ವೀಡಿಯೊ..| ಮಗುವನ್ನು ಎದೆಗವಚಿಕೊಂಡು ಲಾಠಿ ಹಿಡಿದು ದೆಹಲಿ ರೈಲ್ವೆ ನಿಲ್ದಾಣದಲ್ಲಿ ಜನಸಂದಣಿ ನಿಯಂತ್ರಿಸುತ್ತಿರುವ ಮಹಿಳಾ ಕಾನ್​ಸ್ಟೆಬಲ್…!

ನವದೆಹಲಿ: ರೈಲ್ವೆ ಸಂರಕ್ಷಣಾ ವಿಶೇಷ ಪಡೆ (ಆರ್‌ಪಿಎಸ್‌ಎಫ್) ಮಹಿಳಾ ಕಾನ್‌ಸ್ಟೆಬಲ್ ನವದೆಹಲಿ ರೈಲ್ವೆ ನಿಲ್ದಾಣದಲ್ಲಿ ಮಗುವನ್ನು ಎದೆಗವಚಿಕೊಂಡು ಪ್ರಯಾಣಿಕರ ರಕ್ಷಣೆಗಾಗಿ ಗಸ್ತು ತಿರುಗುತ್ತಿರುವ ವೀಡಿಯೊ ಎಲ್ಲೆಡೆ ವೈರಲ್ ಆಗಿದೆ. ಮಗುವನ್ನು ಎದೆಗಚಿಕೊಂಡು ಒಂದು ಕೈಯಲ್ಲಿ ಲಾಠಿ ಹಿಡಿದು ಜನಸಂದಣಿಯನ್ನು ನಿಯಂತ್ರಿಸುವ ಕೆಲಸ ಮಾಡುತ್ತಿದ್ದಾರೆ.
“ಅವಳು ಕೆಲಸ ಮಾಡುತ್ತಾಳೆ, ಅವಳು ಪೋಷಿಸುತ್ತಾಳೆ, ಅವಳು ಎಲ್ಲವನ್ನೂ ಮಾಡುತ್ತಾಳೆ… ತಾಯಿ, ಯೋಧ, ಹೀಗೆ ಎತ್ತರವಾಗಿ ನಿಂತಿದ್ದಾಳೆ… ಎಂದು ವೀಡಿಯೊವನ್ನು ಪೋಸ್ಟ್ ಮಾಡುವಾಗ ಆರ್‌ಪಿಎಸ್‌ಎಫ್ ಸಂಸ್ಥೆ ಬರೆದಿದೆ.

ರೀನಾ ಸಮವಸ್ತ್ರದಲ್ಲಿ ಲಾಠಿ ಹಿಡಿದು ನಿಲ್ದಾಣದಲ್ಲಿ ಪ್ರಯಾಣಿಕರನ್ನು ಶ್ರದ್ಧೆಯಿಂದ ಗಮನಿಸುತ್ತಿರುವುದನ್ನು ವೀಡಿಯೊ ತೋರಿಸುತ್ತದೆ, ಮತ್ತೊಂದೆಡೆ ಬೇಬಿ ಕ್ಯಾರಿಯರ್ ನಲ್ಲಿ ಪುಟ್ಟ ಮಗು ಮಲಗಿದೆ. ದಿ ಟೈಮ್ಸ್ ಆಫ್ ಇಂಡಿಯಾದ ಪ್ರಕಾರ, 18 ಮಂದಿ ಸಾವಿಗೆ ಕಾರಣವಾದ ನವದೆಹಲಿ ರೈಲು ನಿಲ್ದಾಣದಲ್ಲಿ ದುರಂತ ಕಾಲ್ತುಳಿತದ ನಂತರ ಮೂಲತಃ ರಜೆಯಲ್ಲಿದ್ದ ಕಾನ್‌ಸ್ಟೆಬಲ್ ಅವರನ್ನು ಮತ್ತೆ ಕೆಲಸಕ್ಕೆ ಕರೆಸಲಾಗಿದೆ.
ರೀನಾ ಅವರ ಪತಿ, ಸಿಆರ್‌ಪಿಎಫ್ ಕಾನ್‌ಸ್ಟೆಬಲ್ ಆಗಿದ್ದು, ಪ್ರಸ್ತುತ ಜಮ್ಮು ಮತ್ತು ಕಾಶ್ಮೀರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದು ವರದಿ ತಿಳಿಸಿದೆ.

ಅವರ ಅತ್ತೆ, ಮಾವ ಬದುಕಿಲ್ಲ, ಹೀಗಾಗಿ ಮಗುವನ್ನು ನೋಡಿಕೊಳ್ಳಲು ಬೇರೆ ಯಾರೂ ಇಲ್ಲದ ಕಾರಣ ಅನಿವಾರ್ಯವಾಗಿ ಮಗುವಿನೊಂದಿಗೆ ಕರ್ತವ್ಯಕ್ಕೆ ಹಾಜರಾಗಬೇಕಾಯಿತು. ತನ್ನ ಮಗುವನ್ನು ಕೆಲಸಕ್ಕೆ ಕರೆತರುವುದನ್ನು ಹೊರತುಪಡಿಸಿ ಅವರಿಗೆ ಬೇರೆ ಆಯ್ಕೆಯಿಲ್ಲ. ರೀನಾ ಕರ್ತವ್ಯದಲ್ಲಿರುವಾಗ ತನ್ನ ಮಗುವಿಗೆ ಮನೆಯಲ್ಲಿ ತಯಾರಿಸಿದ ಗಂಜಿ, ಕಂಬಳಿ, ಡೈಪರ್ ಮತ್ತು ಹಾಲು ಒಯ್ಯುತ್ತಾರೆ.
“ಇದು ನನ್ನ ದೈನಂದಿನ ದಿನಚರಿಯ ಭಾಗವಾಗಿದೆ. ಮಗು ಸುರಕ್ಷಿತವಾಗಿರುವುದನ್ನು ನಾನು ಖಚಿತಪಡಿಸಿಕೊಳ್ಳುತ್ತೇನೆ” ಎಂದು ರೀನಾ ಹೇಳಿದ್ದಾರೆ. “ನಾನು ಮಗುವಿನ ಆರೈಕೆ ಮಾಡುವವರನ್ನು ಹುಡುಕುತ್ತಿದ್ದೇನೆ, ಆದರೆ ನನಗೆ ಅವರು ಸಿಗುವ ವರೆಗೆ ನಾನು ಮಾಡಬೇಕಾದುದನ್ನು ಮಾಡುತ್ತಲೇ ಇರುತ್ತೇನೆ ಎಂದು ಹೇಳಿದ್ದಾರೆ.

ಪ್ರಮುಖ ಸುದ್ದಿ :-   ಹೈದರಾಬಾದ್‌ ಕ್ರಿಕೆಟ್‌ ಸ್ಟೇಡಿಯಂ ಸ್ಟ್ಯಾಂಡ್‌ ನಿಂದ ಮೊಹಮ್ಮದ್ ಅಜರುದ್ದೀನ್ ಹೆಸರು ತೆಗೆದುಹಾಕಲು ಆದೇಶ...

5 / 5. 4

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement