ಹಾವುಗಳು, ವಿಶೇಷವಾಗಿ ಹೆಬ್ಬಾವುಗಳು, ಭಯಾನಕ ಮತ್ತು ಕುತೂಹಲಕಾರಿ ಜೀವಿಗಳು. ಆದರೆ ಹೆಚ್ಚಿನ ಜನರು ಹೆಬ್ಬಾವನ್ನು ಕಂಡರೆ ಬೆದರುತ್ತಾರೆ. ಆದರೆ ಇತ್ತೀಚಿನ ವೀಡಿಯೊವೊಂದು ಸಾಮಾಜಿಕ ತಾಣದಲ್ಲಿ ಗಮನ ಸೆಳೆದಿದ್ದು ಅದರಲ್ಲಿ ವ್ಯಕ್ತಿಯೊಬ್ಬರು ದೈತ್ಯ ಹೆಬ್ಬಾವನ್ನು ಕಾಲುವೆಯಿಂದ ಒಂದೇ ಕೈಯೊಂದ ಹಿಡಿದು ಮೇಲಕ್ಕೆತ್ತುತ್ತಿರುವುದು ಕಂಡುಬಂದಿದೆ.
ವೀಡಿಯೊ ತುಣುಕಿನಲ್ಲಿ, ಬೃಹತ್ ಹೆಬ್ಬಾವು ನೀರಿನಲ್ಲಿ ಚಲಿಸುತ್ತಿರುವುದನ್ನು ಕಾಣಬಹುದು, ಆಗ ವ್ಯಕ್ತಿಯೊಬ್ಬ ಶಾಂತವಾಗಿ ಮತ್ತು ಎಚ್ಚರಿಕೆಯಿಂದ ಹೆಬ್ಬಾವನ್ನು ಹಿಡಿದು ಅದನ್ನು ಸಣ್ಣ ತೊರೆಯಿಂದ ಹೊರತೆಗೆಯುತ್ತಾನೆ. ಒಂದು ಹಂತದಲ್ಲಿ, ಹಾವು ಆಕ್ರಮಣ ಮಾಡಲು ಪ್ರಯತ್ನಿಸುತ್ತದೆ, ಆದರೆ ಅದನ್ನು ತಪ್ಪಿಸಿಕೊಳ್ಳುತ್ತಾನೆ. ಒಂದೇ ಕೈಯಲ್ಲಿ ಹೆಬ್ಬಾವನ್ನು ಕೆಲಕಾಲ ಹಿಡಿದಿಟ್ಟುಕೊಂಡ ಆತ ಸೇತುವೆ ಮೇಲೆ ನಿಂತು ತನ್ನೆಲ್ಲ ಶಕ್ತಿಯೊಂದಿಗೆ ದೈತ್ಯ ಹೆಬ್ಬಾವನ್ನು ನೀರಿನಿಂದ ಮೇಲಕ್ಕೆತ್ತುತ್ತಾನೆ.
ಹಾವಿಗೆ ಹತ್ತಿರವಾಗಲು ಸೇತುವೆಯಿಂದ ಎಚ್ಚರಿಕೆಯಿಂದ ಕೆಳಗೆ ಸ್ವಲ್ಪ ಕೆಳಗೆ ಇಳಿದ ನಂತರ ಕೋಲಿನ ಸಹಾಯದಿಂದ ಹಾವನ್ನು ಮೇಲಕ್ಕೆತ್ತಲು ಪ್ರಾರಂಭಿಸುತ್ತಾನೆ. ನಂತರ ಆತ ತನ್ನ ಕಾಲಿನಿಂದ ಅದನ್ನು ಮೇಲಕ್ಕೆ ಎಳೆಯಲು ಪ್ರಯತ್ನಿಸುತ್ತಾನೆ. ನಂತರ ತನ್ನ ಕೈ ಬಳಸಿ ಅದನ್ನು ಮೇಲಕ್ಕೆತ್ತುತ್ತಾನೆ. ಈ ಸಮಯದಲ್ಲಿ, ಹಾವು ಅವನ ಮೇಲೆ ದಾಳಿ ಮಾಡುತ್ತದೆ, ಆದರೆ ಆತ ಚಾಕಚಕ್ಯತೆಯಿಂದ ದಾಳಿಯಿಂದ ತಪ್ಪಿಸಿಕೊಳ್ಳುತ್ತಾನೆ. ಕಾಲುವೆಯಿಂದ ಹಾವನ್ನು ಯಶಸ್ವಿಯಾಗಿ ಹೊರತೆಗೆದ ತಕ್ಷಣ ಸುತ್ತಮುತ್ತಲಿನ ಜನರು ಗಾಬರಿಯಿಂದ ಓಡುತ್ತಿರುವ ದೃಶ್ಯ ಕಂಡು ಬಂದಿದೆ.
ಹೆಚ್ಚಿನ ಸಾಮಾಜಿಕ ಮಾಧ್ಯಮ ಬಳಕೆದಾರರು ಮನುಷ್ಯನ ಧೈರ್ಯಶಾಲಿ ಪಾರುಗಾಣಿಕಾದಿಂದ ಆಶ್ಚರ್ಯಚಕಿತರಾದರು, ಆದರೆ ಕೆಲವರು ಹಾವು ಯಾರನ್ನೂ ನೋಯಿಸುತ್ತಿಲ್ಲ ಮತ್ತು ಅದರ ನೈಸರ್ಗಿಕ ಪರಿಸರದಲ್ಲಿದೆ, ಹೀಗಾಗಿ ಅದನ್ನು ಹಿಡಿಯುವ ಅಗತ್ಯವಿರಲಿಲ್ಲ ಎಂದು ಅವರು ವಾದಿಸಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ