನಗಳ ಹಿಂದೆ, ಕ್ಯಾಂಪಸ್‌ನಲ್ಲಿ ಸೆಲ್ ಫೋನ್ ಬಳಸುವುದನ್ನು ನಿಷೇಧಿಸಿರುವುದರಿಂದ ಶಿಕ್ಷಕರು ಹಲವಾರು ವಿದ್ಯಾರ್ಥಿಗಳ ಮೊಬೈಲ್ ಫೋನ್‌ಗಳನ್ನು ವಶಕ್ಕೆ ಪಡೆದರು. ಇದರಿಂದ ಕೋಪಗೊಂಡ ಹುಡುಗನೊಬ್ಬ ಶಿಕ್ಷಕರು ಗುರುವಾರ ಹಾಜರಾತಿ ತೆಗೆದುಕೊಳ್ಳುವಾಗ ಅವರ ಮೇಲೆ ಚಾಕುವಿನಿಂದ ಮೇಲೆ ಹಲ್ಲೆ ನಡೆಸಿದ್ದಾನೆ ಎಂದು ಸಹಾಯಕ ಪೊಲೀಸ್ ಅಧೀಕ್ಷಕ (ಎಎಸ್‌ಪಿ-ನಗರ) ರಮಾನಂದ ಪ್ರಸಾದ ಕುಶ್ವಾಹ ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ. ಶಿಕ್ಷಕನ ಕುಟುಂಬಸ್ಥರು ನೀಡಿದ ದೂರಿನ ಆಧಾರದ ಮೇಲೆ ಆರೋಪಿ ವಿದ್ಯಾರ್ಥಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ಅಪರಾಧಕ್ಕೆ ಬಳಸಿದ್ದ ಚಾಕುವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

ರಾಜೇಂದ್ರ ಪ್ರಸಾದ ವರ್ಮಾ 11ನೇ ತರಗತಿಯ ಇಂಗ್ಲಿಷ್ ಶಿಕ್ಷಕರು ಮತ್ತು ತರಗತಿ ಶಿಕ್ಷಕರಾಗಿದ್ದಾರೆ. ಮೊಬೈಲ್‌ ನಿಷೇಧದ ಹೊರತಾಗಿಯೂ ತರಗತಿಯಲ್ಲಿ ಬಳಸುತ್ತಿದ್ದ ಮೂವರು ವಿದ್ಯಾರ್ಥಿಗಳಿಂದ ಈ ಹಿಂದೆ ಮೊಬೈಲ್ ಫೋನ್‌ಗಳನ್ನು ಅವರು ವಶಪಡಿಸಿಕೊಂಡಿದ್ದರು. ಮರುದಿನ ವಿದ್ಯಾರ್ಥಿಗಳ ಪೋಷಕರಿಗೆ ಅವುಗಳನ್ನು ಹಿಂತಿರುಗಿಸಲಾಯಿತು. ಆದರೆ, ಮೊಬೈಲ್‌ ಜಪ್ತಿ ಮಾಡಿದ್ದರಿಂದ ಕುಪಿತಗೊಂಡ ವಿದ್ಯಾರ್ಥಿಗಳು ಶಿಕ್ಷಕರ ಮೇಲೆ ಸೇಡು ತೀರಿಸಿಕೊಳ್ಳಲು ಯೋಜಿಸಿದ್ದರು.
ದಾಳಿಯ ದಿನ, ಶಿಕ್ಷಕರು ತರಗತಿಗೆ ಪ್ರವೇಶಿಸಿದಾಗ ಅವರಲ್ಲಿ ಇಬ್ಬರು ವಿದ್ಯಾರ್ಥಿಗಳು ಅವರ ಮುಂದೆ ಮತ್ತು ಹಿಂದೆ ನಿಂತಿದ್ದರು, ಅವರಲ್ಲಿ ಒಬ್ಬ ಶಿಕ್ಷಕರು ಹಾಜರಾತಿ ತೆಗೆದುಕೊಳ್ಳುತ್ತಿದ್ದಾಗ ಅವರ ಕುತ್ತಿಗೆಗೆ ಇದ್ದಕ್ಕಿದ್ದಂತೆ ಚಾಕು ಹಾಕಿದ್ದಾನೆ. ತನ್ನನ್ನು ರಕ್ಷಿಸಿಕೊಳ್ಳುವ ಪ್ರಯತ್ನದಲ್ಲಿ, ಶಿಕ್ಷಕನು ದಾಳಿಕೋರರನ್ನು ದೂರ ತಳ್ಳಿದ್ದಾರೆ. ಆದರೆ ಆತ ಶಿಕ್ಷಕನ ಮೇಲೆ ಆಕ್ರಮಣ ಮುಂದುವರೆಸಿದ್ದಾನೆ. ಹಾಗೂ ಅವರ ತಲೆಯ ಮೇಲೆ ಅನೇಕ ಬಾರಿ ಹೊಡೆದಿದ್ದಾನೆ. ಶಿಕ್ಷಕರು ನೆಲಕ್ಕೆ ಬಿದ್ದಿದ್ದಾರೆ. ತೀವ್ರವಾಗಿ ಗಾಯಗೊಂಡಿದ್ದಾರೆ.

ಆಸ್ಪತ್ರೆಯ ಬೆಡ್‌ನಿಂದ ಮಾಧ್ಯಮದವರೊಂದಿಗೆ ಮಾತನಾಡಿದ ರಾಜೇಂದ್ರ ಪ್ರಸಾದ ಅವರು, ”ಕೆಲವು ದಿನಗಳ ಹಿಂದೆ ಕೆಲವು ವಿದ್ಯಾರ್ಥಿಗಳ ಮೊಬೈಲ್ ಫೋನ್‌ಗಳನ್ನು ವಶಕ್ಕೆ ಪಡೆಯಲಾಯಿತು. ನಂತರ ಅದನ್ನು ಹಿಂತಿರುಗಿಸಲಾಯಿತು, ಆದರೆ ಕೆಲವು ವಿದ್ಯಾರ್ಥಿಗಳ ಈ ನಡೆಯಿಂದ ಅಸಮಾಧಾನಗೊಂಡರು. ಮೂವರು ವಿದ್ಯಾರ್ಥಿಗಳು ನನ್ನ ಮೇಲೆ ಹಲ್ಲೆ ನಡೆಸಿದರು. ಒಬ್ಬನು ಚಾಕುವನ್ನು ಜೋಡಿಸಿದನು, ಇನ್ನೊಬ್ಬನು ನನ್ನ ಮೇಲೆ ದಾಳಿ ಮಾಡಿದನು, ಮೂರನೆಯ ವಿದ್ಯಾರ್ಥಿಯು ಅವರಿಗೆ ಸಹಾಯ ಮಾಡಿದ್ದಾನೆ. ನಾನು ದಾಳಿಕೋರನನ್ನು ತಳ್ಳಲು ಪ್ರಯತ್ನಿಸಿದಾಗ ಆತ ನನ್ನ ತಲೆಯ ಮೇಲೆ ಹೊಡೆದಿದ್ದಾನೆ ಎಂದು ತಿಳಿಸಿದರು.

ಪ್ರಮುಖ ಸುದ್ದಿ :-   ಹಮಾಸ್‌ ಜೊತೆ ನಂಟು ; ಅಮೆರಿಕದಲ್ಲಿ ಭಾರತದ ಸಂಶೋಧನಾ ವಿದ್ಯಾರ್ಥಿಯ ಬಂಧನ : ಶೀಘ್ರವೇ ಗಡೀಪಾರು

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement