ವಯಸ್ಸಾದ ತಾಯಿಯನ್ನು ಮನೆಯಲ್ಲಿ ಕೂಡಿಹಾಕಿ ಕುಂಭ ಮೇಳಕ್ಕೆ ಹೋದ ಮಗ…!

ವೃದ್ಧ ತಾಯಿಯನ್ನು ಮನೆಯಲ್ಲಿ ಕೂಡಿ ಹಾಕಿ ಮಗನೊಬ್ಬ ಮಹಾಕುಂಭ ಮೇಳಕ್ಕೆ ಹೋದ ಘಟನೆ ಜಾರ್ಖಂಡ್​ನಲ್ಲಿ ನಡೆದಿದೆ. ಜಾರ್ಖಂಡದ ರಾಮಗಢದ ಮನೆಯೊಂದರಲ್ಲಿ ಬಂಧಿಯಾಗಿದ್ದ ಮಹಿಳೆಯನ್ನು ಸ್ಥಳೀಯರು ರಕ್ಷಿಸಿದ್ದಾರೆ.
ಮೂರು ದಿನಗಳ ಕಾಲ ಅನ್ನ-ನೀರು ಸೇವಿಸಿ ವೃದ್ಧೆ ಹೇಗೋ ಬದುಕುಳಿದಳು. ಆದರೆ ನಂತರ ಆಕೆಯ ಹಸಿವು ಮತ್ತು ಸಂಕಟದ ಕೂಗು ಅಕ್ಕಪಕ್ಕದವರಿಗೆ ಕೇಳಿಸಿದಾಗ, ಅವರು ಬಾಗಿಲು ಒಡೆದು ಒಳಗೆ ಪ್ರವೇಶಿಸಿದ ನಂತರ ವೃದ್ಧೆಯನ್ನು ಗಂಡು ಶಾಕ್‌ ಆಗಿದ್ದಾರೆ. ಯಾಕೆಂದರೆ ಹಸಿವಿನಿಂದ ದುರ್ಬಲಗೊಂಡ ಆಕೆ ಬದುಕಲು ಪ್ಲಾಸ್ಟಿಕ್ ತಿನ್ನಲು ಪ್ರಯತ್ನಿಸುತ್ತಿದ್ದಳು ಎಂದು ಹೇಳಲಾಗಿದೆ. ಅಕ್ಕಪಕ್ಕದವರು ತಕ್ಷಣ ಆಕೆಗೆ ಆಹಾರ ನೀಡಿದ್ದಾರೆ.
ಮಹಿಳೆಯ ಮಗನನ್ನು ಅಖಿಲೇಶ ಪ್ರಜಾಪತಿ ಎಂದು ಗುರುತಿಸಲಾಗಿದ್ದು, ಸೋಮವಾರ ತನ್ನ ಕುಟುಂಬದೊಂದಿಗೆ ಕುಂಭಮೇಳಕ್ಕೆ ತೆರಳುವ ಮೊದಲು ತನ್ನ 65 ವರ್ಷದ ತಾಯಿ ಸಂಜು ದೇವಿಯನ್ನು ತಮ್ಮ ಮನೆಯೊಳಗೆ ಕೂಡಿಹಾಕಿ ಬೀಗ ಹಾಕಿದ್ದರು. ಬುಧವಾರದ ಹೊತ್ತಿಗೆ, ಸಂಜು ದೇವಿ ಹಸಿವಿನಿಂದ ಹತಾಶಳಾಗಿದ್ದಳು, ಹಸಿವಿನ ಸಂಕಟದಲ್ಲಿ ಅವಳು ಅಕ್ಕಪಕ್ಕದವರನ್ನು ಕೂಗಿ ಕರೆದಿದ್ದಾರೆ. ಆಕೆಯ ಅಳಲು ಕೇಳಿದ ಅಕ್ಕಪಕ್ಕದವರು ಬಲವಂತದಿಂದ ಬಾಗಿಲು ಒಡೆದು ಒಳಗೆ ಪ್ರವೇಶಿಸಿದ್ದಾರೆ ಹಾಗೂ ಮಗಳು ಚಾಂದಿನಿ ದೇವಿಗೆ ಮಾಹಿತಿ ನೀಡಿದ್ದಾರೆ.

ಪ್ರಮುಖ ಸುದ್ದಿ :-   2026ರ ಮಿಸ್ ಯೂನಿವರ್ಸ್ ಇಂಡಿಯಾ ಕಿರೀಟ ಮುಡಿಗೇರಿಸಿಕೊಂಡ ಕೇರಳದ 19ರ ಹರೆಯದ ಕಾಜಿಯಾ

ಪೊಲೀಸರು ಮಗನನ್ನು ಫೋನ್ ಮೂಲಕ ಸಂಪರ್ಕಿಸಿದಾಗ, ಅಖಿಲೇಶ ಪ್ರಜಾಪತಿ ತಾನು ಮತ್ತು ತನ್ನ ಕುಟುಂಬವು ತಾಯಿಗೆ ಅಕ್ಕಿ ಮತ್ತು ಇತರ ಅಗತ್ಯ ವಸ್ತುಗಳನ್ನು ವ್ಯವಸ್ಥೆ ಮಾಡಿದ ನಂತರ ಸೋಮವಾರ ಬೆಳಿಗ್ಗೆ 11 ಗಂಟೆಗೆ ಮನೆಯಿಂದ ಹೊರಟಿದ್ದೇವೆ ಎಂದು ತಿಳಿಸಿದ್ದಾರೆ. ಕುಂಭಮೇಳದಲ್ಲಿ ಪಾಲ್ಗೊಳ್ಳುವಂತೆ ತಮ್ಮ ತಾಯಿ ಪ್ರೋತ್ಸಾಹಿಸಿದ್ದಳು ಎಂದು ಹೇಳಿಕೊಂಡಿದ್ದಾರೆ. ಆಕೆ ಅಸ್ವಸ್ಥಳಾಗಿದ್ದು, ಅದಕ್ಕಾಗಿಯೇ ಮನೆಯವರು ಅವಳನ್ನು ಕರೆದುಕೊಂಡು ಹೋಗಲಿಲ್ಲ ಎಂದು ಅಖಿಲೇಶ ಪ್ರಜಾಪತಿ ಹೇಳಿದ್ದಾರೆ.

ಸಂಜು ದೇವಿ ಪುತ್ರಿ ಚಾಂದಿನಿ ದೇವಿ ತನ್ನ ತಾಯಿಯನ್ನು ತಾನು ಆರೈಕೆ ಮಾಡುವುದಾಗಿ ಹೇಳಿದ್ದಾಳೆ. ಕುಂಭಮೇಳಕ್ಕೆ ಹೊರಡುವ ಮುನ್ನ ತಾಯಿಯನ್ನು ಮನೆಯೊಳಗೆ ಕೂಡಿಹಾಕಿ ಬೀಗ ಹಾಕಿ ಹೋಗುವ ಬದಲು ತನ್ನ ಸಹೋದರ ತನ್ನ ಮನೆಯಲ್ಲಿ ಬಿಟ್ಟು ಹೋಗಬಹುದಿತ್ತು ಎಂದು ಹೇಳಿದ್ದಾರೆ.ರಾಮಗಢ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಕೃಷ್ಣಕುಮಾರ, ವಯಸ್ಸಾದ ಮಹಿಳೆಯನ್ನು ಅವರ ಮನೆಯೊಳಗೆ ಬೀಗ ಹಾಕಿ ಬಗ್ಗೆ ಮಗ, ಸೊಸೆ ಮತ್ತು ಮಕ್ಕಳು ಪ್ರಯಾಗರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭಕ್ಕೆ ಹೋಗಿದ್ದಾರೆ ಎಂದು ನಮಗೆ ಮಾಹಿತಿ ಬಂದಿದೆ ಎಂದು ಖಚಿತಪಡಿಸಿದ್ದಾರೆ. ಔಪಚಾರಿಕವಾಗಿ ದೂರು ನೀಡಿದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.

ಪ್ರಮುಖ ಸುದ್ದಿ :-   ಕಾಡಿಗೆ ಬಿಟ್ಟು ಬಂದರೂ ಮತ್ತೆ ಅದೇ ಅರಳಿಮರದ ಜಾಗಕ್ಕೆ ಬಂದ ನಾಗಿಣಿ; ಅದನ್ನು ನೋಡಲು ಜನರ ದಂಡು

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement