“ಸಾವಿನ ನಂತರ ಏನಾಗುತ್ತದೆ?…ಯೂ ಟ್ಯೂಬ್‌ ಸರ್ಚ್‌ ಮಾಡಿದ ನಂತರ ಗುಂಡು ಹಾರಿಸಿಕೊಂಡು ಸಾವಿಗೀಡಾದ 15 ವರ್ಷದ ಬಾಲಕ…!!

ಮೀರತ್‌ : 15ರ ಹರೆಯದ ಬಾಲಕನೊಬ್ಬ ತನ್ನ ಸ್ನೇಹಿತರೊಂದಿಗೆ ಓಡಾಡುವುದನ್ನು ತಪ್ಪಿಸುವ ಸಲುವಾಗಿ ತಾಯಿ ಮತ್ತು ಅಣ್ಣ ಸೇರಿ ಆತನ ರಾಯಲ್ ಎನ್‌ಫೀಲ್ಡ್ ಬುಲೆಟ್ ಅನ್ನು ಮಾರಾಟ ಮಾಡಿದ ನಂತರ ಬಾಲಕ ಆತ್ಮಹತ್ಯೆ ಮಾಡಿಕೊಂಡ ಘಟನೆ ಉತ್ತರ ಪ್ರದೇಶದ ಮೀರತ್‌ನಲ್ಲಿ ನಡೆದಿದೆ. ತನ್ನ ಕುಟುಂಬದ ನಿರ್ಧಾರದಿಂದ ಕೋಪಗೊಂಡ ಬಾಲಕ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
9ನೇ ತರಗತಿಯಲ್ಲಿದ್ದ ಈತ ಆತ್ಮಹತ್ಯೆ ಮಾಡಿಕೊಳ್ಳುವ ಮೊದಲು “ಸಾವಿನ ನಂತರ ಒಬ್ಬ ವ್ಯಕ್ತಿಗೆ ಏನಾಗುತ್ತದೆ?” ಎಂದು ಗೂಗಲ್ ನಲ್ಲಿ ಹುಡುಕಾಟ ನಡೆಸಿದ್ದಾನೆ. ಯೂಟ್ಯೂಬ್ ಗಳಲ್ಲಿ ಗರುಡ ಪುರಾಣದ ಬಗ್ಗೆ ಹುಡುಕಿದ್ದಾನೆ. ನಂತರ ತನಗೆ ತಾನೇ ದೇಶೀ ಪಿಸ್ತೂಲ್ ನಿಂದ ಗುಂಡುಹಾರಿಸಿಕೊಂಡು ಸಾವಿಗೀಡಾಗಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

9 ನೇ ತರಗತಿಯಲ್ಲಿ ಓದುತ್ತಿದ್ದ  ಮೃತ ಬಾಲಕ, ಗುಂಡು ಹಾರಿಸಿಕೊಳ್ಳುವ ಮುನ್ನ ಆತ ಸಾವಿನ ರೀತಿ, ಸಾವಿನ ನಂತರ ಆತ್ಮ ಎಲ್ಲಿಗೆ ಹೋಗುತ್ತದೆ ಇತ್ಯಾದಿಗಳ ಬಗ್ಗೆ ತಿಳಿದುಕೊಳ್ಳುವುದಕ್ಕಾಗಿ ಗೂಗಲ್ ಹಾಗೂ ಯೂಟ್ಯೂಬ್ ನಲ್ಲಿ ಹುಡುಕಾಟ ನಡೆಸಿದ್ದಾನೆ. ಜನವರಿ 11 ರಂದು ಈ ಘಟನೆ ನಡೆದಿದ್ದು, ಬಾಲಕನ ಅಣ್ಣ ತಮ್ಮ ತಾಯಿಯನ್ನು ಮೀರತ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಿಂದ ಕರೆದುಕೊಂಡು ಬರಲು ಹೋಗಿದ್ದರು. ಬಾಗಿಲು ಒಳಗಿನಿಂದ ಲಾಕ್ ಆಗಿತ್ತು ಮತ್ತು ಅವರು ದೊಡ್ಡ ಶಬ್ದವನ್ನು ಕೇಳಿದರು. ತಾಯಿ ಮತ್ತು ಅವರ ಹಿರಿಯ ಮಗ ಕಿಟಕಿಯ ಮೂಲಕ ನೋಡಿದಾಗ ರಕ್ತದ ಮಡುವಿನಲ್ಲಿ ಬಿದ್ದಿದ್ದ ಹುಡುಗನನ್ನು ಕಂಡಿದ್ದಾರೆ. ಬಾಲಕನನ್ನು ತಕ್ಷಣವೇ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಲ್ಲಿ ವೈದ್ಯರು ಆತ ಮೃತಪಟ್ಟಿದ್ದಾನೆ ಎಂದು ಘೋಷಿಸಿದರು.

ಪ್ರಮುಖ ಸುದ್ದಿ :-   ಹಮಾಸ್‌ ಜೊತೆ ನಂಟು ; ಅಮೆರಿಕದಲ್ಲಿ ಭಾರತದ ಸಂಶೋಧನಾ ವಿದ್ಯಾರ್ಥಿಯ ಬಂಧನ : ಶೀಘ್ರವೇ ಗಡೀಪಾರು

ಬಾಲಕನ ತಾಯಿ ಮೀರತ್ ವೈದ್ಯಕೀಯ ಕಾಲೇಜಿನಲ್ಲಿ ನರ್ಸ್ ಆಗಿದ್ದು, ಆತನ ಅಣ್ಣ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದು, ಕಳೆದ ವರ್ಷ ಅವರ ತಂದೆ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. 15 ವರ್ಷ ವಯಸ್ಸಿನವನು ತನ್ನ ಅಧ್ಯಯನದ ಮೇಲೆ ಗಮನಹರಿಸುತ್ತಿರಲಿಲ್ಲ ಮತ್ತು ಆತ ತನ್ನ ಸ್ನೇಹಿತರೊಂದಿಗೆ ಬೈಕಿನಲ್ಲಿ ಪದೇಪದೇ ತಿರುಗಾಡಲು ಹೋಗುತ್ತಿದ್ದ ಕಾರಣಕ್ಕೆ ಆತನಿಗೆ ಗದರಿಸುತ್ತಿದ್ದರು. ಆತ ವಿದ್ಯಾಭ್ಯಾಸದತ್ತ ಗಮನಹರಿಸುವ ಸಲುವಾಗಿ ಆತ ಸ್ನೇಹಿತರ ಜೊತೆ ಬೈಕಿನಲ್ಲಿ ಅಡ್ಡಾಡದಂತೆ ಮಾಡಲು
ಬೈಕ್ ಮಾರಾಟ ಮಾಡಲು ನಿರ್ಧರಿಸಿದರು. ಆದರೆ ಅವರ ನಿರ್ಧಾರದಿಂದ ಕೋಪಗೊಂಡ ಅವರು ಆತ್ಮಹತ್ಯೆ ಮಾಡಿಕೊಂಡ ಎಂದು ಪೊಲೀಸರು ತಿಳಿಸಿದ್ದಾರೆ.
ಕುಟುಂಬವು ಯಾವುದೇ ದೂರು ದಾಖಲಿಸಿಲ್ಲ ಮತ್ತು ಪೊಲೀಸರು .315 ಬೋರ್ ಕಂಟ್ರಿ ನಿರ್ಮಿತ ಪಿಸ್ತೂಲ್ ಅನ್ನು ವಶಪಡಿಸಿಕೊಂಡಿದ್ದಾರೆ. ಬಾಲಕನಿಗೆ ಆಯುಧ ಹೇಗೆ ಸಿಕ್ಕಿತು ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement