37 ಜನರನ್ನು ಕೊಂದು ತಿನ್ನಲಾಗಿತ್ತು ಎಂದ ಇಂಗ್ಲೆಂಡಿನ 4000 ವರ್ಷಗಳ ಹಳೆಯ ಹತ್ಯಾಕಾಂಡದ ಹೊಸ ಸಂಶೋಧನೆ..!

ನೈಋತ್ಯ ಇಂಗ್ಲೆಂಡ್‌ನಲ್ಲಿ 4,000 ವರ್ಷಗಳಷ್ಟು ಹಳೆಯದಾದ ಹತ್ಯಾಕಾಂಡವು ಸಂಭವನೀಯ ನರಮಾಂಸ ಭಕ್ಷಣೆಗೆ ಸಂಬಂಧಿಸಿದೆ ಎಂದು ಹೊಸ ಸಂಶೋಧನೆಯೊಂದು ಹೇಳಿದೆ.ಚಾರ್ಟರ್‌ಹೌಸ್ ವಾರೆನ್ ಫಾರ್ಮ್‌ನಲ್ಲಿ 50-ಅಡಿ ಆಳದ ಶಾಫ್ಟ್‌ನಲ್ಲಿ ಪುರುಷರು, ಮಹಿಳೆಯರು ಮತ್ತು ಮಕ್ಕಳು ಸೇರಿ ಕನಿಷ್ಠ 37 ವ್ಯಕ್ತಿಗಳ ಛಿದ್ರಗೊಂಡ ಎಲುಬುಗಳು, ತಲೆಬುರುಡೆಗಳು ಮತ್ತು ಸ್ಲೈಸಿಂಗ್ ತುಂಡುಗಳು ಪತ್ತೆಯಾಗಿತ್ತು. ಹಬ್ಬದ ಸಮಯದಲ್ಲಿ ತಿನ್ನಬಹುದೆಂದು ಇವರನ್ನು ಹತ್ಯೆಗೈಯಲಾಗಿದೆ ಎಂದು ಸಂಶೋಧಕರು ಸೂಚಿಸುತ್ತಾರೆ, ಕೆಲವು ಮೂಳೆಗಳು ಮಾನವ ಹಲ್ಲುಗಳ ಗುರುತುಗಳನ್ನು ಹೊಂದಿವೆ ಎಂದು ಅವರು ಹೇಳಿದ್ದಾರೆ.
ಆಂಟಿಕ್ವಿಟಿ ಜರ್ನಲ್‌ನಲ್ಲಿ ಪ್ರಕಟವಾದ ಸಂಶೋಧನೆಗಳು, ಇವರನ್ನು 2210 ಮತ್ತು 2010 ಬಿಸಿ (BC) ನಡುವೆ ದೊಡ್ಡ ಪ್ರಮಾಣದ ಘಟನೆಯಲ್ಲಿ ಸಾಮೂಹಿಕವಾಗಿ ಹತ್ಯೆ ಮಾಡಲಾಗಿದೆ ಎಂದು ಸೂಚಿಸುತ್ತದೆ. 1970 ರಲ್ಲಿ ಬ್ರಿಸ್ಟಲ್ ಬಳಿಯ ಚಾರ್ಟರ್‌ಹೌಸ್ ವಾರೆನ್ ಫಾರ್ಮ್‌ನಲ್ಲಿ ಇವರ ಮೃತದೇಹಗಳ ಅವಶೇಷಗಳು ಪತ್ತೆಯಾಗಿದ್ದವು. ಇದನ್ನು ಆರಂಭದಲ್ಲಿ ವಿಶಿಷ್ಟವಾದ ಕಂಚಿನ ಯುಗದ ಸಮಾಧಿ ಎಂಬುದನ್ನು ಅಲ್ಲಗಳೆಯಲಾಯಿತು. ಆದಾಗ್ಯೂ, ಹೊಸ ಅಧ್ಯಯನವು ಅವಶೇಷಗಳು ಸೆರೆಯಾಳುಗಳಾಗಿದ್ದ ಅಥವಾ ಹಠಾತ್ ದಾಳಿಯಲ್ಲಿ ಸಿಕ್ಕಿಬಿದ್ದವರ ಹತ್ಯೆಗಳಿಗೆ ಸಂಬಂಧಿಸಿವೆ ಎಂದು ಸೂಚಿಸುತ್ತವೆ.

ಪ್ರಮುಖ ಸುದ್ದಿ :-   ಆಪರೇಶನ್‌ ಸಿಂಧೂರ | ಪಾಕಿಸ್ತಾನ ಅಣ್ವಸ್ತ್ರ ಸಂಗ್ರಹ ಘಟಕಕ್ಕೆ ಹಾನಿಯಾಯ್ತೆ : ಈಜಿಪ್ಟಿನಿಂದ ಬೋರಾನ್‌ ಆಮದು..? ಏನಿದು ರಾಸಾಯನಿಕ...

ಅವರ ದೇಹದ ಅವಶೇಷಗಳ ಮೇಲೆ ಶಸ್ತ್ರಾಸ್ತ್ರಗಳಿಂದ ಗಾಯಗಳಾಗಿವೆ ಎಂಬುದಕ್ಕೆ ಯಾವುದೇ ಪುರಾವೆಗಳು ಕಂಡುಬಂದಿಲ್ಲ. ಬದಲಾಗಿ ಸ್ಥಳದಿಂದ ಸಂಗ್ರಹಿಸಿದ ಅರ್ಧದಷ್ಟು ತಲೆಬುರುಡೆಗಳು ಮರದ ದೊಣ್ಣೆಗಳ ಹೊಡೆತಗಳಿಂದಾದ ಮಾರಣಾಂತಿಕ ಗಾಯಗಳನ್ನು ಹೊಂದಿವೆ. ಅಲ್ಲದೆ, ನರಭಕ್ಷಕ ಅಭ್ಯಾಸಗಳಿಗೆ ಸಂಬಂಧಿಸಿದಂತೆ ಕಾಲಿನ ಮೂಳೆಗಳ ಮೇಲಿನ ಗುರುತುಗಳು ಮಾಂಸವನ್ನು ತೆಗೆದಿರುವುದನ್ನು ಸೂಚಿಸುತ್ತವೆ ಮತ್ತು ಉದ್ದವಾದ ಮೂಳೆಗಳ ಮೇಲಿನ ಮುರಿತಗಳು ಮಜ್ಜೆಯ ಹೊರತೆಗೆಯುವಿಕೆಯನ್ನು ಸೂಚಿಸುತ್ತವೆ. ದುಷ್ಕರ್ಮಿಗಳು ಪ್ರಾಣಿಗಳ ಅವಶೇಷಗಳನ್ನು ಮಾನವ ಮೂಳೆಗಳ ಜೊತೆಗೆ ಶಾಫ್ಟ್‌ಗೆ ಎಸೆದಿದ್ದಾರೆ, ಬಹುಶಃ ಇದು ಆಚರಣೆಯ ಭಾಗವಾಗಿರಬಹುದು ಎಂದು ಸಂಶೋಧಕರು ಅಂದಾಜಿಸಿದ್ದಾರೆ.

ಹಿಂಸಾಚಾರದ ಪ್ರಮಾಣ ಅಸ್ಪಷ್ಟವಾಗಿಯೇ ಉಳಿದಿವೆ. ಸಮುದಾಯಗಳ ನಡುವೆ ಹೆಚ್ಚುತ್ತಿರುವ ಸೇಡಿನ ಹತ್ಯೆಗಳ ಪ್ರವೃತ್ತಿ ಈ ಹತ್ಯಾಕಾಂಡಕ್ಕೆ ಕಾರಣವಾಗಿರಬಹುದು ಎಂದು ಸಂಶೋಧಕರು ನಂಬಿದ್ದಾರೆ. “ಬಲಿಪಶುಗಳ ಸಂಖ್ಯೆ ಮತ್ತು ಸಾವಿನ ನಂತರ ಅವರನ್ನು ಹೇಗೆ ನಡೆಸಿಕೊಳ್ಳಲಾಯಿತು ಎಂಬುದರ ಬಗ್ಗೆ ಆ ಸಮಯದಲ್ಲಿ ಬ್ರಿಟನ್‌ನಲ್ಲಿ ಈ ಪ್ರಮಾಣದಲ್ಲಿ ಹಿಂಸಾಚಾರದ ಯಾವುದೇ [ಹಿಂದಿನ] ಸೂಚನೆ ಇರಲಿಲ್ಲ ಎಂದು ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ಪುರಾತತ್ವ ಪ್ರಾಧ್ಯಾಪಕ ಹಾಗೂ ಪ್ರಮುಖ ಲೇಖಕ ರಿಕ್ ಸ್ಕಲ್ಟಿಂಗ್ ಹೇಳಿದ್ದಾರೆ.
ಹಿಂಸಾತ್ಮಕ ಸಂಘರ್ಷ ವಿರಳವಾಗಿದ್ದ ಬ್ರಿಟಿಷ್ ಚಾಲ್ಕೋಲಿಥಿಕ್ ಮತ್ತು ಆರಂಭಿಕ ಕಂಚಿನ ಯುಗ ತುಲನಾತ್ಮಕವಾಗಿ ಶಾಂತಿಯುತವಾಗಿತ್ತು ಎಂಬ ಆ ಕಾಲದ ಬಗ್ಗೆ ಪುರಾತತ್ತ್ವ ಶಾಸ್ತ್ರದ ದಾಖಲೆಯಲ್ಲಿ ಇರುವುದಕ್ಕಿಂತ ಭಿನ್ನವಾಗಿ, ಚಾರ್ಟರ್‌ಹೌಸ್ ವಾರೆನ್ ಫಾರ್ಮ್‌ನ ಈ ಸಾಮೂಹಿಕ ಹಿಂಸಾಚಾರ ಮತ್ತು ವ್ಯವಸ್ಥಿತ ಮರಣೋತ್ತರ ಪ್ರಕ್ರಿಯೆಯ ವಿಶಿಷ್ಟ ಪ್ರಕರಣವನ್ನು ಪ್ರಸ್ತುತಪಡಿಸುತ್ತದೆ.

ಪ್ರಮುಖ ಸುದ್ದಿ :-   ಆಪರೇಶನ್‌ ಸಿಂಧೂರ | ಪಾಕಿಸ್ತಾನ ಅಣ್ವಸ್ತ್ರ ಸಂಗ್ರಹ ಘಟಕಕ್ಕೆ ಹಾನಿಯಾಯ್ತೆ : ಈಜಿಪ್ಟಿನಿಂದ ಬೋರಾನ್‌ ಆಮದು..? ಏನಿದು ರಾಸಾಯನಿಕ...

4 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement