ಯಾಣಕ್ಕೆ ಭೇಟಿ ನೀಡಿದ ನಟ ಶಿವರಾಜಕುಮಾರ ; 29 ವರ್ಷಗಳ ಹಿಂದೆ ನಡೆದ ʼನಮ್ಮೂರ ಮಂದಾರ ಹೂವೆʼ ಸಿನೆಮಾ ಚಿತ್ರೀಕರಣದ ಮೆಲುಕು

ಕಾರವಾರ: ಖ್ಯಾತ ಚಲನಚಿತ್ರ ನಟ ಹ್ಯಾಟ್ರಿಕ್ ಹೀರೋ ಶಿವರಾಜಕುಮಾರ( Shiva Rajkumar) ಇತ್ತೀಚೆಗೆ ಅನಾರೋಗ್ಯದಿಂದ ವಿದೇಶಕ್ಕೆ ಹೋಗಿ ಚಿಕಿತ್ಸೆ ಪಡೆದುಕೊಂಡು ಬಂದಿದ್ದಾರೆ. ಶಸ್ತ್ರಚಿಕಿತ್ಸೆ ಬಳಿಕ ಚೇತರಿಸಿಕೊಂಡಿರುವ ಅವರು ಈಗ ಉತ್ತರ ಕನ್ನಡ ಜಿಲ್ಲೆಯ ಪ್ರವಾಸಿತಾಣವಾಗಿರುವ ಯಾಣ (Yana)ಕ್ಕೆ ಭೇಟಿ ನೀಡಿದ್ದಾರೆ.
ಈ ಮೊದಲು ಅವರು 29 ವರ್ಷದ ಹಿಂದೆ ಯಾಣದಲ್ಲಿ ಚಿತ್ರೀಕರಣವಾಗಿದ್ದ ನಮ್ಮೂರ ಮಂದಾರಹೂವೆ ಸಿನಿಮಾ ಚಿತ್ರೀಕರಣದ ಸಮಯದಲ್ಲಿ ಇಲ್ಲಿ ತಂಗಿದ್ದರು. ಇದೀಗ ಮತ್ತೆ ಯಾಣಕ್ಕೆ ಭೇಟಿ ನೀಡಿದ್ದು ತಮ್ಮ ಹಳೆಯ ನೆನಪುಗಳನ್ನು ಹಂಚಿಕೊಂಡಿದ್ದಾರೆ.

ಹಳೆಯ ಫೋಟೋ ಹಾಗೂ ಇತ್ತೀಚೆಗೆ ಭೇಟಿ ಕೊಟ್ಟ ಫೋಟೋವನ್ನು ಅವರು ಎಕ್ಸ್‌ನಲ್ಲಿ ಹಂಚಿಕೊಂಡಿದ್ದಾರೆ. ಈ ವೇಳೆ ಅವರು ನಮ್ಮೂರು ಮಂದಾರ ಹೂವೆ ಸಿನೆಮಾ ಚಿತ್ರೀಕರಣದ ನೆನಪುಗಳನ್ನು ಹಂಚಿಕೊಂಡಿದ್ದಾರೆ. ಶಿವರಾಜಕುಮಾರ ಜೊತೆಗೆ ಪತ್ನಿ ಗೀತಾ ಕೂಡ ಯಾಣಕ್ಕೆ ಭೇಟಿ ನೀಡಿದ್ದಾರೆ.
ಯಾಣಕ್ಕೆ ಭೇಟಿ ನೀಡಿರುವ ಫೋಟೋಗಳನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ಶಿವಣ್ಣ, ಬಾಳಿನ ಬೆನ್ನು ಹತ್ತಿ.. ನೂರಾರು ಊರು ಸುತ್ತಿ.. ಏನೇನೋ ಕಂಡ ಮೇಲೂ.. ನಮ್ಮೂರೇ ನಮಗೆ ಮೇಲು. ನಮ್ಮೂರ ಮಂದಾರ ಹೂವೆ ನಂತರ ಮತ್ತೆ ನನ್ನ ಯಾಣ ಭೇಟಿ 29 ವರ್ಷಗಳ ಬಳಿಕ ಎಂದು ಬರೆದುಕೊಂಡಿದ್ದಾರೆ.

ಪ್ರಮುಖ ಸುದ್ದಿ :-   ಹಿಂದೂಸ್ತಾನಿ ಸಂಗೀತದ ಖ್ಯಾತ ಗಾಯಕ ಪಂಡಿತ ಪ್ರಭಾಕರ ಕಾರೇಕರ ನಿಧನ

5 / 5. 3

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement