ಪುತ್ತೂರು | ಹೊಂಡಕ್ಕೆ ಉರುಳಿ ಬಿದ್ದ ಕಾರು; ಮೂವರು ಸಾವು

ಮಂಗಳೂರು : ನಿಯಂತ್ರಣ ತಪ್ಪಿದ ಕಾರೊಂದು ಹೊಂಡಕ್ಕೆ ಉರುಳಿ ಬಿದ್ದು ಮೂವರು ಮೃತಪಟ್ಟ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಬಳಿಯ ಪರ್ಲಡ್ಕ ಜಂಕ್ಷನ್ ಬಳಿಯ ಬೈಪಾಸ್ ರಸ್ತೆಯಲ್ಲಿ ಸಂಭವಿಸಿದೆ.
ಮೃತರನ್ನು ಸುಳ್ಯ ಜಟ್ಟಿಪಳ್ಳ ನಿವಾಸಿಗಳಾದ ಅಣ್ಣು ನಾಯ್ಕ, ಅವರ ಮಗ ಚಿದಾನಂದ, ಪಕ್ಕದ ಮನೆಯ ರಮೇಶ ನಾಯ್ಕ ಎಂದು ಗುರುತಿಸಲಾಗಿದೆ.
ಇವರು ಸುಳ್ಯದಿಂದ ಪುತ್ತೂರಿನ ಪುಣಚಕ್ಕೆ ಆಗಮಿಸುತ್ತಿದ್ದ ವೇಳೆ ಬೆಳಗ್ಗಿನ ಜಾವ ಪರ್ಲಡ್ಕದಲ್ಲಿ ಈ ಅಪಘಾತ ಸಂಭವಿಸಿದೆ. ನಿದ್ದೆಯ ಮಂಪರಿನಲ್ಲಿ ಅಪಘಾತ ನಡೆದಿರಬಹುದು ಎಂದು ಶಂಕಿಸಲಾಗಿದೆ. ನಸುಕಿನ ಜಾವ 4:15ರ ಸುಮಾರಿಗೆ ಕಾರು ನಿಯಂತ್ರಣ ತಪ್ಪಿ ಹೊಂಡಕ್ಕೆ ಬಿದ್ದಿದೆ. ಬೈಪಾಸ್ ರಸ್ತೆಯ ಪರ್ಲಡ್ಕ ಜಂಕ್ಷನ್ ಬಳಿಯಲ್ಲೇ ಘಟನೆ ನಡೆದಿದ್ದು, ಪುತ್ತೂರು ಸಂಚಾರಿ ಪೊಲೀಸರು‌ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement