ಪ್ರೇಯಸಿಯನ್ನು ಇಂಪ್ರೆಸ್ ಮಾಡಲು ಹೋಗಿ ವ್ಯಕ್ತಿಯೊಬ್ಬ ಸಿಂಹಕ್ಕೆ ಆಹಾರವಾದ ಘಟನೆ ವರದಿಯಾಗಿದೆ. ಈ ಘಟನೆ ಉಜ್ಬೇಕಿಸ್ತಾನದಲ್ಲಿ ನಡೆದಿದೆ ಎಂದು ವರದಿಯಾಗಿದೆ.
ವರದಿಗಳ ಪ್ರಕಾರ, ವ್ಯಕ್ತಿಯು ಉಜ್ಬೇಕಿಸ್ತಾನ್‌ನ ಪಾರ್ಕೆಂಟ್‌ನಲ್ಲಿರುವ ಖಾಸಗಿ ಮೃಗಾಲಯದಲ್ಲಿ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದ. ಅತ ತನ್ನ ಗೆಳತಿಯನ್ನು ಮೆಚ್ಚಿಸಲು ಸಿಂಹ ಇರುವ ಗುಹೆಗೆ ಪ್ರವೇಶಿಸಿದ್ದಾನೆ. ಆಗ ಸಿಂಹಗಳು ಆತನ ಮೇಲೆ ದಾಳಿ ಮಾಡಿದ್ದರಿಂದ ಆತ ಜೀವ ಕಳೆದುಕೊಂಡಿದ್ದಾನೆ ಎಂದು ವರದಿ ಹೇಳಿದೆ.
ಮಿರರ್‌ನಲ್ಲಿನ ವರದಿಯ ಪ್ರಕಾರ, ಸಾವಿಗೀಡಾದ ವ್ಯಕ್ತಿಯನ್ನು 44 ವರ್ಷದ ಎಫ್ ಐರಿಸ್ಕುಲೋವ್ ಎಂದು ಗುರುತಿಸಲಾಗಿದೆ, ಆತ ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವಾಗ ಬೆಳಿಗ್ಗೆ 5 ಗಂಟೆಗೆ ಸಿಂಹದ ಗುಹೆಗೆ ಪ್ರವೇಶಿಸಿದ್ದಾನೆ.
ವೀಡಿಯೊದಲ್ಲಿ, ವ್ಯಕ್ತಿ ಬೀಗವನ್ನು ತೆರೆದು ಸಿಂಹಗಳ ಬಳಿಗೆ ಹೋಗುತ್ತಿರುವುದನ್ನು ಕಾಣಬಹುದು. ಮೊದಲಿಗೆ, ಮೂರು ಸಿಂಹಗಳು ಸುಮ್ಮನಿವೆ. ಆದರೆ ಕೆಲವು ಸೆಕೆಂಡುಗಳ ನಂತರ, ಪ್ರಾಣಿಗಳು ಅವನ ಬಳಿಗೆ ಬಂದವು. ಆಗ ಆತ ಸಿಂಹಗಳಲ್ಲಿ ಒಂದನ್ನು “ಸಿಂಬಾ” ಎಂದು ಕರೆದಿದ್ದಾನೆ.
ಸಿಂಹಗಳಿಂದ ಸುತ್ತುವರಿದಿದ್ದರೂ, ಐರಿಸ್ಕುಲೋವ್ ಆತ್ಮವಿಶ್ವಾಸದಿಂದ ತನ್ನ ಮುಖ ತೋರಿಸಲು ಕ್ಯಾಮೆರಾವನ್ನು ತಿರುಗಿಸಿಕೊಂಡಿದ್ದಾನೆ. ಸಿಂಹಗಳಲ್ಲಿ ಒಂದು ಅವನ ಬಳಿಗೆ ಬಂದಾಗ, ಮೃಗಾಲಯವು ತನಗೆ ಪರಿಚಯವಿದೆ ಎಂದು ತೋರಿಸಲು ಅದನ್ನು ಮುಟ್ಟಿದ್ದಾನೆ. ಆದರೆ ಮತ್ತೊಂದು ಸಿಂಹ ಆತನ ಮೇಲೆ ಮೇಲೆ ಮಾಡಿದೆ.
ಅಧಿಕೃತ ಹೇಳಿಕೆಯ ಪ್ರಕಾರ, “ಸಿಂಹಗಳು ಅತನನ್ನು ಕೊಂದು ದೇಹವನ್ನು ಭಾಗಶಃ ತಿಂದಿವೆ. “ಸಿಂಹಗಳು ಮೃಗಾಲಯ ಪಾಲಕನ ಮುಖದ ಚರ್ಮವನ್ನು ಹರಿದು ಹಾಕಿದ್ದವು” ಎಂದು ರಷ್ಯಾದ ಅಧಿಕಾರಿಗಳನ್ನು ತಿಳಿಸಿದ್ದಾರೆ. ಭೀಕರ ದಾಳಿಯ ನಂತರ, ರಕ್ಷಕರು ಒಂದು ಸಿಂಹವನ್ನು ಹೊಡೆದು ಸಾಯಿಸಿದರು ಮತ್ತು ಉಳಿದ ಎರಡನ್ನು ಶಾಂತಗೊಳಿಸಿದರು. ಆಂತರಿಕ ವ್ಯವಹಾರಗಳ ಇಲಾಖೆಯು ಸಿಂಹಗಳನ್ನು ವಿಶೇಷ ಪಂಜರದಲ್ಲಿ ಕೂಡಿ ಹಾಕಿದೆ.
ನಿಮ್ಮ ಕಾಮೆಂಟ್ ಬರೆಯಿರಿ