ಲಕ್ನೋ: ಉತ್ತರ ಪ್ರದೇಶದ ಝಾನ್ಸಿಯ ಮಾಲ್‌ನಲ್ಲಿ ಕೋತಿಯೊಂದು ಮಹಿಳಾ ಗ್ರಾಹಕರೊಬ್ಬರ ಮೇಲೆ ದಾಳಿ ಮಾಡಿದ ನಂತರ ಗೊಂದಲ ಉಂಟಾದ ಘಟನೆ ವರದಿಯಾಗಿದೆ.
ವೈರಲ್ ಆಗಿರುವ ವೀಡಿಯೊದಲ್ಲಿ ಝಾನ್ಸಿಯ ಸಿಟಿ ಕಾರ್ ಮಾಲ್‌ನಲ್ಲಿರುವ ಅಂಗಡಿಯೊಳಗೆ ಮಂಗವೊಂದು ಓಡಾಡುತ್ತಿರುವುದು ಕಂಡುಬಂದಿದೆ. ಮಂಗವನ್ನು ಸೆರೆಹಿಡಿಯಲು ಪ್ರಯತ್ನಿಸಿದ್ದಾರೆ. ಆದರೆ ಅದರಿಂದ ತಪ್ಪಿಸಿಕೊಳ್ಳುತ್ತ ಮಂಗವು ಎಲ್ಲೆಂದರಲ್ಲಿ ಓಡಾಡಿದೆ.
ಇದ್ದಕ್ಕಿದ್ದಂತೆ ಕೋತಿ ಭಯದಿಂದ ಕುಳಿತಿದ್ದ ಮಹಿಳೆಯ ಮೇಲೆ ಹಾರಿದಾಗ ಆಕೆ ಸಹಾಯಕ್ಕಾಗಿ ಕಿರುಚಿದ್ದಾರೆ. ಕೆಲವರು ಬಾಳೆಹಣ್ಣನ್ನು ನೀಡುವ ಮೂಲಕ ಕೋತಿಯನ್ನು ಆಕರ್ಷಿಸಿ ಮಹಿಳೆಯಿಂದ ಅದನ್ನು ದೂರ ಮಾಡಲು ಪ್ರಯತ್ನಿಸಿದರು, ಇತರರು ಮಹಿಳೆಗೆ ಎದ್ದು ನಿಲ್ಲುವಂತೆ ಸಲಹೆ ನೀಡಿದರು ಆದರೆ ಏನೂ ಪ್ರಯೋಜನವಾಗಲಿಲ್ಲ.
ನಂತರ ಕೋತಿ ಬಟ್ಟೆಯ ರ್ಯಾಕ್‌ಗೆ ಹಾರಿ ಮತ್ತೆ ಮಹಿಳೆಯ ಮೇಲೆ ಹಾರಿತು. ಅದು ಪದೇ ಪದೇ ಮಹಿಳೆಯ ಮೇಲೆ ದಾಳಿ ಮಾಡಿತು, ಕೋತಿ ಮಹಿಳೆಯ ಕೂದಲನ್ನು ಎಳೆದು ಕಚ್ಚಲು ಪ್ರಯತ್ನಿಸುತ್ತಿರುವುದು ಕಂಡುಬಂದಿದೆ. ಭಯಭೀತಳಾದ ಮಹಿಳೆ “ಇದು ನನ್ನನ್ನು ಕಚ್ಚಿದೆ!” ಎಂದು ಕಿರುಚುತ್ತಾ ತನ್ನ ಸುತ್ತಲಿನ ಜನರಿಗೆ ಕೋತಿಯನ್ನು ಓಡಿಸುವಂತೆ ವಿನಂತಿಸಿದ್ದಾಳೆ. ಇತರರು ಅದನ್ನು ಹಿಡಿಯಲು ಎಷ್ಟೇ ಪ್ರಯತ್ನಿಸಿದರೂ ಅದು ಸಿಗಲಿಲ್ಲ. ನಂತರ ಅದು ಮಹಿಳೆಯಿಂದ ದೂರ ಹೋಗುವಾಗ ಆಕೆಯ ಶೂ ಕಸಿದುಕೊಂಡು ಅದನ್ನು ಕಡಿಯುತ್ತಲೇ ಇತ್ತು.
ಜನರು ಅದರ ಮೇಲೆ ದೊಡ್ಡ ಬ್ಲಾಂಕೆಟ್ ಎಸೆದು ಕೋತಿಯನ್ನು ಹಿಡಿಯಲು ಪ್ರಯಸಿದರು.ಆದರೆ ಅದು ಪ್ರತಿ ಬಾರಿಯೂ ತಪ್ಪಿಸಿಕೊಂಡಿತು. ಸ್ವಲ್ಪ ಸಮಯದ ನಂತರ ಎರಡನೇ ಸುತ್ತಿನ ಬೆನ್ನಟ್ಟುವಿಕೆ ನಡೆಯಿತು. ಅಲ್ಲಿಗೆ ವೀಡಿಯೊ ಮುಕ್ತಾಯವಾಗಿದೆ.
ನಿಮ್ಮ ಕಾಮೆಂಟ್ ಬರೆಯಿರಿ