ವೀಡಿಯೊ…| ಮಹಾಕುಂಭ ಮೇಳ ; ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿದ ಪ್ರಧಾನಿ ಮೋದಿ

ಪ್ರಯಾಗರಾಜ್‌ : ಪ್ರಧಾನಿ ನರೇಂದ್ರ ಮೋದಿ ಮಹಾಕುಂಭ ಮೇಳಕ್ಕೆ ಆಗಮಿಸಿದ್ದು, ಪ್ರಯಾಗರಾಜ್‌ನ ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿದ್ದಾರೆ. ಕೇಸರಿ ಬಟ್ಟೆ ಧರಿಸಿ, ಕೈಯಲ್ಲಿ ‘ರುದ್ರಾಕ್ಷಿ ಮಾಲೆ’ ಹಿಡಿದು ಅವರು ಪ್ರಾರ್ಥಿಸಿದ್ದಾರೆ.
ಇದಕ್ಕೂ ಮೊದಲು, ಪ್ರಧಾನಿ ಮೋದಿ ಅವರು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರೊಂದಿಗೆ ಏರಿಯಲ್ ಘಾಟ್‌ನಿಂದ ಮಹಾಕುಂಭಕ್ಕೆ ದೋಣಿ ವಿಹಾರ ಮಾಡಿದ್ದಾರೆ. ಕುಂಭಮೇಳದಲ್ಲಿ ಪಾಲ್ಗೊಂಡಿದ್ದ ಸಾವಿರಾರು ಭಕ್ತರತ್ತ ಪ್ರಧಾನಿ ಕೈಬೀಸಿದರು.
ಪ್ರಧಾನಿ ಮೋದಿ ಭೇಟಿಯ ಹಿನ್ನೆಲೆಯಲ್ಲಿ ನಗರದಲ್ಲಿ ಹೈ ಅಲರ್ಟ್ ಘೋಷಿಸಲಾಗಿದ್ದು, ಹಲವಾರು ಭಕ್ತರು ಸಂಗಮದಲ್ಲಿ ದಿನದ 24 ಗಂಟೆಯೂ ಪವಿತ್ರ ಸ್ನಾನ ಮಾಡುತ್ತಿದ್ದಾರೆ. ಪ್ರಧಾನಿ ಮೋದಿ ಅವರು ಅಕ್ಷಯಯ್ವತ್‌ ದೇವಾಲಯದಲ್ಲಿ ಮಲಗಿರುವ ಭಗವಾನ್‌ ಹನುಮಂತನ ‘ದರ್ಶನ’ ಮಾಡಲಿದ್ದಾರೆ.
ಪ್ರಧಾನಿ ಆಗಮನಕ್ಕಾಗಿ ಐದು ಮೇಳ ಪ್ರದೇಶಗಳಿಗೆ ಉಸ್ತುವಾರಿಗಳನ್ನು ನಿಯೋಜಿಸಲಾಗಿದೆ. ಮಹಾ ಕುಂಭ ಉತ್ಸವದ ಸ್ಥಳವನ್ನು ಜುನ್ಸಿ, ಪರೇಡ್, ಸಂಗಮ್, ತೇಲಿಯಾರಗಂಜ್ ಮತ್ತು ಅರೈಲ್ ಸೇರಿದಂತೆ ಐದು ಪ್ರಮುಖ ಪ್ರದೇಶಗಳಾಗಿ ವಿಂಗಡಿಸಲಾಗಿದೆ.

ಪ್ರಧಾನಿ ಮೋದಿಯವರ ಪವಿತ್ರ ಸ್ನಾನಕ್ಕಾಗಿ ಫೆಬ್ರವರಿ 5 ಅನ್ನು ಏಕೆ ಆರಿಸಲಾಯಿತು?
ಬಸಂತ ಪಂಚಮಿ ಮತ್ತು ಮೌನಿ ಅಮವಾಸ್ಯೆಯಂತಹ ಸಾಂಪ್ರದಾಯಿಕವಾಗಿ ಮಂಗಳಕರ ದಿನಗಳನ್ನು ಸಾಮಾನ್ಯವಾಗಿ ಕುಂಭದ ಸಮಯದಲ್ಲಿ ಪವಿತ್ರ ಸ್ನಾನಕ್ಕಾಗಿ ಆಯ್ಕೆ ಮಾಡಲಾಗುತ್ತದೆ, ಫೆಬ್ರವರಿ 5 ಅದರ ವಿಶಿಷ್ಟ ಅಧ್ಯಾತ್ಮಿಕ ಪ್ರಾಮುಖ್ಯತೆ ಪಡೆದಿದೆ. ಈ ದಿನಾಂಕವು ಮಾಘ ಅಷ್ಟಮಿಯೊಂದಿಗೆ ಹೊಂದಿಕೆಯಾಗುತ್ತದೆ, ಇದು ಹಿಂದೂ ಕ್ಯಾಲೆಂಡರ್‌ನಲ್ಲಿ ಮಂಗಳಕರ ದಿನವಾಗಿದ್ದು ಅದು ತಪಸ್ಸು, ಭಕ್ತಿ ಮತ್ತು ದಾನ ಕಾರ್ಯಗಳಿಗೆ ಮಹತ್ವದ ದಿನವಾಗಿದೆ.
ಸ್ಥಳೀಯ ವರದಿಗಳ ಪ್ರಕಾರ, ಪ್ರಧಾನಿ ಮೋದಿ ಭೇಟಿ ನೀಡುವ ಪ್ರದೇಶಗಳನ್ನು ರಾಷ್ಟ್ರೀಯ ಭದ್ರತಾ ಸಿಬ್ಬಂದಿ (NSG) ತನ್ನ ಸುಪರ್ದಿಗೆ ತೆಗೆದುಕೊಂಡಿದೆ.

ಪ್ರಮುಖ ಸುದ್ದಿ :-   ಹಿಂದೂಸ್ತಾನಿ ಸಂಗೀತದ ಖ್ಯಾತ ಗಾಯಕ ಪಂಡಿತ ಪ್ರಭಾಕರ ಕಾರೇಕರ ನಿಧನ

ಮ್ಯಾಜಿಸ್ಟ್ರೇಟ್‌ಗಳು ಮತ್ತು ಹೆಚ್ಚಿನ ಸಂಖ್ಯೆಯ ಪೊಲೀಸ್ ಪಡೆ, ಪಿಎಸಿ ಮತ್ತು ಆರ್‌ಎಎಫ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಗಂಗಾ ಘಾಟ್‌ಗಳಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ. ಕುಂಭನಗರಿ ಕಡೆಗೆ ಹೋಗುವವರನ್ನು ಕೂಲಂಕುಷವಾಗಿ ತಪಾಸಣೆ ಮಾಡಲಾಗುತ್ತಿದೆ.
ಭೂತಾನ್‌ನ ರಾಜ ಜಿಗ್ಮೆ ಖೇಸರ್ ನಮ್ಗ್ಯಾಲ್ ವಾಂಗ್‌ಚುಕ್ ಕೂಡ ಮಹಾಕುಂಭ ಮೇಳದಲ್ಲಿ ಪಾಲ್ಗೊಂಡಿದ್ದರು. ಮುಖ್ಯಮಂತ್ರಿಯವರೊಂದಿಗೆ ಅವರು ಆಧ್ಯಾತ್ಮಿಕ ಚಟುವಟಿಕೆಗಳಲ್ಲಿ ಭಾಗವಹಿಸಿದರು, ಲೇಟೆ ಹನುಮಾನ ಮಂದಿರಕ್ಕೆ ಭೇಟಿ ನೀಡಿದರು ಮತ್ತು ಡಿಜಿಟಲ್ ಮಹಾಕುಂಭ ಅನುಭವ ಕೇಂದ್ರಕ್ಕೂ ಭೇಟಿ ನೀಡಿದರು.

ಪ್ರಮುಖ ಸುದ್ದಿ :-   26/11 ಮುಂಬೈ ಭಯೋತ್ಪಾದಕ ದಾಳಿ ಸಂಚುಕೋರ ತಹವ್ವುರ್ ರಾಣಾ ಹಸ್ತಾಂತರಕ್ಕೆ ಅಮೆರಿಕ ಒಪ್ಪಿಗೆ ; ಪ್ರಧಾನಿ ಮೋದಿ ಸಮ್ಮುಖದಲ್ಲಿ ಟ್ರಂಪ್‌ ಘೋಷಣೆ

5 / 5. 3

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement