ಯಲ್ಲಾಪುರ : ಬುಧವಾರ ಬೆಳ್ಳಂಬೆಳಗ್ಗೆ ತರಕಾರಿ ತುಂಬಿದ್ದ ಲಾರಿ ಪಲ್ಟಿಯಾಗಿ10 ಜನರು ಸಾವಿಗೀಡಾಗಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಗುಳ್ಳಾಪುರದಲ್ಲಿ ನಡೆದಿದೆ ಎಂದು ವರದಿಯಾಗಿದೆ.
ರಾಷ್ಟ್ರೀಯ ಹೆದ್ದಾರಿ 63ರಲ್ಲಿ ಗುಳ್ಳಾಪುರದ ಬಳಿ ಈ ಅಪಘಾತ ಸಂಭವಿಸಿದ್ದು 15ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಮೃತಪಟ್ಟವರನ್ನು ಫಯಾಜ್ ಜಮಖಂಡಿ (45), ವಾಸಿಮ್ ಮುಡಿಗೇರಿ (25), ಇಜಾಜ್ ಮುಲ್ಲಾ (20), ಸಾದುಕ್ (30), ಗುಲಾಮ್ ಹುಸೇನ್, ಇಂತಿಯಾಜ್ (40), ಅಲ್ಪಾಜ್ ಮಂಡಕಿ (25), ಜಿಲಾನಿ (20), ಅಸ್ಲಾಂ (24) ಇವರುಗಳು ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ ಎನ್ನಲಾಗಿದೆ, ಜಲಾಲ್ ತಾರಾ (30) ಹುಬ್ಬಳಿ ಕೀಮ್ಸ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ ಎಂದು ಹೇಳಲಾಗಿದೆ. ಇವರೆಲ್ಲರೂ ಸವಣೂರಿನವರು ಎಂದು ತಿಳಿದುಬಂದಿದೆ.
ಗಂಭೀರವಾಗಿ ಗಾಯಗೊಂಡ ಲಾರಿ ಚಾಲಕ ಅಶ್ರಫ್ (20) ಖ್ವಾಜಾ ಕಿಸಮತಗಾರ್ (22), ಮೊಹಮ್ಮದ್ ಸಾದಿಕ ಬತ್ತೇರಿ (25), ಖ್ವಾಜಾ ಮೈನು (24), ನಿಜಾಮ್ (30), ಮದ್ಲಾನ್ ಸಾಬ್ (24), ಜಾಫರ್ (22 ) ಎಂಬವರನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಲ್ಲಿಕ ರೆಹಾನ್ (21) ಅವರನ್ನು ಯಲ್ಲಾಪುರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.25ಕ್ಕೂ ಹೆಚ್ಚು ಜನರು ತರಕಾರಿ ತುಂಬಿದ್ದ ಲಾರಿಯಲ್ಲಿದ್ದರು, ಲಾರಿಯಲ್ಲಿ ಹಣ್ಣು ಹಾಗೂ ತರಕಾರಿಯನ್ನು ಹೇರಿಕೊಂಡು ಸವಣೂರಿನಿಂದ ಕುಮಟಾಗೆ ಹೊರಟಿದ್ದರು ಎನ್ನಲಾಗಿದೆ. ಲಾರಿ ಪಲ್ಟಿಯಾಗಿ ಕಂದಕಕ್ಕೆ ಬಿದ್ದಿದೆ. ಮುಂಜಾನೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾರೀ ಮಂಜು ಆವರಿಸಿದ್ದರಿಂದ ರಸ್ತೆ ಸರಿಯಾಗಿ ಕಾಣದ ಹಿನ್ನಲೆಯಲ್ಲಿ ನಿಯಂತ್ರಣ ಕಳೆದುಕೊಂಡ ಲಾರಿ ಪಲ್ಟಿಯಾಗಿದೆ ಎಂದು ಅಂದಾಜಿಸಲಾಗಿದೆ. ಮೃತಪಟ್ಟವರೆಲ್ಲರೂ ಸವಣೂರು ಮೂಲದವರು ಎಂದು ತಿಳಿದುಬಂದಿದೆ. ಹಲವರ ಸ್ಥಿತಿ ಗಂಭೀರವಾಗಿದೆ ಎನ್ನಲಾಗಿದೆ.
ಸ್ಥ
ನಿಮ್ಮ ಕಾಮೆಂಟ್ ಬರೆಯಿರಿ