ನವದೆಹಲಿ: ಗೂಗಲ್ ಮ್ಯಾಪ್ ನಂಬಿ ಹೋಗಿ ಕಾರೊಂದು 30 ಅಡಿ ಆಳದ ಚರಂಡಿಗೆ ಉರುಳಿಬಿದ್ದು ಅದರೊಳಗೆ ಪ್ರಯಾಣಿಸುತ್ತಿದ್ದ 31 ವರ್ಷದ ಸ್ಟೇಷನ್ ಮಾಸ್ಟರ್ ಸಾವಿಗೀಡಾಗಿದ್ದಾರೆ ಎಂದು ವರದಿಯಾಗಿದೆ. ಗ್ರೇಟರ್ ನೋಯ್ಡಾದ ಪಿ-4 ಸೆಕ್ಟರ್ ಬಳಿ ಸಂಭವಿಸಿದ ಅಪಘಾತಕ್ಕೆ ಪ್ರಾಧಿಕಾರ ಹಾಗೂ ಗೂಗಲ್ ಮ್ಯಾಪ್ ಕಾರಣ ಎಂದು ಹೇಳಲಾಗಿದೆ.
ವರದಿಗಳ ಪ್ರಕಾರ, ಘಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸರು ಸ್ಟೇಷನ್ ಮಾಸ್ಟರ್ ಅವರನ್ನು ಚರಂಡಿಯಿಂದ ಹೊರತೆಗೆದರು. ತಕ್ಷಣ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಾವರು ಮೃತಪಟ್ಟಿದ್ದಾರೆ. ಬಳಿಕ ಅಧಿಕಾರಿಗಳು ಕ್ರೇನ್ ಸಹಾಯದಿಂದ ಕಾರನ್ನು ಚರಂಡಿಯಿಂದ ಹೊರತೆಗೆದಿದ್ದಾರೆ.
ಭರತ ಭಾಟಿ ಎಂದು ಗುರುತಿಸಲಾದ ಮೃತ ವ್ಯಕ್ತಿ ದೆಹಲಿಯ ಮಂಡವಾಲಿ ನಿವಾಸಿಯಾಗಿದ್ದು, ಮನೇಸರ್‌ನಲ್ಲಿ ನೆಲೆಸಿದ್ದರು. ಅವರ ಸಹೋದರ ದಿಲೀಪ ಭಾಟಿ ಪ್ರಕಾರ, ಭರತ ಅವರು ಗ್ರೇಟರ್ ನೋಯ್ಡಾದ ಗಿರಿಧರಪುರದಲ್ಲಿ ಮದುವೆಗೆ ಹೋಗುವುದಾಗಿ ಹೇಳಲು ಕರೆ ಮಾಡಿದ್ದರು, ಆದರೆ ಹೋಗುವ ದಾರಿಯ ಬಗ್ಗೆ ಸರಿಯಾಗಿ ಗೊತ್ತಿಲ್ಲದ ಕಾರಣ. ಅವರು ಗೂಗಲ್ ಮ್ಯಾಪ್‌ನಲ್ಲಿ ಸ್ಥಳವನ್ನು ನಮೂದಿಸಿದ್ದರು ಮತ್ತು ಅದು ತೋರಿಸಿದ ದಾರಿಯನ್ನು ಅನುಸರಿಸುತ್ತಿದ್ದರು ಎಂದು ತಿಳಿಸಿದ್ದಾರೆ.
ಘಟನೆಯ ಸಮಯದಲ್ಲಿ, ಸ್ಥಳದಲ್ಲಿದ್ದ ಡೆಲಿವರಿ ಏಜೆಂಟ್ ಸೌರವ್ ಎಂಬವರು, ಕೇಂದ್ರೀಯ ವಿಹಾರ್ 2 ಸೊಸೈಟಿಯ ಸಮೀಪವಿರುವ ಪಿ -4 ಸೆಕ್ಟರ್ ಬಳಿ ಅಪಘಾತ ಸಂಭವಿಸಿದೆ ಎಂದು ವರದಿ ಮಾಡಿದ್ದಾರೆ. ಸರಿಸುಮಾರು ಮಧ್ಯಾಹ್ನ 2:30 ರ ಸಮಯದಲ್ಲಿ ಅವರು ಸಮೀಪದಲ್ಲಿ ನಿಂತಿದ್ದಾಗ ಕಾರೊಂದು ಇದ್ದಕ್ಕಿದ್ದಂತೆ ಸಮೀಪಿಸಿ ನೇರವಾಗಿ ಆಳದ ಚರಂಡಿಗೆ ಉರುಳಿತು ಎಂದು ಅವರು ಹೇಳಿದ್ದಾರೆ. ಚಾಲಕ ಗೂಗಲ್ ಮ್ಯಾಪ್ ಬಳಸುತ್ತಿರಬಹುದು ಎಂದು ಸೌರವ್ ಹೇಳಿದ್ದಾರೆ. ಸ್ಥಳೀಯರು ಸಹಾಯ ಮಾಡಲು ಧಾವಿಸಿದರು, ಆದರೆ ಕಾರು ಪಲ್ಟಿಯಾಗಿ ನೀರಿನಿಂದ ತುಂಬಿತ್ತು ಎಂದು ಅವರು ಹೇಳಿದರು.
“ಗೂಗಲ್ ನಕ್ಷೆಗಳು ಇಲ್ಲಿ ನೇರವಾದ ಮಾರ್ಗವನ್ನು ತೋರಿಸುತ್ತವೆ, ಆದರೆ ವಿರುದ್ಧ ದಿಕ್ಕಿನಿಂದ ಬರುವ ವಾಹನಗಳು ಯು-ಟರ್ನ್ ಮಾಡಬೇಕು. ಇದರಿಂದ ಎದುರುಗಡೆಯಿಂದ ಬರುವ ವಾಹನಗಳಿಗೆ ಮುಂದೆ ಏನಾಗಿದೆ ಎಂದು ನೋಡಲಾಗದೆ ಪ್ರತಿನಿತ್ಯ ಇಲ್ಲಿ ಅಪಘಾತಗಳು ಸಂಭವಿಸುತ್ತಿವೆ. ಬ್ಯಾರಿಕೇಡ್‌ಗಳನ್ನು ನಿರ್ಮಿಸಿದ್ದರೆ ಈ ಅನಾಹುತ ತಪ್ಪಿಸಬಹುದಿತ್ತು. ರಸ್ತೆ, ಥಟ್ಟನೆ ಕೊನೆಗೊಳ್ಳುತ್ತದೆ, ನಂತರ ನೇರವಾಗಿ ತೆರೆದ ಚರಂಡಿ ಇದೆ. ರಸ್ತೆಯ ಕೊನೆಯಲ್ಲಿ ಮತ್ತು ಚರಂಡಿ ಬಳಿ ಎಚ್ಚರಿಕೆ ಫಲಕಗಳಿಲ್ಲದಿರುವುದು ಅಪಾಯವನ್ನುಂಟುಮಾಡುತ್ತದೆ. ಈ ಹಿಂದೆ ದ್ವಿಚಕ್ರವಾಹನ ಸವಾರರೂ ಚರಂಡಿಗೆ ಬಿದ್ದಿದ್ದರು ಎಂದು ಸ್ಥಳೀಯರು ಹೇಳುತ್ತಾರೆ.
ಭರತ ಭಾಟಿ ಅವರ ಸಹೋದರ ದಿಲೀಪ್ ಭಾಟಿ ಸಾವಿಗೆ ಅಧಿಕಾರಿಗಳೇ ಕಾರಣ ಎಂದು ಆರೋಪಿಸಿದ್ದಾರೆ. ನಂತರ ನಾವು ಪ್ರಾಧಿಕಾರದ ವಿರುದ್ಧ ಕ್ರಮಕ್ಕೆ ಒತ್ತಾಯಿಸುತ್ತೇವೆ ಎಂದು ಅವರು ಹೇಳಿದರು. ಏಕೆಂದರೆ ಇಲ್ಲಿ ಸೂಚನಾ ಫಲಕವೇ ಇಲ್ಲ. ಅಲ್ಲದೆ, ಯಾವುದೇ ಬ್ಯಾರಿಕೇಡ್ ಹಾಕಿಲ್ಲ’’ ಎಂದರು. ಅಪಘಾತದ ಬಳಿಕ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದಾರೆ. ಬಳಿಕ ಸ್ಥಳದ ಸುತ್ತ ಬ್ಯಾರಿಕೇಡ್‌ಗಳನ್ನು ಹಾಕಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ