ಕುಮಟಾ | ಟಾಟಾ ಎಐಎ ಲೈಫ್‌ ಇನ್ಸುರೆನ್ಸ್‌ ನಿಂದ ಸಂಕಲ್ಪ ಯಾತ್ರೆ

ಕುಮಟಾ : ಟಾಟಾ ಎಐಎ ಲೈಫ್‌ ಇನ್ಸುರೆನ್ಸ್‌ ಕಂಪನಿ ವತಿಯಿಂದ ಜೀವ ವಿಮೆ ಬಗ್ಗೆ ಅರಿವು ಮೂಡಿಸುವ ಸಂಕಲ್ಪ ಯಾತ್ರೆ ಪಟ್ಟಣದಲ್ಲಿ ಶನಿವಾರ (ಜ.೨೫) ನಡೆಯಿತು.
ಇಲ್ಲಿನ ಮಹಾಸತಿ ದೇವಸ್ಥಾನದಿಂದ ಶನಿವಾರ ಬೆಳಿಗ್ಗೆ ೧೦ ಗಂಟೆಗೆ ಆರಂಭವಾದ ಪಾದಯಾತ್ರೆ ಚಂಡೆ-ವಾದ್ಯಗಳೊಂದಿಗೆ ನೆಲ್ಲಿಕೇರಿ ಮಾರ್ಗದ ಮೂಲಕ ರಥಬೀದಿ, ಸುಭಾಷ ರಸ್ತೆ, ಕೋರ್ಟ್‌ ರಸ್ತೆ ಮೂಲಕ ಸಾಗಿ ಟಾಟಾ ಎಐಎ ಲೈಫ್‌ ಇನ್ಸುರೆನ್ಸ್‌ ಕಚೇರಿ ವರೆಗೆ ನಡೆಯಿತು.
ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದ ನೂರಕ್ಕೂ ಹೆಚ್ಚು ಜೀವ ವಿಮಾ ಪ್ರತಿನಿಧಿಗಳು ಹಾಗೂ ಉದ್ಯೋಗಿಗಳು ಸಾರ್ವಜನಿಕರಿಗೆ ಜೀವ ವಿಮೆಯ ಮಹತ್ವದ ಬಗ್ಗೆ ಅರಿವು ಮೂಡಿಸಿದರು.
ಐಆರ್‌ಡಿಎ ಆಶಯದಂತೆ ೨೦೪೭ರ ಒಳಗೆ ಪ್ರತಿಕುಟುಂಬದ ಸದಸ್ಯರು ಜೀವ ಹೋದಿರಬೇಕು ಎಂಬುದು ಧ್ಯೇಯ ಇಟ್ಟುಕೊಲ್ಳಲಾಗಿದೆ. ಅವರ ಧ್ಯೇಯವನ್ನು ಸಾಕಾರಗೊಳಿಸಲು ಟಾಟಾ ಎಐಎ ಲೈಫ್‌ ಇನ್ಸುರೆನ್ಸ್‌ ರತನ್‌ ಟಾಟಾ ಅವರ ಜನ್ಮದಿನದ ನೆನಪಿಗಾಗಿ ಇಡೀ ದೇಶಾದ್ಯಂತ ಜನವರಿಯಲ್ಲಿ ಸಂಕಲ್ಪ ಯಾತ್ರೆಯನ್ನು ಹಮ್ಮಿಕೊಂಡಿದೆ ಎಂದು ತಿಳಿಸಲಾಯಿತು.
ʼಕಂಪನಿಯ ಶಾಖಾ ವ್ಯವಸ್ಥಾಪಕರು ಹಾಗೂ ಬಿಸಿನೆಸ್‌ ಅಸೊಸಿಯೇಟ್ಸಸಗಳು ಈ ಸಂದರ್ಭದಲ್ಲಿ ಮಾತನಾಡಿ, ನಮ್ಮ ಕಂಪನಿಯು ಎಲ್ಲರಿಗೂ ಅನುಕೂಲವಾಗುವಂತಹ ವೈಶಿಷ್ಟ್ಯಪೂರ್ಣ ವಿಮೆ ಪಾಲಿಸಿಗಳನ್ನು ಜಾರಿಗೆ ತಂದಿದೆ. ಅವುಗಳನ್ನು ಜನರಿಗೆ ತಲುಪಿಸಬೇಕು ಎಂದರು. ಅಲ್ಲದೆ, ಟಾಟಾ ಎಐಎ ಲೈಫ್‌ ಇನ್ಸುರೆನ್ಸ್‌ ಕಂಪನಿಯು ಜನರಿಗೆ ಸ್ವಂತ ಉದ್ಯೋಗದ ಅವಕಾಶವನ್ನೂ ನೀಡುತ್ತಿದೆ. ಅದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.

ಪ್ರಮುಖ ಸುದ್ದಿ :-   ಜನಿವಾರ ತೆಗೆಸಿದ ಪ್ರಕರಣ : ಪ್ರಾಂಶುಪಾಲ, ಸಿಬ್ಬಂದಿ ಕೆಲಸದಿಂದ ವಜಾ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement