ಬೆಂಗಳೂರು: ಬಾಹ್ಯಾಕಾಶ ಡಾಕಿಂಗ್‌ಗಾಗಿ ಪ್ರಾಯೋಗಿಕ ಪ್ರಯತ್ನದಲ್ಲಿ ಭಾರತದ ಉಪಗ್ರಹಗಳನ್ನು ಮೂರು ಮೀಟರ್‌ಗಳಷ್ಟು ಹತ್ತಿರಕ್ಕೆ ತರಲಾಯಿತು. ಮತ್ತು ಈಗ ಹಿಂದಕ್ಕೆ ಚಲಿಸುತ್ತಿವೆ ಎಂದು ಭಾರತೀಯ ಬಾಹ್ಯಾಕಾಶ ಸಂಸ್ಥೆ (ISRO) ಇಂದು, ಭಾನುವಾರ ಬೆಳಿಗ್ಗೆ ತಿಳಿಸಿದೆ. ನಂತರ ಉಪಗ್ರಹಗಳು ಪ್ರತಿ ಸೆಕೆಂಡಿಗೆ 10 ಮಿಲಿಮೀಟರ್ ವೇಗದಲ್ಲಿ ಪರಸ್ಪರ ಹತ್ತಿರ ಚಲಿಸುತ್ತವೆ.
“15 ಮೀ ಮತ್ತು ಇನ್ನೂ ಹತ್ತಿರವೆಂದರೆ 3 ಮೀ ತಲುಪಲು ಪ್ರಾಯೋಗಿಕ ಪ್ರಯತ್ನವನ್ನು ಮಾಡಲಾಗಿದೆ. ಸುರಕ್ಷಿತ ದೂರಕ್ಕೆ ಬಾಹ್ಯಾಕಾಶ ನೌಕೆಗಳನ್ನು ಹಿಂದಕ್ಕೆ ಸರಿಸಲಾಗುತ್ತಿದೆ. ಮತ್ತಷ್ಟು ಡೇಟಾವನ್ನು ವಿಶ್ಲೇಷಿಸಿದ ನಂತರ ಡಾಕಿಂಗ್ ಪ್ರಕ್ರಿಯೆಯನ್ನು ಮಾಡಲಾಗುತ್ತದೆ” ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಬಾಹ್ಯಾಕಾಶ ಡಾಕಿಂಗ್ ಪ್ರಯೋಗ (SpaDeX) ಕಾರ್ಯಾಚರಣೆ ಬಗ್ಗೆ ತನ್ನ ಇತ್ತೀಚಿನ ಮಾಹಿತಿಯಲ್ಲಿ ತಿಳಿಸಿದೆ..
ಬಾಹ್ಯಾಕಾಶದಲ್ಲಿರುವ ಎರಡು ಉಪಗ್ರಹಗಳ “ಉತ್ತೇಜಕ ಹ್ಯಾಂಡ್ಶೇಕ್” ಎಂದು ಇಸ್ರೋ (ISRO) ವಿವರಿಸಿರುವುದನ್ನು ಸಾಧಿಸಲು ಉಪಗ್ರಹಗಳನ್ನು ಹಿಂದಕ್ಕೆ ಮತ್ತು ಮುಂದಕ್ಕೆ ಚಲಿಸುವಂತೆ ಮಾಡುವ ಡಾಕಿಂಗ್ ಬಹಳ ಸಂಕೀರ್ಣವಾದ ಪ್ರಕ್ರಿಯೆಯಾಗಿದೆ. ಇದನ್ನು ಸಾಧಿಸಲು ಭಾರತವು ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ ಭಾರತೀಯ ಡಾಕಿಂಗ್ ವ್ಯವಸ್ಥೆಯನ್ನು ಬಳಸುತ್ತಿದೆ.
ಸ್ಪೇಡೆಕ್ಸ್ (SpaDeX) ಮಿಷನ್ ಅನ್ನು ಡಿಸೆಂಬರ್ 30 ರಂದು ಉಪಗ್ರಹಗಳಾದ SDX01 (ಚೇಸರ್) ಮತ್ತು SDX02 (ಟಾರ್ಗೆಟ್) ನೊಂದಿಗೆ ಪಿಎಸ್‌ಎಲ್‌ವಿ (PSLV) C60 ರಾಕೆಟ್‌ನಲ್ಲಿ ಮೇಲಕ್ಕೆತ್ತಿ 475-ಕಿಲೋಮೀಟರ್ ವೃತ್ತಾಕಾರದ ಕಕ್ಷೆಯಲ್ಲಿ ಇರಿಸಲಾಯಿತು.
ಈ ಕಾರ್ಯಾಚರಣೆಯೊಂದಿಗೆ ಭಾರತವು ತನ್ನ ಭವಿಷ್ಯದ ಬಾಹ್ಯಾಕಾಶ ಪರಿಶೋಧನೆಗಳಾದ ಭಾರತೀಯ ಅಂತರಿಕ್ಷ ನಿಲ್ದಾಣ ಮತ್ತು ಚಂದ್ರಯಾನ 4 ಗಳಲ್ಲಿ ದೇಶಕ್ಕೆ ಸಹಾಯವಾಗಲಿರುವ ಕಾರ್ಯಾಚರಣೆ ಮಾಡಲಿರುವ ನಾಲ್ಕನೇ ರಾಷ್ಟ್ರವಾಗಲು ಸಜ್ಜಾಗಿದೆ.
ಇಸ್ರೋ ಎರಡು ಉಪಗ್ರಹಗಳ ಐತಿಹಾಸಿಕ ಡಾಕಿಂಗ್ ಅನ್ನು ಎರಡು ಬಾರಿ ಮುಂದೂಡಿದೆ ಎಂದು ಮುಖ್ಯಸ್ಥ ಡಾ ಎಸ್ ಸೋಮನಾಥ ಇದು ಡಾಕಿಂಗ್‌ನಲ್ಲಿ ಭಾರತದ ಮೊದಲ ಪ್ರಯತ್ನವಾಗಿದೆ ಮತ್ತು ಪ್ರತಿ ಮೊದಲ ಪ್ರಯತ್ನವು ತನ್ನದೇ ಆದ ಸವಾಲುಗಳನ್ನು ಹೊಂದಿರುತ್ತದೆ ಎಂದು ಹೇಳಿದ್ದಾರೆ.
ಡಾಕಿಂಗ್ ನಂತರ ಎರಡು ಉಪಗ್ರಹಗಳನ್ನು ಒಂದೇ ಬಾಹ್ಯಾಕಾಶ ನೌಕೆಯಾಗಿ ನಿಯಂತ್ರಿಸಲಾಗುತ್ತದೆ. ಡಾಕಿಂಗ್ ಯಶಸ್ವಿಯಾಗಿದೆಯೇ ಎಂದು ಪರಿಶೀಲಿಸಲು ವಿದ್ಯುತ್ ಶಕ್ತಿಯನ್ನು ಒಂದು ಉಪಗ್ರಹದಿಂದ ಇನ್ನೊಂದಕ್ಕೆ ವರ್ಗಾಯಿಸಲಾಗುತ್ತದೆ. ಉಪಗ್ರಹಗಳನ್ನು ಅನ್‌ಡಾಕ್ ಮಾಡಿದ ನಂತರ ಮತ್ತು ಅವು ಸ್ವತಂತ್ರವಾಗಿ ಕಾರ್ಯನಿರ್ವಹಿಸಲು ಪ್ರಾರಂಭಿಸಿದ ನಂತರ ಪ್ರಕ್ರಿಯೆಯು ಯಶಸ್ವಿಯಾಗಿದೆ ಎಂದು ಘೋಷಿಸಲಾಗುತ್ತದೆ.
ನಿಮ್ಮ ಕಾಮೆಂಟ್ ಬರೆಯಿರಿ