ಮೈ ಜುಂ ಎನ್ನುವ ವೀಡಿಯೊ | ಕಾಜಿರಂಗದಲ್ಲಿ ಸಫಾರಿ ಜೀಪಿನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು…

ಅಸ್ಸಾಂನ ಕಾಜಿರಂಗ ರಾಷ್ಟ್ರೀಯ ಉದ್ಯಾನವನದ ಆತಂಕಕಾರಿ ವೀಡಿಯೊವೊಂದು ಆನ್‌ಲೈನ್‌ನಲ್ಲಿ ಕಾಣಿಸಿಕೊಂಡಿದ್ದು, ಸಫಾರಿ ವೇಳೆ ಅದೃಷ್ಟವಶಾತ್‌ ತಾಯಿ-ಮಗಳು ಅಪಾಯದಿಂದ ಪಾರಾಗಿದ್ದಾರೆ. ತಾಯಿ ಮತ್ತು ಅವರ ಮಗಳು ಚಲಿಸುತ್ತಿದ್ದ ಸಫಾರಿ ಜೀಪ್‌ನಿಂದ ಘೇಂಡಾಮೃಗಗಳ ಮುಂದೆ ಬಿದ್ದಿದ್ದಾರೆ.
ಘೇಂಡಾಮೃಗವೊಂದು ದಾಳಿ ಮಾಡಲು ಸಿದ್ಧವಾಗಿದ್ದರೂ ಅದೃಷ್ಟವಶಾತ್ ಇಬ್ಬರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ವೈರಲ್ ವೀಡಿಯೊದಲ್ಲಿ ಪ್ರವಾಸಿಗರನ್ನು ಹೊತ್ತೊಯ್ಯುತ್ತಿದ್ದ ಸಫಾರಿ ಜೀಪ್‌ಗಳು ತಿರುಗುತ್ತಿರುವಾಗ ಯುವತಿ ಮತ್ತು ಆಕೆಯ ತಾಯಿ ಚಲಿಸುವ ಜೀಪಿನಿಂದ ನೆಲಕ್ಕೆ ಬಿದ್ದಿರುವುದು ಕಂಡುಬಂದಿದೆ.

ಮೈ ಜುಂ ಎನ್ನಿಸುವ ದೃಶ್ಯದಲ್ಲಿ ತಾಯಿ-ಮಗಳು ವಾಹನದಿಂದ ರಸ್ತೆಗೆ ಬಿದ್ದಾಗ ರಸ್ತೆ ಅಕ್ಕಪಕ್ಕದಲ್ಲಿ ಎರಡು ಘೇಂಡಾ ಮೃಗಗಳು ದಾಳಿಗೆ ಸಿದ್ಧವಾಗಿರುವುದು ಕಂಡುಬಂದಿದೆ. ಆ ಕ್ಷಣದಲ್ಲಿ ಮತ್ತೊಂದು ಘೇಂಡಾಮೃಗವು ಪ್ರವಾಸಿಗರ ವಾಹನದ ಮೇಲೆ ಆಕ್ರಮಣ ಮಾಡಲು ಸಮೀಪಿಸಿದೆ. ಘೇಂಡಾಮೃಗದ ಕೋಪ ನೋಡಿದ ಮೂರನೇ ಜೀಪ್ ಹಿಂದಕ್ಕೆ ಹೋಗುತ್ತದೆ. ಕೆಳಗೆ ಬಿದ್ದ ತಾಯಿ-ಮಗಳು ಕೂಗಿಕೊಳ್ಳುತ್ತಾರೆ.
ಇಬ್ಬರು ಸ್ವಲ್ಪದರಲ್ಲೇ ಅಪಾಯದಿಂದ ಪಾರಾಗಿದ್ದಾರೆ. ವರದಿಯ ಪ್ರಕಾರ, ಅವರು ಘೇಂಡಾಮೃಗಗಳಿಂದ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ನಂತರ ಜೀಪ್‌ ಹತ್ತಿದ್ದಾರೆ.

ಮತ್ತೊಬ್ಬ ಪ್ರವಾಸಿಗರು ಈ ಭಯಾನಕ ಘಟನೆಯನ್ನು ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದಾರೆ ಮತ್ತು ಇದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಪ್ರವಾಸಿಗರ ಸುರಕ್ಷತೆಯ ಬಗ್ಗೆ ಆತಂಕಕ್ಕೆ ಕಾರಣವಾಗಿದೆ. ಅನೇಕ ಬಳಕೆದಾರರು ಅಂತಹ ಪ್ರವಾಸಗಳಲ್ಲಿ ಸಂದರ್ಶಕರ ಸುರಕ್ಷತೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.
ವರದಿಗಳ ಪ್ರಕಾರ, ಕಾಜಿರಂಗ ರಾಷ್ಟ್ರೀಯ ಉದ್ಯಾನವನದ ಬಾಗೋರಿ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಆದಾಗ್ಯೂ, ಈ ವೀಡಿಯೊವನ್ನು ಯಾವಾಗ ರೆಕಾರ್ಡ್ ಮಾಡಲಾಗಿದೆ ಎಂಬುದು ಸ್ಪಷ್ಟವಾಗಿಲ್ಲ.
ಎನ್‌ಡಿಟಿವಿ ವರದಿಯ ಪ್ರಕಾರ, ಘಟನೆಯ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ, ಕಾಜಿರಂಗ ಆಡಳಿತವು ಈ ಬಗ್ಗೆ ತನಿಖೆಗೆ ಆದೇಶಿಸಿದೆ. ಕಾಜಿರಂಗಕ್ಕೆ ಭೇಟಿ ನೀಡುವ ಪ್ರವಾಸಿಗರು ಸಫಾರಿ ಸಮಯದಲ್ಲಿ ಜಾಗರೂಕರಾಗಿರಲು ಸೂಚಿಸಲಾಗಿದೆ.

ಪ್ರಮುಖ ಸುದ್ದಿ :-   ವೀಡಿಯೊ | ಸರ್ಕಾರಿ ಆಸ್ಪತ್ರೆಯಲ್ಲಿ ವೃದ್ಧ ವ್ಯಕ್ತಿ ಮೇಲೆ ಹಲ್ಲೆ ನಡೆಸಿ, ದರದರನೆ ಎಳೆದೊಯ್ದ ವೈದ್ಯ...!

5 / 5. 3

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement