ವೀಡಿಯೊ…| 700 ಅಡಿ ಬೋರ್‌ವೆಲ್‌ ಗೆ ಬಿದ್ದ 10 ದಿನಗಳ ನಂತರ 3 ವರ್ಷದ ಬಾಲಕಿಯ ರಕ್ಷಣೆ ; ಆದರೆ…

ನವದೆಹಲಿ: 10 ದಿನಗಳ ಹಿಂದೆ ರಾಜಸ್ಥಾನದ ಕೋಟ್‌ಪುಟ್ಲಿಯಲ್ಲಿ ಬೋರ್‌ವೆಲ್‌ ಒಳಗೆ ಬಿದ್ದ ಮೂರು ವರ್ಷದ ಮಗುವನ್ನು ಐದಕ್ಕೂ ಹೆಚ್ಚು ನಡೆದ ಪ್ರಯತ್ನಗಳು ವಿಫಲವಾದ ನಂತರವೂ ಅಂತಿಮವಾಗಿ ರಕ್ಷಿಸಲಾಯಿತು.. ಆದರೆ ಆಸ್ಪತ್ರೆಗೆ ಸೇರಿಸಿದ ಗಂಟೆಗಳ ನಂತರ ಅವಳು ಮೃತಪಟ್ಟಿದ್ದಾಳೆ ಎಂದು ಪ್ರಕಟಿಸಲಾಯಿತು.
ತಕ್ಷಣವೇ ಮಗುವನ್ನು ವೈದ್ಯಕೀಯ ಚಿಕಿತ್ಸೆಗಾಗಿ ಸಮೀಪದ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಆದರೆ ಆಸ್ಪತ್ರೆಗೆ ಕೊಂಡೊಯ್ದರೂ ಆಕೆ ಬದುಕಿ ಉಳಿಯಲಿಲ್ಲ.
ಕೊಟ್‌ಪುಟ್ಲಿಯ ಕಿರಾತಪುರ ಗ್ರಾಮದ ಬಾಡಿಯಾಲಿ ಕಿ ಧನಿಯಲ್ಲಿ ಚೇತನಾ ಎಂಬ ಮೂರು ವರ್ಷದ ಮಗು 700 ಅಡಿ ಬೋರ್‌ವೆಲ್‌ನಲ್ಲಿ  ಬಿದ್ದು 150 ಅಡಿ ಆಳದಲ್ಲಿ ಸಿಲುಕಿಕೊಂಡಿತ್ತು. ಡಿಸೆಂಬರ್ 23 ರಂದು ಮಧ್ಯಾಹ್ನ ಆಟವಾಡುತ್ತಿದ್ದಾಗ ಆಕೆ ಬಿದ್ದಿದ್ದಳು. ಸುಮಾರು 10 ನಿಮಿಷಗಳ ನಂತರ ಬಾಲಕಿಯ ಅಳುವುದು ಕೇಳಿದ ಮನೆಯವರು ಬೋರ್‌ವೆಲ್‌ನಲ್ಲಿ ಸಿಲುಕಿದ್ದು ಕಂಡುಬಂತು.

ಮಾಹಿತಿ ನೀಡಿದ ನಂತರ ತಕ್ಷಣವೇ ರಾಷ್ಟ್ರೀಯ ಮತ್ತು ರಾಜ್ಯ ವಿಪತ್ತು ಪರಿಹಾರ ಪಡೆಗಳು ವೈದ್ಯಕೀಯ ತಂಡದೊಂದಿಗೆ ಅಲ್ಲಿಗೆ ತಲುಪಿದವು ಮತ್ತು ಅವಳನ್ನು ರಕ್ಷಿಸುವ ಪ್ರಯತ್ನಗಳನ್ನು ನಡೆಸಿತು. ಪೈಪ್ ಮೂಲಕ ಮಗುವಿಗೆ ಆಮ್ಲಜನಕವನ್ನು ಪೂರೈಸಲಾಯಿತು ಮತ್ತು ಅವಳನ್ನು ಮೇಲಕ್ಕೆ ಎಳೆದು ತರುವ ಆರಂಭಿಕ ಪ್ರಯತ್ನಗಳು ವಿಫಲವಾದ ನಂತರ, ರಕ್ಷಣಾ ತಂಡಗಳು ನೆಲವನ್ನು ಅಗೆಯಲು ಪ್ರಾರಂಭಿಸಿದವು. ಆದರೆ ಅವರು ತೋಡಿದ ಸುರಂಗ ದಾರಿ ತಪ್ಪಿತು. ಅವಳಿಗೆ ಆಹಾರ ಅಥವಾ ಆಮ್ಲಜನಕವನ್ನು ಪೂರೈಸಲು ಕಷ್ಟವಾಯಿತು. ಆಕೆಯ ಸ್ಥಿತಿ ಗಂಭೀರವಾಗುವಂತಾಯಿತು. .
ಅಂತಿಮವಾಗಿ, ರಕ್ಷಣಾ ತಂಡಗಳಿಗೆ ಸಹಾಯ ಮಾಡಲು ದೆಹಲಿ ಮತ್ತು ಜೈಪುರ ಮೆಟ್ರೋದಿಂದ ತಜ್ಞರನ್ನು ಕರೆಸಲಾಯಿತು. ಆರಂಭದಲ್ಲಿ, ಸುರಂಗಕ್ಕೆ 8-ಅಡಿ ಅಗಲದ ಅಗತ್ಯವಿದೆ ಎಂದು ಅಂದಾಜಿಸಲಾಗಿಯಿತು. ಆದರೆ ನಂತರ ಕಾರ್ಯಾಚರಣೆಯನ್ನು ಸುಲಭಗೊಳಿಸಲು ಅದನ್ನು 12 ಅಡಿಗಳಿಗೆ ವಿಸ್ತರಿಸಲಾಯಿತು.

ಅವಳನ್ನು ಮೇಲಕ್ಕೆ ಎತ್ತುವ ಮೊದಲು ಕೊನೆಯ ಕೆಲವು ಗಂಟೆಗಳಲ್ಲಿ, ಅವಳಿಗೆ ಆಹಾರ ಅಥವಾ ಆಮ್ಲಜನಕವನ್ನು ಒದಗಿಸಲಾಗಲಿಲ್ಲ ಮತ್ತು ಆಕೆಯ ಸ್ಥಿತಿ ಗಂಭೀರವಾಯಿತು. ಆದರೆ ಸಮಯಕ್ಕೆ ಸರಿಯಾಗಿ ಅವಳನ್ನು ರಕ್ಷಣೆ ಮಾಡಲಾಯಿತು. ನಂತರ ಅವಳನ್ನು ತಕ್ಷಣವೇ ಆಸ್ಪತ್ರೆಗೆ ಒಯ್ಯಲಾಯಿತು.
ಮಗು ಚೇತನಾ ಅಜ್ಜ ದಯಾರಾಮ ಅವರು, ತೀವ್ರ ಚಳಿಗಾಲದಲ್ಲಿಯೂ ದಣಿವರಿಯದೆ ಕೆಲಸ ಮಾಡಿದ ಆಡಳಿತ ಮತ್ತು ರಕ್ಷಣಾ ತಂಡಗಳ ಅವಿರತ ಪ್ರಯತ್ನಗಳನ್ನು ಶ್ಲಾಘಿಸಿದರು. ಭವಿಷ್ಯದಲ್ಲಿ ಇಂತಹ ದುರಂತಗಳು ಸಂಭವಿಸದಂತೆ ತೆರೆದ ಬೋರ್‌ವೆಲ್‌ಗಳನ್ನು ಮುಚ್ಚಬೇಕು ಎಂದು ಅವರು ಒತ್ತಾಯಿಸಿದರು.

ಪ್ರಮುಖ ಸುದ್ದಿ :-   ವೀಡಿಯೊ | ಸರ್ಕಾರಿ ಆಸ್ಪತ್ರೆಯಲ್ಲಿ ವೃದ್ಧ ವ್ಯಕ್ತಿ ಮೇಲೆ ಹಲ್ಲೆ ನಡೆಸಿ, ದರದರನೆ ಎಳೆದೊಯ್ದ ವೈದ್ಯ...!

5 / 5. 3

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement