ಬೆಳಗಾವಿ : ಬೆಳಗಾವಿಯ ನಾಲ್ವರು ಉದ್ಯಮಿಗಳ ಮನೆ ಹಾಗೂ ಕಚೇರಿಗಳ ಮೇಲೆ ಮಂಗಳವಾರ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎಂದು ವರದಿಯಾಗಿದೆ.
ಉದ್ಯಮಿಗಳಾದ ದೊಡ್ಡಣ್ಣವರ, ಅಜಿತ ಪಾಟೀಲ, ಅಶೋಕ ಹುಂಬರವಾಡಿ ಅವರಿಗೆ ಸೇರಿರುವ ಕಚೇರಿಗಳು ಮತ್ತು ಮನೆಗಳ ಮೇಲೆ ಈ ದಾಳಿ ನಡೆದಿದೆ ಎಂಬ ಮಾಹಿತಿ ಲಭ್ಯವಾಗಿದೆ. ಬೆಂಗಳೂರು ಮತ್ತು ಗೋವಾದ ಅಧಿಕಾರಿಗಳು ಮಂಗಳವಾರ ಬೆಳಿಗ್ಗೆಯಿಂದಲೇ ಕಾರ್ಯಾಚರಣೆಗೆ ಮುಂದಾಗಿದ್ದಾರೆ. ಎಲ್ಲಾ ಕಾಗದಪತ್ರಗಳನ್ನು ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ. ಒಟ್ಟು ಐದು ತಂಡಗಳಿಂದ ಮೂರು ಕಡೆಗಳಲ್ಲಿ ಏಕಕಾಲಕ್ಕೆ ದಾಳಿ ನಡೆದಿದೆ ಎನ್ನಲಾಗಿದೆ.
ಸಕ್ಕರೆ ಕಾರ್ಖಾನೆ, ಕಬ್ಬಿಣ ಹಾಗೂ ಗ್ರಾನೈಟ್ ಉದ್ಯಮಿಯಾಗಿರುವ ದೊಡ್ಡಣ್ಣವರ ದೇಶ-ವಿದೇಶಗಳಿಗೆ ಕಬ್ಬಿಣ ಹಾಗೂ ಗ್ರಾನೈಟ್ ರಫ್ತು ಮಾಡುತ್ತಾರೆ.
ನಿಮ್ಮ ಕಾಮೆಂಟ್ ಬರೆಯಿರಿ