ಓಪನ್‌ಎಐ (OpenAI) ವಿಷಲ್‌ ಬ್ಲೋವರ್‌ ಸುಚಿರ್‌ ಬಾಲಾಜಿ ಅಪಾರ್ಟ್‌ಮೆಂಟ್‌ನಲ್ಲಿ ಶವವಾಗಿ ಪತ್ತೆ…!

ಖ್ಯಾತ ಆರ್ಟಿಫಿಶಿಯಲ್‌ ಇಂಟಲಿಜೆನ್ಸ್‌ ಕಂಪನಿ ಓಪನ್‌ಎಐನಲ್ಲಿ ಮಾಜಿ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (ಎಐ) ಸಂಶೋಧಕರಾಗಿದ್ದ ಭಾರತೀಯ ಮೂಲದ ಸುಚಿರ್ ಬಾಲಾಜಿ (26 ವರ್ಷ)ಅವರು ಸ್ಯಾನ್ ಫ್ರಾನ್ಸಿಸ್ಕೋ ಅಪಾರ್ಟ್ಮೆಂಟ್‌ನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.
“ಪ್ರಾಥಮಿಕ ತನಿಖೆಯ ಸಮಯದಲ್ಲಿ ಪ್ರಾಥಮಿಕ ತನಿಖೆಯಲ್ಲಿ ಯಾವುದೇ ಅಹಿತಕರ ಅಂಶಗಳು ಕಂಡು ಬಂದಿಲ್ಲ,” ಎಂದು ಸ್ಯಾನ್ ಫ್ರಾನ್ಸಿಸ್ಕೋ ಪೊಲೀಸ್ ಇಲಾಖೆಯ ವಕ್ತಾರ ರಾಬರ್ಟ್ ರುಯೆಕಾ ಮಾಧ್ಯಮಗಳಿಗೆ ತಿಳಿಸಿದ್ದಾರೆ. ದಿ ಮರ್ಕ್ಯುರಿ ನ್ಯೂಸ್ ಪ್ರಕಾರ, ಸುಚಿರ್ ಬಾಲಾಜಿ ನವೆಂಬರ್ 26 ರಂದು ಬುಕಾನನ್ ಸ್ಟ್ರೀಟ್ ಅಪಾರ್ಟ್ಮೆಂಟ್ನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.
ಲಿಂಕ್‌ಡೇನ್‌ ಪ್ರೊಫೈಲ್‌ ಪ್ರಕಾರ ಅವರು 2020ರ ನವೆಂಬರ್‌ನಿಂದ 2024ರ ಆಗಸ್ಟ್‌ವರೆಗೆ ಇವರು ಓಪನ್‌ಎಐ ಕಂಪನಿಯಲ್ಲಿ ಕಾರ್ಯನಿರ್ವಹಿಸಿದ್ದರು.

ಓಪನ್‌ಎಐ (OpenAI) ಕೃತಿಸ್ವಾಮ್ಯ ಕಾನೂನನ್ನು ಉಲ್ಲಂಘಿಸಿದೆ ಎಂದು ಸುಚಿರ್ ಬಾಲಾಜಿ ಹೇಳಿದ್ದರು. ಅಕ್ಟೋಬರ್‌ನಲ್ಲಿ, ಸುಚಿರ್ ಬಾಲಾಜಿ ಓಪನ್‌ಎಐ ಹಕ್ಕುಸ್ವಾಮ್ಯ ಕಾನೂನನ್ನು ಉಲ್ಲಂಘಿಸುತ್ತಿದೆ ಎಂದು ಆರೋಪಿಸಿದ್ದರು. “ನಾನು ನಂಬಿದ್ದನ್ನು ನೀವು ನಂಬಿದರೆ, ನೀವು ಕಂಪನಿಯನ್ನು ತೊರೆಯಬೇಕು” ಎಂದು ಅವರು ನ್ಯೂಯಾರ್ಕ್ ಟೈಮ್ಸ್‌ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದರು. ಚಾಟ್‌ ಜಿಪಿಟಿಯಂತಹ ತಂತ್ರಜ್ಞಾನಗಳು ಅಂತರ್ಜಾಲವನ್ನು ಹಾನಿಗೊಳಿಸುತ್ತಿವೆ ಎಂದು ಅವರು ಹೇಳಿದರು.
“ಸಾಕಷ್ಟು ಜನರೇಟಿವ್‌ ಎಐ ಉತ್ಪನ್ನಗಳಿಗೆ ನ್ಯಾಯೋಚಿತ ಬಳಕೆ ಎನ್ನುವುದು ನಂಬಲು ಸಾಧ್ಯವಾಗದ ಸಂಗತಿ,” ಎಂದೂ ಹೇಳಿದ್ದರು.

ಬ್ಲಾಗ್ ಪೋಸ್ಟ್‌ನಲ್ಲಿ, ಜನರೇಟಿವ್‌ ಎಐ (generative AI) ನ್ಯಾಯಯುತ ಬಳಕೆಗೆ ಅರ್ಹವಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ನಿರ್ಧರಿಸುವ ನಾಲ್ಕು ಅಂಶಗಳನ್ನು ಬಾಲಾಜಿ ವಿವರಿಸಿದ್ದರು. ನಾಲ್ಕು ಅಂಶಗಳ ಪೈಕಿ “ಹಕ್ಕುಸ್ವಾಮ್ಯದ ಕೆಲಸದ ಮೌಲ್ಯ ಅಥವಾ ಸಂಭಾವ್ಯ ಮಾರುಕಟ್ಟೆಯ ಮೇಲೆ ಬಳಕೆಯ ಪರಿಣಾಮದ ಬಗ್ಗೆ ಹೇಳಿದ್ದರು.
ಎಐ ಮಾಡೆಲ್‌ಗಳನ್ನು ಸಿದ್ಧಪಡಿಸಲು ದತ್ತಾಂಶವನ್ನು ನಕಲು ಮಾಡುವ ಓಪನ್‌ಎಐ ಪ್ರಕ್ರಿಯೆಯು ಸಂಭಾವ್ಯ ಹಕ್ಕುಸ್ವಾಮ್ಯ ಉಲ್ಲಂಘನೆಯಾಗಿದೆ. ಉತ್ಪಾದಿಸಿದ ಮಾಡೆಲ್‌ಗಳು ತಮ್ಮ ತರಬೇತಿಗೆ ಬಳಸಿದ ದತ್ತಾಂಶಕ್ಕೆ ಹೋಲುವ ಔಟ್‌ಪುಟ್‌ಗಳನ್ನು ಉತ್ಪಾದಿಸುವುದು ಅಪರೂಪ. ತರಬೇತಿಯ ಸಮಯದಲ್ಲಿ ಕಾಪಿರೈಟ್‌ ಹೊಂದಿರುವ ವಸ್ತುಗಳನ್ನು ಪುನರಾವರ್ತಿಸುವ ಕ್ರಿಯೆಯನ್ನು ‘ನ್ಯಾಯಯುತ ಬಳಕೆಯ’ಯ ಅಡಿಯಲ್ಲಿ ರಕ್ಷಿಸದಿದ್ದರೆ ಇದು ಕಾನೂನುಗಳನ್ನು ಉಲ್ಲಂಘಿಸಬಹುದು ಎಂದು ಹೇಳಿದ್ದರು.
‘ಜನರೇಟಿವ್‌ ಎಐ ಅಂತರ್ಜಾಲ ಪರಿಸರ ವ್ಯವಸ್ಥೆಗೆ ಸುಸ್ಥಿರ ಮಾದರಿಯಲ್ಲ’ ಎಂದೂ ಹೇಳಿದ್ದರು. ಆದರೆ ಓಪನ್‌ಎಐ ತಳ್ಳಿ ಹಾಕಿತ್ತು. ನಮ್ಮ ಡೇಟಾ ಬಳಕೆಯು ನ್ಯಾಯಯುತ ಬಳಕೆಯ ತತ್ವಗಳು ಮತ್ತು ಕಾನೂನಿಗೆ ಬದ್ಧವಾಗಿದೆ ಎಂದು ಸಮರ್ಥಿಸಿಕೊಂಡಿತ್ತು.

ಪ್ರಮುಖ ಸುದ್ದಿ :-   ಕುವೈತ್ ವಿಮಾನ ನಿಲ್ದಾಣದ ಮೇಲೆ ಇರಾನ್ ದಾಳಿ: ಬೆಂಕಿ ಉಂಡೆಯಾದ ಟರ್ಮಿನಲ್, ವಿನಾಶದ ದೃಶ್ಯ ಸಿಸಿಟಿವಿಯಲ್ಲಿ ಸೆರೆ

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement