ಬಾಲಿವುಡ್ ಚಲನಚಿತ್ರ ತೇರಿ ಮೆಹರ್ ಬಾನಿಯಾ ಅನ್ನು ನೆನಪಿಸಿಕೊಳ್ಳಿ, ಇದರಲ್ಲಿ ನಾಯಿಯೊಂದು ತನ್ನ ಮಾಲೀಕನ ಸಾವಿಗೆ ಪ್ರತೀಕಾರ ತೀರಿಸಿಕೊಳ್ಳುತ್ತದೆ. ಮಧ್ಯಪ್ರದೇಶದ ಬುಂದೇಲ್‌ಖಂಡ್ ಪ್ರದೇಶದ ಸಾಗರ ಎಂಬಲ್ಲಿ ನಾಯಿ ಸೇಡಿನ ಸಂಚು ಬೆಳಕಿಗೆ ಬಂದಿದೆ.
ಸಾಗರ ನಿವಾಸಿ ಪ್ರಹ್ಲಾದ ಸಿಂಗ್ ಘೋಶಿ ಎಂಬವರು ತಮ್ಮ ಕಾರನ್ನು ತಿರುಗಿಸುತ್ತಿದ್ದಾಗ ಆಕಸ್ಮಿಕವಾಗಿ ಕಾರು ನಾಯಿಗೆ ಡಿಕ್ಕಿ ಹೊಡೆದಿದೆ. ನಾಯಿಗೆ ಯಾವುದೇ ಹಾನಿಯಾಗಲಿಲ್ಲ, ಆದರೆ ಮರುದಿನ ಬೆಳಿಗ್ಗೆ ಅದರ ಪ್ರತೀಕಾರವಾಗಿ ನಾಯಿ ಮತ್ತೊಂದು ನಾಯಿ ಜತೆ ಸೇರಿ ಕಾರನ್ನು ಸ್ಕ್ರ್ಯಾಚ್ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.
ಸಾಗರ ನಗರದ ತಿರುಪತಿಪುರಂ ಪ್ರದೇಶದಲ್ಲಿ ನೆಲೆಸಿರುವ ಪ್ರಹ್ಲಾದ ಸಿಂಗ್ ಘೋಶಿ ಅವರು ಜನವರಿ 17 ರಂದು ಮಧ್ಯಾಹ್ನ 2 ಗಂಟೆ ಸುಮಾರಿಗೆ ಮದುವೆ ಸಮಾರಂಭದಲ್ಲಿ ಪಾಲ್ಗೊಳ್ಳಲು ಕುಟುಂಬ ಸಮೇತ ಮನೆಯಿಂದ ಹೊರಟಿದ್ದರು. ಅವರ ಮನೆಯ ಸಮೀಪ ತಿರುವಿನಲ್ಲಿ ಸಾಗುತ್ತಿದ್ದಾಗ, ಘೋಷಿ ಅವರ ಕಾರು ಅಲ್ಲಿ ಕುಳಿತಿದ್ದ ಕಪ್ಪು ನಾಯಿಗೆ ಡಿಕ್ಕಿ ಹೊಡೆದಿದೆ. ನಂತರ ಘೋಷಿ ಕಾರು ಚಲಾಯಿಸುತ್ತಿದ್ದಂತೆಯೇ ನಾಯಿ ಬೊಗಳುತ್ತಾ ಕಾರನ್ನು ಸ್ವಲ್ಪ ದೂರ ಹಿಂಬಾಲಿಸಿತು.
ಮಧ್ಯರಾತ್ರಿ 1 ಗಂಟೆ ಸುಮಾರಿಗೆ ಮದುವೆ ಮುಗಿಸಿ ಮನೆಗೆ ಬಂದ ನಂತರ ರಸ್ತೆಬದಿಯಲ್ಲಿ ಕಾರನ್ನು ನಿಲ್ಲಿಸಿ ಮಲಗಿದ್ದಾಗಿ ಘೋಷಿ ಹೇಳಿದ್ದಾರೆ. ಆದರೆ ತಾನು ಡಿಕ್ಕಿ ಹೊಡೆದ ನಾಯಿ ಮತ್ತೊಂದು ನಾಯಿ ಜೊತೆ ಸೇಡು ತೀರಿಸಿಕೊಳ್ಳಲು ಹಿಂಬಾಲಿಸಿ ಬಂದಿದೆ ಎಂದು ಅವರಿಗೆ ತಿಳಿದಿರಲಿಲ್ಲ.
ಮರುದಿನ ಬೆಳಿಗ್ಗೆ ಘೋಷಿ ಎದ್ದಾಗ, ತನ್ನ ಕಾರನ್ನು ಯಾರೋ ಗೀರು (ಸ್ಕ್ರ್ಯಾಚ್) ಮಾಡಿರುವುದು ಕಂಡುಬಂತು. ಆರಂಭದಲ್ಲಿ ಕೆಲವು ಮಕ್ಕಳು ಕಲ್ಲುಗಳನ್ನು ಬಳಸಿ ಹೀಗೆ ಮಾಡಿರಬಹುದು ಎಂದು ಶಂಕಿಸಿದ್ದರು. ಆದರೆ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಎರಡು ನಾಯಿಗಳು ತನ್ನ ಕಾರಿಗೆ ತಮ್ಮ ಉಗುರುಗಳಿಂದ ದಾಳಿ ಮಾಡುವುದನ್ನು ನೋಡಿ ದಿಗ್ಭ್ರಮೆಗೊಂಡರು.
“ಮೊದಲು, ನನಗೆ ಏನೂ ಅರ್ಥವಾಗಲಿಲ್ಲ, ಆದರೆ ಮಧ್ಯಾಹ್ನ ಈ ನಾಯಿ ನಮ್ಮ ಕಾರಿಗೆ ಡಿಕ್ಕಿ ಹೊಡೆದಿದೆ ಎಂದು ನನಗೆ ಇದ್ದಕ್ಕಿದ್ದಂತೆ ನೆನಪಾಯಿತು. ಮರುದಿನ ನಾನು ಕಾರಿನೊಂದಿಗೆ ಶೋರೂಮ್‌ಗೆ ಹೋದಾಗ, ಅದನ್ನು ಸರಿಪಡಿಸಲು ನನಗೆ ಸುಮಾರು 15,000 ರೂ. ವೆಚ್ಚ ತಗುಲಿತು ಎಂದು ಅವರು ಹೇಳಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ