ವೀಡಿಯೊ…| ಅಮೆರಿಕದ ಎಫ್‌ಬಿಐ ನಿರ್ದೇಶಕರಾಗಿ ಭಗವದ್ಗೀತೆ ಮೇಲೆ ಪ್ರಮಾಣ ವಚನ ಸ್ವೀಕರಿಸಿದ ಕಾಶ್ ಪಟೇಲ್

ಭಾರತೀಯ ಮೂಲದ ಕಾಶ್ ಪಟೇಲ್ ಅವರು ಶುಕ್ರವಾರ ಅಮೆರಿಕದ ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಶನ್ (ಎಫ್‌ಬಿಐ) ನಿರ್ದೇಶಕರಾಗಿ ಪ್ರಮಾಣ ವಚನ ಸ್ವೀಕರಿಸುವ ವೇಳೆ ಭಗವದ್ಗೀತೆಯ ಮೇಲೆ ಪ್ರಮಾಣ ವಚನ ಸ್ವೀಕರಿಸಿದರು.
ಬೈಬಲ್ ಬದಲಿಗೆ, ಪಟೇಲ್ ಅವರು ಅಟಾರ್ನಿ ಜನರಲ್ ಪಾಮ್ ಬೋಂಡಿ ಅವರಿಂದ ಪವಿತ್ರ ಹಿಂದೂ ಧರ್ಮಗ್ರಂಥವಾದ ಭಗವದ್ಗೀತೆ ಮೇಲೆ ಪ್ರಮಾಣ ವಚನ ಸ್ವೀಕರಿಸಿದರು. “ಗೀತೆಯ ಮೇಲೆ ಕೈ ಇಡಿ ಮತ್ತು ಬಲಗೈ ಮೇಲೆತ್ತಿ” ಎಂದು ಪಟೇಲರಿಗೆ ಅವರು ಶುಕ್ರವಾರ ಅವರ ಕುಟುಂಬ ಸದಸ್ಯರ ಸಮ್ಮುಖದಲ್ಲಿ ಐಸೆನ್‌ಹೋವರ್ ಕಾರ್ಯನಿರ್ವಾಹಕ ಕಚೇರಿ ಕಟ್ಟಡದಲ್ಲಿರುವ ಇಂಡಿಯನ್ ಟ್ರೀಟಿ ರೂಮ್‌ನಲ್ಲಿ ಪ್ರಮಾಣ ವಚನ ಬೋಧಿಸುವಾಗ ಹೇಳಿದರು.  ಪಟೇಲ್ ಅವರ ಗೆಳತಿ ಅಲೆಕ್ಸಿಸ್ ವಿಲ್ಕಿನ್ಸ್ ಭಗವದ್ಗೀತೆಯನ್ನು ಹಿಡಿದಿದ್ದರು.

ಟ್ರಂಪ್ ನಿಷ್ಠಾವಂತ ಬೆಂಬಲಿಗ ಪಟೇಲ್ ಅವರ ಎಫ್‌ಬಿಐ ನಿರ್ದೇಶಕ ಸ್ಥಾನವನ್ನು ಅಮೆರಿಕದ ಸೆನೆಟ್‌ನಲ್ಲಿ 51-49 ಮತಗಳಿಂದ ಅಂತರದಲ್ಲಿ ದೃಢಪಡಿಸಲಾಯಿತು. ಇಬ್ಬರು ರಿಪಬ್ಲಿಕನ್ ಸೆನೆಟರ್‌ಗಳಾದ ಸುಸಾನ್ ಕಾಲಿನ್ಸ್ ಮತ್ತು ಲಿಸಾ ಮುರ್ಕೊವ್ಸ್ಕಿ ಅವರು ಪಟೇಲ್ ವಿರುದ್ಧ ಮತ ಚಲಾಯಿಸಿದರು.
ಮಾಜಿ ಭಯೋತ್ಪಾದನಾ ನಿಗ್ರಹದ ಪ್ರಾಸಿಕ್ಯೂಟರ್ ಮತ್ತು ರಕ್ಷಣಾ ಕಾರ್ಯದರ್ಶಿಯ ಸಿಬ್ಬಂದಿ ಮುಖ್ಯಸ್ಥರಾಗಿದ್ದ ಪಟೇಲ್ ಅವರು ಎಫ್‌ಬಿಐನ ತೀವ್ರ ಟೀಕಾಕಾರರಾಗಿದ್ದಾರೆ. ಅವರ ದೃಢೀಕರಣವು ಡೆಮೋಕ್ರಾಟ್‌ಗಳಲ್ಲಿ ಕಳವಳಕ್ಕೆ ಕಾರಣವಾಗಿದೆ, ಕಾಶ್‌ ಪಟೇಲ್‌ ನಾಯಕತ್ವದಲ್ಲಿ ಡೆಮೋಕ್ರಾಟ್‌ಗಳಿಗೆ ಏಜೆನ್ಸಿಯ ಸ್ವಾಯತ್ತೆಯ ಬಗ್ಗೆ ಆತಂಕವಿದೆ.

ಪ್ರಮುಖ ಸುದ್ದಿ :-   ಅಮೆರಿಕ ವಾಯು ನೆಲೆ ಮೇಲೆ ಇರಾನ್‌ ಕ್ಷಿಪಣಿ ದಾಳಿ ; ವಾಯ ಪ್ರದೇಶ ಮುಚ್ಚಿದ ಕತಾರ್, ಯುಎಇ, ಬಹ್ರೇನ್

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement