ನ್ಯಾಯಾಲಯದ ವಿಚಾರಣೆಗೆಂದು ಬಂದಿದ್ದ ಅತ್ತೆ-ಸೊಸೆ ನಡುವೆ ಮಾರಾಮಾರಿ ನಡೆದ ಘಟನೆ ನಾಸಿಕ್ನಲ್ಲಿ ಗುರುವಾರ( ಫೆ.20) ಮಧ್ಯಾಹ್ನ ನಡೆದಿದೆ. ನ್ಯಾಯಾಲಯದ ಪ್ರವೇಶದ್ವಾರದಲ್ಲಿ ನಡೆದ ಹೊಡೆದಾಟವು ಅಲ್ಲಿದ್ದವರನ್ನು ಬೆಚ್ಚಿಬೀಳಿಸಿದೆ.
ಕೋರ್ಟ್ ವಿಚಾರಣೆಗೆ ಹಾಜರಾಗಿದ್ದ ಅತ್ತೆ ಸೊಸೆ ನ್ಯಾಯಾಲಯದ ಆವರಣದಲ್ಲಿಯೇ ಜಗಳವಾಡಿದ್ದಾರೆ. ತೀವ್ರ ವಾಗ್ವಾದ ನಡೆದ ನಂತರ ಎರಡೂ ಕಡೆಯವರ ನಡುವೆ ದೊಡ್ಡ ಮಾರಾಮಾರಿಯೇ ನಡೆಯಿತು. ವೀಡಿಯೋದಲ್ಲಿ, ಕುಟುಂಬದ ಸದಸ್ಯರು ಪರಸ್ಪರ ನಿಂದನೆ ಮತ್ತು ಜಗಳವಾಡಿದ್ದಾರೆ. ಜಗಳದ ಸಮಯದಲ್ಲಿ ಪರಸ್ಪರರ ಮೇಲೆ ಕುಳಿತುಕೊಳ್ಳುವುದನ್ನು ನೋಡಬಹುದು. ಹೊಡೆದಾಟದಲ್ಲಿ ಪಕ್ಕದಲ್ಲಿ ನಿಲ್ಲಿಸಿದ್ದ ಸ್ಕೂಟರ್ ಕೂಡ ಪಲ್ಟಿಯಾಗಿದೆ.
ಅತ್ತೆ ಸೊಸೆ ಜಗಳದ ವೇಳೆ ಸಂಬಂಧಿಕರೂ ಸೇರಿಕೊಂಡಿದ್ದು, ಪರಸ್ಪರ ದೈಹಿಕ ಹಲ್ಲೆ ನಡೆಸಿದ್ದಾರೆ. ಅಲ್ಲಿ ನರೆದಿದ್ದವರು ಗಲಾಟೆ ನಿಲ್ಲಿಸಲು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ, ನಂತರ ಅಲ್ಲಿದ್ದವರು ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದರು. ಕೊನೆಗೆ ಪೊಲೀಸರು ಆಗಮಿಸಿ ಎರಡೂ ಕಡೆಯವರ ವಿರುದ್ಧ ಸೂಕ್ತ ಕ್ರಮಕೈಗೊಂಡರು.
ಏತನ್ಮಧ್ಯೆ, ನ್ಯಾಯಾಲಯದ ಪ್ರವೇಶದ್ವಾರದಲ್ಲಿ ಇಂತಹ ಫ್ರೀಸ್ಟೈಲ್ ಹೊಡೆದಾಟ ಸಂಭವಿಸಿದ್ದರಿಂದ, ಇಡೀ ದಿನ ನ್ಯಾಯಾಲಯದ ಆವರಣದಲ್ಲಿ ಈ ಘಟನೆ ತೀವ್ರ ಚರ್ಚೆಗೆ ಗ್ರಾಸವಾಯಿತು. ಅತ್ತೆ ಮತ್ತು ಸೊಸೆಯ ನಡುವಿನ ವಿವಾದಗಳು ಸಾಮಾನ್ಯವಾಗಿದೆ, ಆದರೆ ಅಂತಹ ಜಗಳಗಳು ಎಷ್ಟು ಅಪಾಯಕಾರಿಯಾಗಬಹುದು ಎಂಬುದನ್ನು ಈ ಘಟನೆ ಎತ್ತಿ ತೋರಿಸುತ್ತದೆ.
ನಿಮ್ಮ ಕಾಮೆಂಟ್ ಬರೆಯಿರಿ