ವೆಂಕಟದತ್ತ ಸಾಯಿ ಜೊತೆ ಖ್ಯಾತ ಬ್ಯಾಡ್ಮಿಂಟನ್ ಆಟಗಾರ್ತಿ ಪಿವಿ ಸಿಂಧು ಮದುವೆ ನಿಶ್ಚಿತಾರ್ಥ

ಡಬಲ್ ಒಲಿಂಪಿಕ್ ಪದಕ ವಿಜೇತೆ ಪಿ.ವಿ. ಸಿಂಧು ಅವರು ಪೋಸಿಡೆಕ್ಸ್ ಟೆಕ್ನಾಲಜೀಸ್‌ನ ಕಾರ್ಯನಿರ್ವಾಹಕ ನಿರ್ದೇಶಕರಾಗಿರುವ ಹೈದರಾಬಾದ್ ಮೂಲದ ವೆಂಕಟ ದತ್ತ ಸಾಯಿ ಅವರೊಂದಿಗೆ ಮದುವೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.
ಶನಿವಾರ ಬ್ಯಾಡ್ಮಿಂಟನ್ ತಾರೆ ಪಿ.ವಿ. ಸಿಂಧು ನಿಶ್ಚಿತಾರ್ಥ ಸಮಾರಂಭದ ಚಿತ್ರವನ್ನು ಹಂಚಿಕೊಂಡಿದ್ದಾರೆ. ಫೋಟೋದಲ್ಲಿ, ಸಿಂಧು ಮತ್ತು ವೆಂಕಟ ತಮ್ಮ ಕೈಯಲ್ಲಿ ನಿಶ್ಚಿತಾರ್ಥದ ಉಂಗುರ ಧರಿಸಿ ಒಟ್ಟಿಗೆ ನಗುತ್ತಿರುವುದನ್ನು ಕಾಣಬಹುದು. ಇವರು ಡಿಸೆಂಬರ್ 22 ರಂದು ಉದಯಪುರದಲ್ಲಿ ವಿವಾಹವಾಗಲಿದ್ದಾರೆ. ಡಿಸೆಂಬರ್ 20 ರಂದು ವಿವಾಹ ಮಹೋತ್ಸವ ಆರಂಭವಾಗಲಿದ್ದು, ಹೈದರಾಬಾದ್ ನಲ್ಲಿ ಆರತಕ್ಷತೆ ನಡೆಯಲಿದೆ. ನಂತರ, ಮುಂಬರುವ ಪ್ರಮುಖ ಋತುವಿಗಾಗಿ ಸಿಂಧು ಬ್ಯಾಡ್ಮಿಂಟನ್‌ ತರಬೇತಿ ಪುನರಾರಂಭಿಸುತ್ತಾರೆ.

ಸಿಂಧುವಿನ ತಂದೆ ಹೇಳುವಂತೆ ಎರಡು ಮನೆಯವರು ಪರಸ್ಪರ ಚೆನ್ನಾಗಿ ಪರಿಚಿತರು, ಆದರೆ ಮದುವೆಯ ಬಗ್ಗೆ ಒಂದು ತಿಂಗಳೊಳಗೆ ನಿರ್ಧಾರವಾಗಿದೆ. ಮುಂದಿನ ವರ್ಷದಿಂದ ಸಿಂಧು ತರಬೇತಿ ಮತ್ತು ಸ್ಪರ್ಧೆಗಳಲ್ಲಿ ನಿರತರಾಗಿರುವುದರಿಂದ ಈ ದಿನಾಂಕವನ್ನು ಆಯ್ಕೆ ಮಾಡಿಕೊಂಡಿದ್ದಾರೆ.
ಸಿಂಧು 2019 ರಲ್ಲಿ ಬ್ಯಾಡ್ಮಿಂಟನ್‌ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕವನ್ನು ಗೆದ್ದ ಮೊದಲ ಮತ್ತು ಏಕೈಕ ಭಾರತೀಯರಾಗಿದ್ದಾರೆ. ಅವರು ಸತತ ಎರಡು ಒಲಿಂಪಿಕ್ ಪದಕಗಳನ್ನು ಗೆದ್ದ ಎರಡನೇ ಭಾರತೀಯ ಕ್ರೀಡಾಪಟು: 2016 ರಿಯೊ ಒಲಿಂಪಿಕ್ಸ್‌ನಲ್ಲಿ ಅವರು ಬೆಳ್ಳಿ ಪದಕವನ್ನು ಗೆದ್ದ ಮೊದಲ ಭಾರತೀಯ ಬ್ಯಾಡ್ಮಿಂಟನ್ ಆಗಿದ್ದಾರೆ. ಒಲಿಂಪಿಕ್ 2020 ರ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಅವರು ಕಂಚಿನ ಪದಕವನ್ನು ಗೆದ್ದರು.
ಬ್ಯಾಡ್ಮಿಂಟನ್ ವಿಶ್ವ ಚಾಂಪಿಯನ್‌ಶಿಪ್‌ಗಳಲ್ಲಿ, ಸಿಂಧು ಐದು ಪದಕಗಳನ್ನು ಗೆದ್ದಿದ್ದು, ಸಿಂಗಲ್ಸ್‌ನಲ್ಲಿ ಈ ಸಾಧನೆ ಮಾಡಿದ ಇಬ್ಬರು ಮಹಿಳೆಯರಲ್ಲಿ (ಚೀನಾದ ಜಾಂಗ್ ನಿಂಗ್ ಜೊತೆಗೆ) ಒಬ್ಬರಾಗಿದ್ದಾರೆ.

ಪ್ರಮುಖ ಸುದ್ದಿ :-   ಸರಿಯಾಗಿ ಓದುತ್ತಿಲ್ಲ ಎಂದು ಇಬ್ಬರು ಮಕ್ಕಳನ್ನು ನೀರಿನಲ್ಲಿ ಮುಳುಗಿಸಿ ಕೊಂದು, ತಾನೂ ಆತ್ಮಹತ್ಯೆಗೆ ಶರಣಾದ ತಂದೆ...!

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement