‘ಭಿಕ್ಷುಕನ ಜೊತೆ ಓಡಿಹೋದ ಮಹಿಳೆ’ ಪ್ರಕರಣದಲ್ಲಿ ದೊಡ್ಡ ಟ್ವಿಸ್ಟ್ ; ಆಕೆ ಭಿಕ್ಷುಕನೊಂದಿಗೆ ಓಡಿಹೋಗಿಲ್ಲ : ಮಹಿಳೆ ಮನೆ ಬಿಟ್ಟ ಕಾರಣ….

ಹರ್ದೋಯಿ : ಉತ್ತರ ಪ್ರದೇಶದಲ್ಲಿ ಮಹಿಳೆಯೊಬ್ಬಳು ಭಿಕ್ಷುಕನ ಜೊತೆ ಓಡಿಹೋಗಿದ್ದಾಳೆ ಎಂಬ ವ್ಯಾಪಕವಾಗಿ ಪ್ರಸಾರವಾದ ಸುದ್ದಿಗೆ ಈಗ ಟ್ವಿಸ್ಟ್ ಹೊರಹೊಮ್ಮಿದೆ
ಉತ್ತರ ಪ್ರದೇಶದ ಹರ್ದೋಯಿ ಜಿಲ್ಲೆಯಲ್ಲಿ ಭಿಕ್ಷುಕನ ಜೊತೆ ಓಡಿಹೋಗಿದ್ದಾಳೆ ಎಂದು ಪತಿ ಆರೋಪಿಸಿರುವ ಮಹಿಳೆ, ತನ್ನ ಪತಿ ಪದೇ ಪದೇ ನಿಂದಿಸುತ್ತಿದ್ದುದರಿಂದ ಮತ್ತು ಥಳಿಸುತ್ತಿದ್ದುದರಿಂದ ಸಂಬಂಧಿಕರ ಮನೆಗೆ ತೆರಳಿದ್ದೆ ಎಂದು ಪೊಲೀಸರಿಗೆ ತಿಳಿಸಿದ್ದಾರೆ. ತಾನು ಯಾರ ಜೊತೆಯೂ ಓಡಿಹೋಗಿದ್ದೇನೆ ಎಂಬ ಆರೋಪ ಸುಳ್ಳು ಮತ್ತು ಆಧಾರರಹಿತ ಎಂದು ಪೊಲೀಸರು ಹೇಳಿದ್ದಾರೆ. ಈ ಬಗ್ಗೆ ಮುಂದಿನ ಕ್ರಮ ತೆಗೆದುಕೊಳ್ಳುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಆರು ಮಕ್ಕಳ ತಾಯಿಯಾದ ಮೂವತ್ತಾರು ವರ್ಷದ ರಾಜೇಶ್ವರಿ ಎಂಬ ಮಹಿಳೆ ಶುಕ್ರವಾರದಿಂದ ನಾಪತ್ತೆಯಾಗಿದ್ದರು. ಅಕ್ಕಪಕ್ಕದ ಪ್ರದೇಶದಲ್ಲಿ ಭಿಕ್ಷೆ ಬೇಡುತ್ತಿದ್ದ 45ರ ಹರೆಯದ ನನ್ಹೆ ಪಂಡಿತ್ ಜತೆ ಪತ್ನಿ ಆಗಾಗ್ಗೆ ಮಾತನಾಡುತ್ತಿದ್ದಳು, ಹೀಗಾಗಿ ಆತನ ಜೊತೆ ಓಡಿಹೋಗಿದ್ದಾಳೆಂದು ಅನುಮಾನ ವ್ಯಕ್ತಪಡಿಸಿ ಎಂದು ಆಕೆಯ ಪತಿ ರಾಜು ಭಾನುವಾರ ಪೊಲೀಸ್ ದೂರು ದಾಖಲಿಸಿದ್ದರು.

”ಜನವರಿ 3ರಂದು ಮಧ್ಯಾಹ್ನ 2 ಗಂಟೆ ಸುಮಾರಿಗೆ ನನ್ನ ಪತ್ನಿ ರಾಜೇಶ್ವರಿ, ನಮ್ಮ ಮಗಳು ಖುಷ್ಬೂಗೆ ಬಟ್ಟೆ, ತರಕಾರಿ ಖರೀದಿಸಲು ಮಾರುಕಟ್ಟೆಗೆ ಹೋಗುವುದಾಗಿ ಹೇಳಿದ್ದಳು, ಆಕೆ ವಾಪಸ್ ಬಾರದೆ ಇದ್ದಾಗ ಎಲ್ಲ ಕಡೆ ಹುಡುಕಾಡಿದರೂ ಪತ್ತೆಯಾಗಿಲ್ಲ. ಪತ್ನಿ ಮನೆ ಬಿಟ್ಟು ಹೋಗಿದ್ದಳು. ನಾನು ಎಮ್ಮೆಯನ್ನು ಮಾರಿ ಸಂಪಾದಿಸಿದ ಹಣದ ಜೊತೆ ನನ್ಹೆ ಪಂಡಿತ ಆಕೆಯನ್ನು ತನ್ನೊಂದಿಗೆ ಕರೆದೊಯ್ದಿರುವ ಶಂಕೆ ಇದೆ ಎಂದು ರಾಜು ದೂರಿನಲ್ಲಿ ತಿಳಿಸಿದ್ದಾರೆ.
ಮಹಿಳೆಯೊಬ್ಬರನ್ನು ಅಪಹರಣಕ್ಕೆ ಸಂಬಂಧಿಸಿದಂತೆ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 87 ರ ಅಡಿಯಲ್ಲಿ ಪೊಲೀಸರು ಎಫ್‌ಐಆರ್ ದಾಖಲಿಸಿದ್ದರು. ಎಫ್‌ಐಆರ್ ದಾಖಲಾದ ನಂತರ ಮಹಿಳೆ ಪೊಲೀಸ್ ಠಾಣೆಗೆ ಭೇಟಿ ನೀಡಿದ್ದರು ಎಂದು ಹರ್ದೋಯ್ ಪೊಲೀಸರು ತಿಳಿಸಿದ್ದಾರೆ. ಪತಿ ರಾಜು ತನ್ನನ್ನು ನಿಂದಿಸಿ ಥಳಿಸುತ್ತಾನೆ ಎಂದು ರಾಜೇಶ್ವರಿ ಹೇಳಿದ್ದಾರೆ. ಇದರಿಂದ ಮನನೊಂದ ತಾನು ಫರೂಕಾಬಾದಿನಲ್ಲಿರುವ ತನ್ನ ಸಂಬಂಧಿಕರ ಮನೆಗೆ ಹೋಗಿದ್ದೆ. ತಾನು ಯಾರ ಜೊತೆಯೂ ಹೋಗಿದ್ದೇನೆ ಎಂಬ ಆರೋಪ ಸುಳ್ಳು ಮತ್ತು ನಿರಾಧಾರವಾಗಿದೆ, ನಾವು ಮುಂದಿನ ಕ್ರಮ ಕೈಗೊಳ್ಳುತ್ತಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಮುಖ ಸುದ್ದಿ :-   ಹೈದರಾಬಾದ್‌ ಕ್ರಿಕೆಟ್‌ ಸ್ಟೇಡಿಯಂ ಸ್ಟ್ಯಾಂಡ್‌ ನಿಂದ ಮೊಹಮ್ಮದ್ ಅಜರುದ್ದೀನ್ ಹೆಸರು ತೆಗೆದುಹಾಕಲು ಆದೇಶ...

ಮಾಧ್ಯಮಗಳಲ್ಲಿ ಇದು ವರದಿಯಾದ ನಂತರ ಸಂಚಲನ ಉಂಟುಮಾಡಿತು. ಮಹಿಳೆ ತನ್ನ ಕುಟುಂಬವನ್ನು ಭಿಕ್ಷುಕಿಗಾಗಿ ತೊರೆದಿರುವ ಬಗ್ಗೆ ಪತ್ರಿಕೆಗಳಲ್ಲಿ ಹೆಡ್‌ಲೈನ್ಸ್‌ ಪಡೆಯಿತು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಹುಡುಕಾಟ ತೀವ್ರಗೊಳಿಸಿದ ನಂತರ ಮಂಗಳವಾರ ಸಂಜೆ ರಾಜೇಶ್ವರಿ ಸಂಬಂಧಿಕರ ಮನೆಯಲ್ಲಿ ಪತ್ತೆಯಾಗಿದ್ದಾರೆ. ನಂತರ ಅವರು ಠಾಣೆಗೆ ಬಂದರು ಎನ್ನಲಾಗಿದೆ. ವಿಚಾರಣೆಯ ಸಮಯದಲ್ಲಿ, ಭಿಕ್ಷುಕನೊಂದಿಗೆ ಓಡಿಹೋದ ಆರೋಪವನ್ನು ನಿರಾಕರಿಸಿದ್ದಾರೆ. ತನ್ನ ಪತಿಯಿಂದ ದೈಹಿಕ ಮತ್ತು ನಿಂದನೆ ಸಹಿಸಲಾಗದ ಕಾರಣ ತಾನು ಮನೆ ತೊಂರೆದು ಸಂಬಂಧಿಕರ ಮನೆಗೆ ಹೋಗಿದ್ದಾಗಿ ಹೇಳಿದ್ದಾರೆ. ತನ್ನ ಇಮೇಜ್‌ಗೆ ಧಕ್ಕೆ ತರಲು ಪತಿ ಉದ್ದೇಶಪೂರ್ವಕವಾಗಿ ಸುಳ್ಳು ದೂರು ದಾಖಲಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ಆರೋಪಗಳನ್ನು ಪರಿಶೀಲಿಸಲು ಮತ್ತು ಪ್ರಕರಣವನ್ನು ಪರಿಹರಿಸಲು ಪೊಲೀಸರು ತಮ್ಮ ತನಿಖೆಯನ್ನು ಮುಂದುವರೆಸಿದ್ದಾರೆ.

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement