ವೀಡಿಯೊ…| ವೈಷ್ಣೋದೇವಿ ತೀರ್ಥೋದ್ಭವ ಕಾರ್ಯಕ್ರಮದಲ್ಲಿ ಅದ್ಭುತವಾಗಿ ಭಜನೆ ಹಾಡಿದ ಮಾಜಿ ಸಿಎಂ ಫಾರೂಕ್ ಅಬ್ದುಲ್ಲಾ…!

ಶ್ರೀನಗರ: ನ್ಯಾಷನಲ್ ಕಾನ್ಫರೆನ್ಸ್ (NC) ಮುಖ್ಯಸ್ಥ ಮತ್ತು ಜಮ್ಮು ಮತ್ತು ಕಾಶ್ಮೀರದ (Jammu & Kashmir) ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ (Farooq Abdullah) ಅವರು ಜಮ್ಮು ಮತ್ತು ಕಾಶ್ಮೀರದ ಕತ್ರಾದಲ್ಲಿ ಧಾರ್ಮಿಕ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಭಜನೆ ಹಾಡಿದ್ದಾರೆ. ಮಾತಾ ವೈಷ್ಣೋದೇವಿ ತೀರ್ಥೋದ್ಭವದ ನಿಮಿತ್ತ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ‘ತುನೆ ಮುಜೆ ಬುಲಾಯ ಶೆರಾವಾಲಿಯೇ’ ಭಜನೆ ಹಾಡಿದ್ದಾರೆ.
87 ವರ್ಷದ ಅಬ್ದುಲ್ಲಾ ಅವರು ರಿಯಾಸಿ ಜಿಲ್ಲೆಯ ಕತ್ರಾಗೆ ಗುರುವಾರ ಭೇಟಿ ನೀಡಿದ್ದರು.

ಆಶ್ರಮದೊಳಗೆ ವ್ಯಕ್ತಿಯೊಬ್ಬರು ‘ತುನೆ ಮುಜೆ ಬುಲಾಯ ಶೆರಾವಾಲಿಯೇ’ ಭಜನೆ ಹಾಡುತ್ತಿದ್ದರು. ಈ ವೇಳೆ ಫಾರೂಕ್‌ ಅಬ್ದುಲ್ಲಾ ಮೈಕ್‌ ತೆಗೆದುಕೊಂಡು ಭಜನೆ ಹಾಡಿದ್ದಾರೆ. ಇದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಅಬ್ದುಲ್ಲಾ ಭಜನೆ ಹೇಳುತ್ತಿರುವುದು ಇದೇ ಮೊದಲೇನಲ್ಲ, ಈ ಹಿಂದೆ ಏಪ್ರಿಲ್ 2024 ರಲ್ಲಿ, ರಾಮಧುನ್‌ಗೆ ಸಂಬಂಧಿಸಿದ ಅವರ ವೀಡಿಯೊವೊಂದು ವೈರಲ್ ಆಗಿತ್ತು.

ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ರೋಪ್‌ವೇ ಯೋಜನೆ ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ಕತ್ರಾ ನಿವಾಸಿಗಳಿಗೆ ಬೆಂಬಲ ವ್ಯಕ್ತಪಡಿಸಿದರು. ನಗರದ ಹಿತಾಸಕ್ತಿಯನ್ನು ಗಣನೆಗೆ ತೆಗೆದುಕೊಳ್ಳದೆ ರೋಪ್‌ವೇ ಯೋಜನೆ ಆರಂಭಿಸಲಾಗಿದೆ. “ನೀವು ಧೈರ್ಯ ತೋರಿಸಿದ್ದೀರಿ ಮತ್ತು ಅದನ್ನು ತಡೆಯಲು ವೀರಾವೇಶದಿಂದ ಹೋರಾಡಿದ್ದೀರಿ. ಅಧಿಕಾರವು ಜನರ ಬಳಿ ಇದೆಯೇ ಹೊರತು ಸರ್ಕಾರದ ಬಳಿ ಅಲ್ಲ ಎಂದು ಹೇಳಿದ್ದಾರೆ. ಈ ಬೆಟ್ಟಗಳಲ್ಲಿ ವಾಸಿಸುವ ಜನರನ್ನು ಕಡೆಗಣಿಸಲಾಗಿದೆ. ಅಧಿಕಾರದಲ್ಲಿರುವವರು ತಾವು ಅಜೇಯ ಎಂದು ನಂಬುತ್ತಾರೆ, ದೈವಿಕ ಶಕ್ತಿ ಮೇಲುಗೈ ಸಾಧಿಸಿದಾಗ, ಉಳಿದೆಲ್ಲವೂ ಕಡಿಮೆಯಾಗುತ್ತದೆ. ಕ್ಯಾಲಿಫೋರ್ನಿಯಾದಲ್ಲಿ ಏನಾಗುತ್ತಿದೆ ಎಂಬುದನ್ನು ನೋಡಿ ಎಂದು ಅವರು ಹೇಳಿದ್ದಾರೆ.

ಪ್ರಮುಖ ಸುದ್ದಿ :-   ಹೈದರಾಬಾದ್‌ ಕ್ರಿಕೆಟ್‌ ಸ್ಟೇಡಿಯಂ ಸ್ಟ್ಯಾಂಡ್‌ ನಿಂದ ಮೊಹಮ್ಮದ್ ಅಜರುದ್ದೀನ್ ಹೆಸರು ತೆಗೆದುಹಾಕಲು ಆದೇಶ...

5 / 5. 5

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement